ಟಿ20 ವಿಶ್ವಕಪ್ ಆಯೋಜನೆಯಲ್ಲಿ ಅಮೆರಿಕ ಸಕ್ಸಸ್: 250 ಕೋಟಿ ವೆಚ್ಚದ ಸ್ಟೇಡಿಯಂ ತೆರವು..! - Mahanayaka

ಟಿ20 ವಿಶ್ವಕಪ್ ಆಯೋಜನೆಯಲ್ಲಿ ಅಮೆರಿಕ ಸಕ್ಸಸ್: 250 ಕೋಟಿ ವೆಚ್ಚದ ಸ್ಟೇಡಿಯಂ ತೆರವು..!

13/06/2024

ಇದೇ ಮೊದಲ ಬಾರಿಗೆ ಐಸಿಸಿ ಟಿ20 ವಿಶ್ವಕಪ್​ ಪಂದ್ಯಾವಳಿ ಆಯೋಜಿಸಿದ್ದ ಅಮೆರಿಕ ಅದರಲ್ಲಿ ಯಶಸ್ಸು ಕೂಡ ಕಂಡಿದೆ. ಇದಕ್ಕಾಗಿ ನ್ಯೂಯಾರ್ಕ್​ನಲ್ಲಿ 250 ಕೋಟಿ ರೂ. ವೆಚ್ಚದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಂಗಣವನ್ನೇ ನಿರ್ಮಾಣ ಮಾಡಿತ್ತು. ಅಚ್ಚರಿಯ ಬೆಳವಣಿಗೆ ಏನಪ್ಪ ಅಂದ್ರೆ ಇದೀಗ ಆ ಸ್ಟೇಡಿಯಂನ್ನೇ ತೆರವು ಮಾಡಲಾಗುತ್ತಿದೆ.


Provided by

ಟಿ20 ವಿಶ್ವಕಪ್​ಗಾಗಿ ತಾತ್ಕಾಲಿಕವಾಗಿ ಕೇವಲ 4 ತಿಂಗಳಲ್ಲಿ ರೂಪಿಸಿದ್ದ ಡ್ರಾಪ್​ ಪಿಚ್​ ಕ್ರೀಡಾಂಗಣ ತೆರವಾಗಲಿದೆ. ಸ್ಟೇಡಿಯಂ ಹೊರಭಾಗದಲ್ಲಿ ದೊಡ್ಡ ಗಾತ್ರದ ಬುಲ್ಡೋಜರ್​ಗಳು ಕಾರ್ಯಾಚರಣೆಗೆ ಸಿದ್ಧವಾಗಿವೆ. ಇದರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಜೂನ್​ 14ರಂದು ನೆಲಕ್ಕುರುಳಿಸುವ ಕೆಲಸ ಶುರುವಾಗಲಿದೆ.

ನ್ಯೂಯಾರ್ಕ್‌ನ ಲಾಂಗ್ ಐಲ್ಯಾಂಡ್‌ನ ಐಸೆನ್‌ಹೋವರ್ ಪಾರ್ಕ್‌ನಲ್ಲಿ 40 ಎಕರೆ ಪ್ರದೇಶದಲ್ಲಿ ನಾಸೌ ಕೌಂಟಿ ಇಂಟರ್‌ನ್ಯಾಶನಲ್ ಕ್ರಿಕೆಟ್ ಸ್ಟೇಡಿಯಂ 250 ಕೋಟಿ ರೂಪಾಯಿ ವೆಚ್ಚದಲ್ಲಿ ತಲೆ ಎತ್ತುವಂತೆ ಮಾಡಲಾಗಿತ್ತು. ಇದಕ್ಕೆ ಹಿಡಿದ ಸಮಯ ಕೇವಲ ನಾಲ್ಕು ತಿಂಗಳು. ಅತ್ಯಂತ ವೇಗವಾಗಿ ಅಂತಾರಾಷ್ಟ್ರೀಯ ಕ್ರೀಡಾಂಗಣವನ್ನು ರೂಪಿಸಲಾಗಿತ್ತು. ಆಸ್ಟ್ರೇಲಿಯಾದಲ್ಲಿ ನಿರ್ಮಿಸಲಾಗಿದ್ದ ಡ್ರಾಪ್​ ಪಿಚ್​ಗಳನ್ನು ಇಲ್ಲಿ ತಂದು ಆಳವಡಿಸಲಾಗಿತ್ತು.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ