ಸಾಮೂಹಿಕ ಆತ್ಮಹತ್ಯೆಯ ವೇಳೆ ತಪ್ಪಿಸಿಕೊಂಡ ಯುವತಿ | ಇಲ್ಲೊಂದು ಮನಕರಗುವ ಘಟನೆ - Mahanayaka

ಸಾಮೂಹಿಕ ಆತ್ಮಹತ್ಯೆಯ ವೇಳೆ ತಪ್ಪಿಸಿಕೊಂಡ ಯುವತಿ | ಇಲ್ಲೊಂದು ಮನಕರಗುವ ಘಟನೆ

05/11/2020

ಕೊಯಮತ್ತೂರು: ತಂದೆ, ತಾಯಿ ಹಾಗೂ ಇಬ್ಬರು ಪುತ್ರಿಯರು ಸಾಮೂಹಿಕ ಆತ್ಮಹತ್ಯೆಗೆ ನಿರ್ಧರಿಸಿದ್ದು, ಕೊನೆಯ ಕ್ಷಣದಲ್ಲಿ 19 ವರ್ಷದ ಮಗಳು ಸಾಯಲು ಹೆದರಿ, ಮನೆಯಿಂದ ಓಡಿ ಹೋಗಿ ನೆರೆಹೊರೆಯವರಿಗೆ ಸುದ್ದಿ ಮುಟ್ಟಿಸಿದ, ಮನಕರಗುವ ಘಟನೆಯೊಂದು ಇಲ್ಲಿನ ಮಾರುತಮಲೈ ಎಂಬಲ್ಲಿ ನಡೆದಿದೆ.

50 ವರ್ಷದ ಶಿವಮುರುಗನ್ ಎಂಬವರು ಹಾಲಿನ ವ್ಯಾಪಾರಿಯಾಗಿದ್ದರು. ಲಾಕ್ ಡೌನ್ ಬಳಿಕ ಸಂಭವಿಸಿದ ಭಾರೀ ನಷ್ಟದಿಂದಾಗಿ ಕುಟುಂಬ ನಿರ್ವಹಣೆ ಸಾಧ್ಯವಾಗದೇ ಕುಟುಂಬದೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದರು. ಇದೇ ಸಂದರ್ಭದಲ್ಲಿ ತಂದೆ, ತಾಯಿ ಮತ್ತು ಇನ್ನೋರ್ವಗಳು ಪುತ್ರಿ ಬಾಳೆ ಹಣ್ಣಿನಲ್ಲಿ ವಿಷ ಬೆರೆಸಿ ತಿಂದಿದ್ದು, ಕೊನೆಯ ಪುತ್ರಿ ಈ ವೇಳೆ ಭಯದಿಂದ ಹೆದರಿ ಓಡಿ ಹೋಗಿದ್ದಾಳೆ. ಇದರಿಂದಾಗಿ ತಂದೆ, ತಾಯಿ ಹಾಗೂ ಇನ್ನೋರ್ವಳು ಪುತ್ರಿ ಸಾವನ್ನಪ್ಪಿದ್ದು, 19 ವರ್ಷದ ಪುತ್ರಿ ಸಾವಿನಿಂದ ಪಾರಾಗಿದ್ದಾಳೆ.

ಆತ್ಮಹತ್ಯೆಯ ನಿರ್ಧಾರದಿಂದ ಹಿಂದಕ್ಕೆ ಸರಿದು, ಹೊರಗೆ ಓಡಿ ಹೋದ ಆಕೆ ತಕ್ಷಣವೇ ಸಮೀಪದ ಮನೆಯವರಿಗೆ ವಿಚಾರ ಮುಟ್ಟಿಸಿದ್ದಾಳೆ. ಈ ಸಂದರ್ಭದಲ್ಲಿ ಘಟನೆ ಬೆಳಕಿಗೆ ಬಂದಿದೆ.


Provided by

ಇತ್ತೀಚಿನ ಸುದ್ದಿ