ಕಾಫಿನಾಡನ್ನು ನಡುಗಿಸಿದ್ದ ಭೈರನನ್ನು ಹಿಡಿದ ಅಭಿಮನ್ಯು ಆ್ಯಂಡ್ ಟೀಮ್ - Mahanayaka

ಕಾಫಿನಾಡನ್ನು ನಡುಗಿಸಿದ್ದ ಭೈರನನ್ನು ಹಿಡಿದ ಅಭಿಮನ್ಯು ಆ್ಯಂಡ್ ಟೀಮ್

mudigere bhaira
11/12/2022

ಚಿಕ್ಕಮಗಳೂರು: ಕಾಡಾನೆ ಮೂಡಿಗೆರೆ ಭೈರ ಅನ್ನೋ ಹೆಸರು ಕೇಳಿದ್ರೆ, ಕಾಫಿನಾಡು ಜನರು ಗಡಗಡ ನಡುಗುತ್ತಿದ್ದರು. ಹಲವು ವರ್ಷಗಳಿಂದ ಭಾರೀ ಉಪಟಳ ನೀಡುತ್ತಿದ್ದ ಭೈರ ಇಬ್ಬರನ್ನು ಬಲಿ ಪಡೆದಿದ್ದ. ಇದೀಗ  ಸಾಕಾನೆ ಅಭಿಮನ್ಯು, ಭೀಮ, ಪ್ರಶಾಂತ, ಮಹೇಂದ್ರ, ಹರ್ಷ ಭೈರನನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದೆ.

ಕಳೆದ ಒಂದು ವಾರದಿಂದ ಅರಣ್ಯ ಇಲಾಖೆಯಿಂದ  ಕಾರ್ಯಾಚರಣೆ ನಡೆಯುತ್ತಿತ್ತು. ಅರಣ್ಯ ಇಲಾಖೆಯು ಮೂರು ಆನೆಗಳನ್ನು ಹಿಡಿಯಲು ಅನುಮತಿ ನೀಡಿತ್ತು. ಈಗಾಗಲೇ ಎರಡು ಆನೆಗಳನ್ನು ಹಿಡಿಯಲಾಗಿತ್ತು. ಇದೀಗ ಪುಂಡಾನೆ ಭೈರನನ್ನು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಊರುಬಗೆ ಹೊಸಳ್ಳಿಯಲ್ಲಿ ಸೆರೆ ಹಿಡಿಯಲಾಗಿದೆ.

ಇಂದು ತುಂತುರು ಮಳೆಯ ನಡುವೆಯೂ ಕಾರ್ಯಾಚರಣೆ ಮುಂದುವರೆದಿದ್ದು, ಈ ವೇಳೆ ಬೈರನನ್ನು ಸಾಕಾನೆಗಳು ಅಡ್ಡ ಹಾಕಿವೆ.  ಎಷ್ಟೇ ಪ್ರಯತ್ನ ಪಟ್ಟರೂ ಭೈರ ಲಾರಿ ಹತ್ತಲು ಕೇಳದೇ ತೀವ್ರವಾಗಿ ಸತಾಯಿಸಿದ್ದ. ಇನ್ನೊಂದೆಡೆ ಭೈರನನ್ನು ಲಾರಿ ಹತ್ತಿಸದೇ ಬಿಡೆವು ಅನ್ನೋ ಛಲದಿಂದ ಮುಂದುವರಿದ ಸಾಕಾನೆಗಳು ಕೊನೆಗೂ ಲಾರಿ ಹತ್ತಿಸಿವೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ