ಚೇಗಣ್ಣೂರು ಹತ್ಯೆ ಪ್ರಕರಣದಲ್ಲಿ ತನ್ನನ್ನು ಆರೋಪಿಯನ್ನಾಗಿ ಮಾಡಲು ಸಂಚು ರೂಪಿಸಲಾಗಿತ್ತು; ಆತ್ಮಕಥೆಯಲ್ಲಿ ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್ ಹೇಳಿಕೆ

ಚೇಗಣ್ಣೂರು ಹತ್ಯೆ ಪ್ರಕರಣದಲ್ಲಿ ತನ್ನನ್ನು ಆರೋಪಿಯನ್ನಾಗಿ ಮಾಡಲು ಸಿಬಿಐ ವಿಶೇಷ ನ್ಯಾಯಾಧೀಶ ಜಸ್ಟೀಸ್ ಕಮಲ್ ಪಾಶ ಸಂಚು ನಡೆಸಿದ್ದರು ಎಂದು ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್ ಹೇಳಿದ್ದಾರೆ. ಈ ಪ್ರಕರಣದಲ್ಲಿ ತನ್ನನ್ನು ಆರೋಪಿಯನ್ನಾಗಿಸುವಂತೆ ಜಸ್ಟೀಸ್ ಕಮಲ್ ಪಾಶ ನಿರ್ದೇಶನ ನೀಡಿದ್ದರು. ಸಿಬಿಐ ವಿಶೇಷ ನ್ಯಾಯಾಲಯದ ಈ ನಿರ್ದೇಶನವನ್ನು ಬಳಿಕ ಹೈಕೋರ್ಟ್ ರದ್ದು ಮಾಡಿದಾಗಲೇ ತನಗೆ ಈ ಸಂಚು ನಡೆದಿರುವುದು ಗೊತ್ತಾಯಿತು ಎಂದವರು ಹೇಳಿದ್ದಾರೆ. ‘ವಿಶ್ವಾಸ ಪೂರ್ವಮ್’ ಎಂಬ ಅವರ ಆತ್ಮಕಥೆ ಬಿಡುಗಡೆಯಾಗಿದ್ದು ಅದರಲ್ಲಿ ಈ ವಿವರಗಳು ಇವೆ.
ಮರ್ಕಝ್ ನ ಅಧೀನದಲ್ಲಿರುವ ಇಮಾಮ್ ರಾಝಿ ಎಜುಕೇಶನಲ್ ಟ್ರಸ್ಟ್ ಅನ್ನು ತಮ್ಮ ವಶಕ್ಕೆ ಪಡೆದುಕೊಳ್ಳಲು ಮುಸ್ಲಿಂ ಲೀಗ್ ನಾಯಕರು ಶ್ರಮಿಸಿದ್ದರು ಎಂದು ಕೂಡ ಕಾಂತಪುರಂ ಅಬೂಬಕರ್ ಮುಸ್ಲಿಯರ್ ಆರೋಪಿಸಿದ್ದಾರೆ. ಅಕ್ರಮವಾಗಿ ರೂಪಿಸಲಾದ ಹೊಸ ಟ್ರಸ್ಟ್ ನಲ್ಲಿ ಕಮಲ್ ಪಾಶ ಕೂಡ ಇದ್ದರು. ವಿಶೇಷ ನ್ಯಾಯಾಧೀಶರಾದ ಕಮಲ್ ಪಾಶ ತನ್ನ ವಿರುದ್ಧ ಅನಗತ್ಯವಾಗಿ ದ್ವೇಷ ತೋರಿದರು.
ರಾಜಕೀಯ ಸಾಂಸ್ಕೃತಿಕ ಮತ್ತು ಮಾಧ್ಯಮ ಕ್ಷೇತ್ರಗಳು ಕೂಡ ಇವರ ಜೊತೆಗೆ ನಿಂತವು. ನನ್ನೆಲ್ಲಾ ವಿರೋಧಿಗಳು ಒಟ್ಟಾದರು. ಚೇಗಣ್ಣೂರು ಹತ್ಯೆಗೆ ಕರೆಕೊಟ್ಟವರು ಬಚಾವಾದರು ಎಂದು ಕಾಂತಪುರಂ ಎಪಿ ಅಬೂಬಕ್ಕರ್ ಮುಸ್ಲಿಯಾರ್ ತನ್ನ ಆತ್ಮಕಥೆಯಲ್ಲಿ ಬರೆದಿದ್ದಾರೆ ಎಂದು ಮೀಡಿಯಾ ಒನ್ ವರದಿ ಮಾಡಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth