ಮೋದಿ-ಟ್ರಂಪ್ ನಾಯಕತ್ವವನ್ನು ನಿರಾಕರಿಸಿದ ಅಮೆರಿಕದ ಭಾರತೀಯರು - Mahanayaka
10:12 PM Wednesday 11 - September 2024

ಮೋದಿ-ಟ್ರಂಪ್ ನಾಯಕತ್ವವನ್ನು ನಿರಾಕರಿಸಿದ ಅಮೆರಿಕದ ಭಾರತೀಯರು

05/11/2020

ಅಮೆರಿಕ ಅಧ್ಯಕ್ಷ ಚುನಾವಣೆಗೂ ಮೊದಲು ಅಮೆರಿಕದಲ್ಲಿ ಹೌಡಿ ಮೋದಿ ಮೂಲಕ ಭಾರೀ ಡೊನಾಲ್ಡ್ ಟ್ರಂಪ್ ಪರ ಭಾರೀ ಪ್ರಚಾರ ನಡೆಸಲಾಗಿತ್ತು. ಟ್ರಂಪ್ ಗೆ ಮೋದಿ ಬೆಂಬಲ ಎಂದು ಅಮೆರಿಕದಲ್ಲಿ ಬಿಂಬಿಸಲಾಗಿತ್ತು. ಅದಲ್ಲದೇ, ಭಾರತದಲ್ಲಿ ನಮಸ್ತೆ ಟ್ರಂಪ್ ಕಾರ್ಯಕ್ರಮದ ಮೂಲಕ ಟ್ರಂಪ್ ಗೆ ಹೆಚ್ಚಿನ ಒತ್ತು ನೀಡಲಾಗಿತ್ತು. ಆದರೆ ಪ್ರಧಾನಿ ಮೋದಿ ನಾಯಕತ್ವವನ್ನು ಅಮೆರಿಕದ ಭಾರತೀಯ ನಾಗರಿಕರು ತಿರಸ್ಕರಿಸಿದ್ದಾರೆ.

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬೀಡೆನ್ ಅವರು 264 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿ ಬಹುಮತದತ್ತ ದಾಪುಗಾಲು ಹಾಕಿದ್ದರೆ, ಟ್ರಂಪ್ 214 ಕ್ಷೇತ್ರಗಳಲ್ಲಿ ಮಾತ್ರವೇ  ಗೆಲುವು ಪಡೆದುಕೊಂಡಿದ್ದಾರೆ.  ಪ್ರಧಾನಿ ಮೋದಿಯವರ ಪ್ರಚಾರದ ಹೊರತಾಗಿಯೂ ಅಮೆರಿಕದ ಭಾರತೀಯರು ಟ್ರಂಪ್ ಹಾಗೂ ಪ್ರಧಾನಿ ನರೇಂದ್ರ ಮೋದಿ ನಾಯಕತ್ವವನ್ನು ನಿರಾಕರಿಸಿದ್ದಾರೆ.

ಟ್ರಂಪ್ ತನ್ನ ಚುನಾವಣಾ ಭಾಷಣದಲ್ಲಿ ಭಾರತವನ್ನು ಹೊಲಸು, ಕೊಳಕು ಎಂದು ನಿಂದಿಸುತ್ತಿದ್ದರೆ, ಇತ್ತ ಕೆಲವು ಸ್ವಯಂ ಘೋಷಿತ ದೇಶ ಭಕ್ತ ಪಡೆಗಳು ಟ್ರಂಪ್ ಗೆಲುವಿಗಾಗಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದರು. ಆದರೆ, ಅಮೆರಿಕದಲ್ಲಿದ್ದ ಭಾರತೀಯರು ಟ್ರಂಪ್ ನ ಅಹಂಕಾರಕ್ಕೆ ತಕ್ಕ ಪಾಠ ಕಲಿಸಿದ್ದಾರೆ.


Provided by

ಇತ್ತೀಚಿನ ಸುದ್ದಿ