ಅಂಬೇಡ್ಕರ್ ಅವರ ಹೋರಾಟದ ಫಲವಾಗಿ ಮಾದಿಗ ಸಮಾಜಕ್ಕೆ ರಾಜಕೀಯ ಅಧಿಕಾರ ಸಿಕ್ಕಿದೆ | ಶಾಸಕ ಮಾಡಾಳ್ ವಿರೂಪಾಕ್ಷಪ್ಪ - Mahanayaka

ಅಂಬೇಡ್ಕರ್ ಅವರ ಹೋರಾಟದ ಫಲವಾಗಿ ಮಾದಿಗ ಸಮಾಜಕ್ಕೆ ರಾಜಕೀಯ ಅಧಿಕಾರ ಸಿಕ್ಕಿದೆ | ಶಾಸಕ ಮಾಡಾಳ್ ವಿರೂಪಾಕ್ಷಪ್ಪ

05/11/2020

ಚನ್ನಗಿರಿ: ಡಾ .ಬಿಆರ್ ಅಂಬೇಡ್ಕರ್ ರವರು  ಹೋರಾಟದ ಫಲವಾಗಿ  ಮಾದಿಗ ಸಮಾಜಕ್ಕೆ ಮೀಸಲಾತಿ ಸಿಕ್ಕಿದೆ, ಈ ಸಮಾಜ ಇನ್ನೂ ಅತ್ಯಂತ ಉನ್ನತ ಅಧಿಕಾರಗಳನ್ನು ಪಡೆದು ಸಮಾಜದಲ್ಲಿ ಮುಂಚೂಣಿಯಲ್ಲಿರಬೇಕೆನ್ನುವುದು ನನ್ನ ಬಯಕೆ ಎಂದು ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪುರಸಭೆಯ ನೂತನ ಅಧ್ಯಕ್ಷರು ಹಾಗೂ ಸದಸ್ಯರುಗಳಿಗೆ ಶುಭಾಶಯ ಕೋರಿ ಮಾತನಾಡಿದ ಅವರು,  ಶೋಷಿತ ಸಮಾಜವಾದ ಮಾದಿಗ ಜನಾಂಗಕ್ಕೆ ಚನ್ನಗಿರಿ ಪಟ್ಟಣದಲ್ಲಿ ರಾಜಕೀಯ ಅಧಿಕಾರ ಸ್ಥಾನ ಮಾನಗಳು ದೊರೆತಿರಲಿಲ್ಲ. ಇಂದು ಡಾ .ಬಿಆರ್ ಅಂಬೇಡ್ಕರ್ ರವರ ಹೋರಾಟದ ಫಲವಾಗಿ  ಮಾದಿಗ ಸಮಾಜಕ್ಕೆ ಇಂದು ಪುರಸಭೆ ಅಧ್ಯಕ್ಷೆ ಸ್ಥಾನದ ಅಧಿಕಾರ ಸಿಕ್ಕಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.

ಕಟ್ಟ ಕಡೆಯ ವ್ಯಕ್ತಿಗೂ ಅಧಿಕಾರ ಸಿಗಬೇಕೆಂದು ಅಂದು ಬಾಬಾ ಸಾಹೇಬ್ ಡಾ .ಬಿ.ಆರ್ .ಅಂಬೇಡ್ಕರ್ ಹೋರಾಡಿದ್ದರು.  ಇದರಿ ಫಲವಾಗಿಯೇ ಶೋಷಿತ  ಮಾದಿಗ ಜನಾಂಗದ ಮಹಿಳೆಯಾದ ಲಕ್ಷಿದೇವಮ್ಮ ನರಸಿಂಹಪ್ಪ ಪುರಸಭೆ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ ಎಂದು ವಿರೂಪಾಕ್ಷಪ್ಪ ಹೇಳಿದರು.

ಶೋಷಿತ ಮಾದಿಗ ಸಮಾಜಕ್ಕೆ ರಾಜಕೀಯ ಅಧಿಕಾರ ಸಿಗಬೇಕೆನ್ನುವ ನಿಟ್ಟಿನಲ್ಲಿ ಪುರಸಭೆಯ ಅಧ್ಯಕ್ಷೆಯಾಗಿ .ತಾಲೂಕ್ ಪಂಚಾಯಿತಿ ಉಪಾಧ್ಯಕ್ಷರಾಗಿ ಮತ್ತು ಬಗರ್ ಹುಕ್ಕುಂ ಕಮಿಟಿ ಸದಸ್ಯರನ್ನಾಗಿ ಹಾಗೂ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರನ್ನ ಈ ಎಲ್ಲಾ ಅಧಿಕಾರಗಳನ್ನು ಮಾದಿಗ ಸಮುದಾಯಕ್ಕೆ ನೀಡಿದ್ದೇನೆ. ಇದು ನನ್ನ ಬಯಕೆ ಆಗಿದ್ದು, ಈಡೇರಿಸಿದ್ದೇನೆ . ಇನ್ನೂ ಮುಂದಾದರೂ ಈ ಸಮಾಜ ಒಗ್ಗಟ್ಟಾಗಬೇಕು. ಸರ್ಕಾರದ ಯಾವುದೇ ಸೌಲಭ್ಯಗಳಿರಬಹುದು ಅವುಗಳನ್ನು ಪಡೆದು ಕೊಳ್ಳಬೇಕು. ಈ ಸಮಾಜವು ಉನ್ನತ ಮಟ್ಟಕ್ಕೆ ಬೆಳೆಯಬೇಕು. ಇನ್ನೂ ಅನೇಕ ರಾಜಕೀಯ ಅಧಿಕಾರಗಳನ್ನು ಪಡೆಯಬೇಕು ಎಂದರು.

ಈ ಸಂದರ್ಭದಲ್ಲಿ ಬಿಜೆಪಿಯ ಪಕ್ಷದ ತಾಲೂಕಿನ ಯುವ ಮುಖಂಡರಾದ ಯುವಕರ ಕಣ್ಮಣಿಯಾಗಿರುವ ಮಾಡಾಳು ಮಲ್ಲಿಕಾರ್ಜುನ್, ನೂತನ ಪುರಸಭೆ ಅಧ್ಯಕ್ಷೆಯಾದ ಲಕ್ಷ್ಮೀದೇವಮ್ಮ ನರಸಿಂಹಪ್ಪ, ಬಗರ್ ಹುಕ್ಕುಂ ಕಮಿಟಿ ಸದಸ್ಯರಾದ ಹೆಚ್.ಕೃಷ್ಣಪ್ಪ ನಲ್ಲೂರು ,  ತಾ.ಪಂ. ಉಪಾಧ್ಯಕ್ಷೆಯಾದ ಚಂದ್ರಮ್ಮ ರುದ್ರಪ್ಪ, ಕೋಗಲೂರು ಬಿಜೆಪಿ ಮುಖಂಡರಾದ ಜಗದೀಶ್ ಗೌಡ , ರಾಜಶೇಖರಪ್ಪ, ಸೇರಿದಂತೆ ನೂರಾರು ಬಿಜೆಪಿ ಪಕ್ಷದ ಮುಖಂಡರುಗಳು ಹಾಗೂ ಮಾದಿಗ ಸಮುದಾಯದ ಮುಖಂಡರುಗಳು ಉಪಸ್ಥಿತರಿದ್ದರು.

 

ವರದಿ: ಕೋಗಲೂರು ಕುಮಾರ್

ಇತ್ತೀಚಿನ ಸುದ್ದಿ