ತನ್ನನ್ನು ಕಿಡ್ನ್ಯಾಪ್ ಮಾಡಿದ ಕೇಸನ್ನು ತಾನೇ ವಾದಿಸಿ ಗೆದ್ದ ಯುವ ವಕೀಲ.! - Mahanayaka
8:02 PM Thursday 14 - November 2024

ತನ್ನನ್ನು ಕಿಡ್ನ್ಯಾಪ್ ಮಾಡಿದ ಕೇಸನ್ನು ತಾನೇ ವಾದಿಸಿ ಗೆದ್ದ ಯುವ ವಕೀಲ.!

23/09/2024

ಉತ್ತರ ಪ್ರದೇಶದ ಆಗ್ರಾದ ಯುವ ವಕೀಲರೊಬ್ಬರು 17 ವರ್ಷಗಳ ಹಿಂದೆ ನಡೆದಿದ್ದ ತನ್ನದೇ ಅಪಹರಣ ಪ್ರಕರಣದ ಕುರಿತು ವಾದಗಳನ್ನು ಮಂಡಿಸಿ ಗಮನ ಸೆಳೆದಿದ್ದಾರೆ. ಇದರಲ್ಲಿ ಇವರೇ ಸ್ವತಃ ಬಲಿಪಶು ಆಗಿದ್ದರು.

ಆಗ್ರಾದ ಹರ್ಷ ಗರ್ಗ್ ಅವರನ್ನು 2007ರ ಫೆಬ್ರವರಿಯಲ್ಲಿ ಅಪಹರಿಸಲಾಗಿತ್ತು. ಇವರು ವಿಚಾರಣೆಯ ಸಮಯದಲ್ಲಿ ಬೆಳೆದು ವಕೀಲರಾದರು. ಅಲ್ಲದೇ ಈ ವರ್ಷದ ಜೂನ್ ನಲ್ಲಿ ನಗರದ ವಿಶೇಷ ನ್ಯಾಯಾಧೀಶರ ನ್ಯಾಯಾಲಯದಲ್ಲಿ ಪ್ರಾಸಿಕ್ಯೂಷನ್ ನೊಂದಿಗೆ ಅಂತಿಮ ವಾದಗಳನ್ನು ಮಂಡಿಸಿದರು.

ಕೊನೆಯ ವಾದಗಳ ನಂತರ, ನ್ಯಾಯಾಲಯವು ಆರೋಪಿಗಳಾದ ಗುಡ್ಡನ್ ಕಚ್ಚಿ, ರಾಜೇಶ್ ಶರ್ಮಾ, ರಾಜ್ಕುಮಾರ್, ಫತೇಹ್ ಸಿಂಗ್ ಅಲಿಯಾಸ್ ಚಿಗ್ಗಾ, ಅಮರ್ ಸಿಂಗ್, ಬಲ್ವೀರ್, ರಾಮ್ಪ್ರಕಾಶ್ ಮತ್ತು ಭಿಕಮ್ ಅಲಿಯಾಸ್ ಭಿಕಾರಿ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿತು.
2007ರ ಫೆಬ್ರವರಿ 10ರಂದು, ಖೇರಾಘರ್ ಪಟ್ಟಣದ ಅವಿನಾಶ್ ಗರ್ಗ್ ಎಂಬಾತ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದ. ಆಗ 7 ವರ್ಷದ ಹರ್ಷ್ ಗರ್ಹ್ ತನ್ನ ತಂದೆ ರವಿ ಗರ್ಗ್ ಅವರೊಂದಿಗೆ ವೈದ್ಯಕೀಯ ಅಂಗಡಿಯಲ್ಲಿ ಕುಳಿತಿದ್ದಾಗ ಆ ದಿನ ಸಂಜೆ 7 ಗಂಟೆ ಸುಮಾರಿಗೆ, ರಾಜಸ್ಥಾನ ನೋಂದಣಿ ಸಂಖ್ಯೆ ಹೊಂದಿರುವ ನಾಲ್ಕು ಚಕ್ರ ವಾಹನವು ಅವರ ಬಳಿಗೆ ಬಂದಿತ್ತು.

 




ಕಾರು ನಿಂತಾಗ ಗುಡ್ಡನ್ ಕಚ್ಚಿ ತನ್ನ ಸಹಚರರೊಂದಿಗೆ ವಾಹನದಿಂದ ಕೆಳಗಿಳಿದು ತನ್ನ ತಂದೆ ರವಿ ಗರ್ಗ್ ರನ್ನು ಗನ್ ಹಿಡಿದುಕೊಂಡು ಹರ್ಷನನ್ನು ಅಪಹರಿಸಿದ್ದ. ಎಫ್ಐಆರ್ ಪ್ರಕಾರ, ತಂದೆ ರವಿ ಪ್ರತಿಭಟಿಸಿದಾಗ ದುಷ್ಕರ್ಮಿಗಳು ಆತನ ಮೇಲೆ ಗುಂಡು ಹಾರಿಸಿ ಗಾಯಗೊಳಿಸಿದ್ದರು‌.

ನಂತರ ಅಪಹರಣಕಾರರು ಹರ್ಷ್ ಸುರಕ್ಷಿತವಾಗಿ ಮನೆಗೆ ಮರಳಬೇಕಂದ್ರೆ ನಮಗೆ 55 ಲಕ್ಷ ರೂಪಾಯಿ ಕೊಡಬೇಕೆಂದು ಬ್ಲ್ಯಾಕ್ ‌ಮೇಲ್ ಮಾಡಿದ್ದರು. 2007ರ ಮಾರ್ಚ್ 6ರಂದು ಇಬ್ಬರು ಆರೋಪಿಗಳಾದ ಭೀಮ್ ಸಿಂಗ್ ಮತ್ತು ರಾಮ್ ಪ್ರಕಾಶ್ ಆತನನ್ನು ಕಣಿವೆಗಳಿಂದ ಬೇರೆ ಸ್ಥಳಕ್ಕೆ ಕರೆದೊಯ್ಯುತ್ತಿದ್ದಾಗ ಹರ್ಷನು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ.

ಆವಾಗ ಇಬ್ಬರೂ ಆರೋಪಿಗಳು ಆತನನ್ನು ಬೆನ್ನಟ್ಟಿದ್ದರು. ಆದರೆ ಪೊಲೀಸ್ ಕಾವಲು ಕಂಡ ನಂತರ ಸ್ಥಳದಿಂದ ಪರಾರಿಯಾಗಿದ್ದಾರೆ. ನಂತರ, ಪೊಲೀಸರು ಗುಡ್ಡನ್ ಕಚ್ಚಿ, ರಾಜ್ಕುಮಾರ್, ಫತೇಹ್ ಸಿಂಗ್, ಅಮರ್ ಸಿಂಗ್, ಬಲ್ವೀರ್, ರಾಜೇಶ್ ಶರ್ಮಾ, ಭೀಮ್ ಸಿಂಗ್ ಮತ್ತು ರಾಮ್ ಪ್ರಕಾಶ್ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು.

ಈ ವಿಚಾರಣೆಯು 2014ರಲ್ಲಿ ಆರಂಭವಾಯಿತು. 2018ರವರೆಗೂ ಹರ್ಷನ ತಂದೆ ರವಿ ಕೂಡಾ ಹೋರಾಡಿದರು. ಅವರು ಕೂಡ ವಕೀಲರಾಗಿದ್ದಾರೆ.
ಹರ್ಷನು ನ್ಯಾಯಾಲಯದ ವಿಚಾರಣೆಗಳಿಗೆ ಹಾಜರಾಗುತ್ತಿದ್ದ. ಮತ್ತು ವಿಚಾರಣೆಯ ಸಮಯದಲ್ಲಿ ಅವನು ಸ್ವತಃ ವಕೀಲರಾಗಲು ನಿರ್ಧರಿಸಿದ.

ಪದವಿ ಪಡೆದ ನಂತರ ಹರ್ಷ್ 2022ರಲ್ಲಿ ಆಗ್ರಾ ಕಾಲೇಜಿನಿಂದ ಎಲ್. ಎಲ್. ಬಿ. ಯನ್ನು ಪೂರ್ಣಗೊಳಿಸಿ ಮುಂದಿನ ವರ್ಷ ಬಾರ್ ಕೌನ್ಸಿಲ್ ನಲ್ಲಿ ನೋಂದಾಯಿಸಿಕೊಂಡ.

ಹರ್ಷ್ ಪ್ರಾಸಿಕ್ಯೂಷನ್ ತಂಡವನ್ನು ಸೇರಿಕೊಂಡು ಜೂನ್ 2024 ರಲ್ಲಿ ಕೇಳಿದ ಅಂತಿಮ ವಾದಗಳನ್ನು ಸ್ವತಃ ನೀಡಿದ. ಸೆಪ್ಟೆಂಬರ್ 17ರಂದು ವಿಶೇಷ ನ್ಯಾಯಾಧೀಶರ ನ್ಯಾಯಾಲಯವು ಅಪಹರಣ ಪ್ರಕರಣದಲ್ಲಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿತು.

14 ಆರೋಪಿಗಳಲ್ಲಿ ಎಂಟು ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದ್ದರೆ, ಅವರಲ್ಲಿ ನಾಲ್ವರು-ದಲೇಲ್ ಸಿಂಗ್, ಲಖನ್ ಸಿಂಗ್, ರಾಜೇಂದ್ರ ಮತ್ತು ರಮೇಶ್ ಅವರನ್ನು ಸಾಕ್ಷಿಗಳು ಮತ್ತು ಸಾಕ್ಷ್ಯಗಳ ಕೊರತೆಯಿಂದಾಗಿ ಖುಲಾಸೆಗೊಳಿಸಲಾಯಿತು. ಇತರ ಇಬ್ಬರು ಆರೋಪಿಗಳಾದ ಬಚ್ಚು ಮತ್ತು ನಿರಂಜನ್ ವಿಚಾರಣೆಯ ಸಮಯದಲ್ಲಿ ಸಾವನ್ನಪ್ಪಿದ್ದಾರೆ.

ಹರ್ಷ್ ಈಗ ಯುಪಿ ಪ್ರಾಂತೀಯ ನಾಗರಿಕ ಸೇವಾ ನ್ಯಾಯಾಂಗ ಪರೀಕ್ಷೆಗೆ (ಪಿಸಿಎಸ್-ಜೆ) ತಯಾರಿ ನಡೆಸುತ್ತಿದ್ದು, ಇದು ಕಾನೂನು ಪದವೀಧರರನ್ನು ಅಧೀನ ನ್ಯಾಯಾಂಗ ಸದಸ್ಯರಾಗಿ ನೇಮಿಸುವ ಪ್ರವೇಶ ಮಟ್ಟದ ಪರೀಕ್ಷೆಯಾಗಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ