ಕಾಫಿನಾಡಲ್ಲಿ ಕಾಳಸಂತೆಯಲ್ಲಿ ದನದ ಮಾಂಸ ಮಾರಾಟ ಆರೋಪ!

ಕೊಟ್ಟಿಗೆಹಾರ: ಕಾಫಿನಾಡಲ್ಲಿ ಕಾಳಸಂತೆಯಲ್ಲಿ ದನದ ಮಾಂಸ ಮಾರಾಟ ಮಾಡಿರುವ ಆರೋಪ ಕೇಳಿ ಬಂದಿದೆ. ಸಂತೆಯಲ್ಲಿ ಸ್ವೀಟ್ ಅಂಗಡಿ ಹಾಕಿ ದನದ ಮಾಂಸ ಮಾರಾಟ ಮಾರಾಟ ಮಾಡಲಾಗುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ.
ಅಸ್ಸಾಂ ನಿಂದ ಬಂದು ಸಂತೆ ಹಾಕಿ ಸ್ವೀಟ್ ಜೊತೆ ದನದ ಮಾಂಸ ಮಾರಾಟ ಮಾಡಲಾಗುತ್ತಿದೆ, ಅವರು ಅಸ್ಸಾಂನವರಲ್ಲ, ಅಕ್ರಮ ಬಾಂಗ್ಲಾ ನಿವಾಸಿಗಳು ಅಂತ ಸ್ಥಳೀಯರು ಆರೋಪಿಸಿದ್ದಾರೆ.
ಮೂಡಿಗೆರೆ ತಾಲೂಕಿನ ಬಣಕಲ್ ಗ್ರಾಮದಲ್ಲಿ ಘಟನೆ ನಡೆದಿದೆ. ಸ್ವೀಟ್ ಡಬ್ಬದ ಪಕ್ಕದಲ್ಲಿ ಬ್ಲಾಕ್ ಬ್ಯಾಗ್, ಆ ಬ್ಯಾಗಲ್ಲಿ ದನದ ಮಾಂಸ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಲಾಗಿದೆ.
ಸ್ಥಳೀಯರು ಅಂಗಡಿ ಕ್ಲೋಸ್ ಮಾಡಿಸಿದ್ದು, ದನದ ಮಾಂಸದ ಸಮೇತ ಮಾರಾಟಗಾರರು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕಾಫಿ ತೋಟದ ಕೆಲಸಕ್ಕೆ ಬಂದವರು ಕ್ರಮೇಣ ವ್ಯಾಪಾರ ಆರಂಭಿಸಿದ್ದರು ಎನ್ನಲಾಗಿದೆ.
ಬಣಕಲ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ದನದ ಮಾಂಸ ಸಹಿತ ಮಾರಾಟಗಾರರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಘಟನೆಯ ಸತ್ಯಾಸತ್ಯತೆ ಪೊಲೀಸರ ತನಿಖೆಯಿಂದ ತಿಳಿದು ಬರಬೇಕಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: