ಸಮಾನ ನಾಗರಿಕ ಸಂಹಿತೆಯು ಈಗಲೂ ಬಿಜೆಪಿ ಅಜೆಂಡಾದಲ್ಲಿ ಇದೆ: ಕೇಂದ್ರ ಸಚಿವ ಅರ್ಜುನ್ ರಾಮ್ ಹೇಳಿಕೆಗೆ ಮೈತ್ರಿ ಪಕ್ಷ ಜೆಡಿಯುನಿಂದ ಕೌಂಟರ್; ಕಮಲ ಪಡೆ ಶಾಕ್..! - Mahanayaka

ಸಮಾನ ನಾಗರಿಕ ಸಂಹಿತೆಯು ಈಗಲೂ ಬಿಜೆಪಿ ಅಜೆಂಡಾದಲ್ಲಿ ಇದೆ: ಕೇಂದ್ರ ಸಚಿವ ಅರ್ಜುನ್ ರಾಮ್ ಹೇಳಿಕೆಗೆ ಮೈತ್ರಿ ಪಕ್ಷ ಜೆಡಿಯುನಿಂದ ಕೌಂಟರ್; ಕಮಲ ಪಡೆ ಶಾಕ್..!

13/06/2024

ಸಮಾನ ನಾಗರಿಕ ಸಂಹಿತೆಯು ಈಗಲೂ ಪಕ್ಷದ ಅಜೆಂಡಾದಲ್ಲಿ ಇದೆ ಎಂದು ಬಿಜೆಪಿ ನಾಯಕ ಮತ್ತು ಕೇಂದ್ರ ಸಚಿವರಾದ ಅರ್ಜುನ್ ರಾಮ್ ಮೆಘವಾಲ್ ಹೇಳಿಕೆ ನೀಡಿರುವ ಬೆನ್ನಿಗೆ ಎನ್.ಡಿ.ಎ ಒಳಗೆ ಎಲ್ಲವೂ ಸರಿ ಇಲ್ಲ ಅನ್ನೋದು ಬಹಿರಂಗಕ್ಕೆ ಬಂದಿದೆ. ಇಂತಹ ಯಾವುದೇ ಪ್ರಯತ್ನವು ಸಮಾಲೋಚನೆಯ ಮೂಲಕವೇ ನಡೆಯಬೇಕು ಎಂದು ಎನ್.ಡಿ.ಎ ಭಾಗವಾಗಿರುವ ಜೆಡಿಯುನ ರಾಷ್ಟ್ರೀಯ ಸೆಕ್ರೆಟರಿ ಕೆಸಿ ತ್ಯಾಗಿ ಹೇಳಿದ್ದಾರೆ.


Provided by

ಜೆಡಿಯು ಸಮಾನ ನಾಗರಿಕ ಸಂಹಿತೆಗೆ ವಿರೋಧಿ ಅಲ್ಲವಾದರೂ ಸಮಾಲೋಚನೆಯ ಮೂಲಕವೇ ಇಂತಹ ಕಾಯ್ದೆಯನ್ನು ಜಾರಿಗೆ ತರಬೇಕಾಗಿದೆ ಎಂದವರು ಹೇಳಿದ್ದಾರೆ. ಜೆಡಿಎಸ್ ನ ಈ ನಿಲುವು ಬಿಜೆಪಿಯ ಪಾಲಿಗೆ ಬಿಸಿ ತುಪ್ಪವಾಗಲಿದೆ ಎಂದು ಹೇಳಲಾಗುತ್ತಿದೆ. ಯಾವುದೇ ಪ್ರಮುಖ ತೀರ್ಮಾನ ಕೈಗೊಳ್ಳುವುದಕ್ಕಿಂತ ಮೊದಲು ಅಂಗಪಕ್ಷಗಳ ಜೊತೆ ಸಮಾಲೋಚನೆ ನಡೆಸಬೇಕು ಎಂದು ಬಿಜೆಪಿಗೆ ಈ ಮೂಲಕ ಸೂಚನೆ ನೀಡಲಾಗಿದೆ ಎಂದು ತಜ್ಞರು ಹೇಳುತ್ತಿದ್ದಾರೆ. ಸಮಾನ ನಾಗರಿಕ ಸಂಹಿತೆಯನ್ನು ಜಾರಿ ಮಾಡುತ್ತೇವೆ ಎಂಬುದು ಬಿಜೆಪಿಯ ಈ ಬಾರಿ ಪ್ರಣಾಳಿಕೆಯಲ್ಲಿತ್ತು.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ