'ಅಬ್ ಕಿ ಬಾರ್ ಚಾರ್ ಸೊ ಪಾರ್' ಘೋಷಣೆ ಬಿಜೆಪಿಗೆ ಹಿನ್ನಡೆ ‌ನೀಡಿತು: ಜೆಡಿಯು ಮತ್ತು ಶಿವಸೇನೆ ಶಿಂಧೆ‌ ಬಳಗ ಅಭಿಪ್ರಾಯ - Mahanayaka

‘ಅಬ್ ಕಿ ಬಾರ್ ಚಾರ್ ಸೊ ಪಾರ್’ ಘೋಷಣೆ ಬಿಜೆಪಿಗೆ ಹಿನ್ನಡೆ ‌ನೀಡಿತು: ಜೆಡಿಯು ಮತ್ತು ಶಿವಸೇನೆ ಶಿಂಧೆ‌ ಬಳಗ ಅಭಿಪ್ರಾಯ

13/06/2024

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಎನ್ ಡಿಎ ಹಿನ್ನಡೆಗೆ ಅಬ್ ಕಿ ಬಾರ್ ಚಾರ್ ಸೊ ಪಾರ್ ಎಂಬ ಘೋಷಣೆಯೇ ಕಾರಣ ಎಂಬ ಚರ್ಚೆ ಎನ್ ಡಿಎಯಲ್ಲಿ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. 400 ಸೀಟುಗಳ ಘೋಷಣೆಯೇ ಈ ಬಾರಿಯ ಹಿನ್ನೆಡೆಗೆ ಕಾರಣ ಎಂದು ಜೆಡಿಯು ಮತ್ತು ಶಿವಸೇನೆ ಶಿಂಧೆ ಬಳಗ ಹೇಳಿವೆ.

ಬಿಜೆಪಿಯ ಹಿನ್ನಡೆಗೆ 400 ಸೀಟುಗಳ ಘೋಷಣೆಯೇ ಕಾರಣವಾಗಿದೆ. 400 ಸೀಟು ಲಭಿಸಿದರೆ ನಾವು ಸಂವಿಧಾನವನ್ನು ಬದಲಿಸಬಲ್ಲೆವು ಎಂದು ಬಿಜೆಪಿಯ ಕೆಲವು ನಾಯಕರೇ ಹೇಳಿದ್ದಾರೆ. 400 ಸೀಟ್ ಸಿಕ್ಕರೆ ಸಂವಿಧಾನ ಕೊಡ ಮಾಡುವ ಮೀಸಲಾತಿಯನ್ನು ಇವರು ರದ್ದು ಮಾಡಲಿದ್ದಾರೆ ಎಂದು ವಿಪಕ್ಷಗಳು ಕೂಡ ಆರೋಪಿಸಿವೆ. ಇದರಿಂದಾಗಿ ದಲಿತ ಮತ್ತು ಹಿಂದುಳಿದ ಸಮುದಾಯದ ಓಟುಗಳು ಒಕ್ಕೂಟದ ಕೈ ತಪ್ಪಿದುವು ಎಂದು ಶಿಂದೆ ಬಳಗ ಆರೋಪಿಸಿದೆ . ಈ 400 ಸೀಟುಗಳ ಘೋಷಣೆಯಿಂದ ಅತ್ಯಧಿಕ ಹಿನ್ನಡೆ ಉಂಟಾಗಿರುವುದು ಮಹಾರಾಷ್ಟ್ರದಲ್ಲಿ ಮತ್ತು ಉತ್ತರ ಪ್ರದೇಶದಲ್ಲಿ ಎಂದು ಶಿಂಧೆ ಬಳಗ ಹೇಳಿದೆ. ಇದನ್ನು ಜೆಡಿಯು ಸಮರ್ಥಿಸಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ