ಆ್ಯಂಬುಲೆನ್ಸ್ ಗೆ ದಾರಿ ಮಾಡಿಕೊಡುತ್ತಾ 2 ಕಿ.ಮೀ. ದೂರ ಓಡಿದ ಟ್ರಾಫಿಕ್ ಪೊಲೀಸ್ - Mahanayaka

ಆ್ಯಂಬುಲೆನ್ಸ್ ಗೆ ದಾರಿ ಮಾಡಿಕೊಡುತ್ತಾ 2 ಕಿ.ಮೀ. ದೂರ ಓಡಿದ ಟ್ರಾಫಿಕ್ ಪೊಲೀಸ್

05/11/2020

ಆ್ಯಂಬುಲೆನ್ಸ್ ಗೆ ದಾರಿ ಮಾಡಿಕೊಡಲು ಟ್ರಾಫಿಕ್ ಜಾಮ್ ನಲ್ಲಿ ಸುಮಾರು 2 ಕಿ.ಮೀ. ವರೆಗೆ ಟ್ರಾಫಿಕ್ ಪೊಲೀಸ್ ಪೇದೆಯೊಬ್ಬರು ಓಡಿದ್ದು, ಎಲ್ಲರ ಮೆಚ್ಚುಗೆಗೆ ಕಾರಣರಾಗಿದ್ದಾರೆ.  ಈ ಘಟನೆ ಹೈದರಾಬಾದ್ ನ ಅಬಿಡ್ಸ್ ಜಿಪಿಒ ಜಂಕ್ಷನ್ ಬಳಿಯಲ್ಲಿ ನಡೆದಿದೆ.


Provided by

ಈ ಪೇದೆಯನ್ನು ಜಿ.ಬಾಬ್ಜಿ ಎಂದು ಗುರುತಿಸಲಾಗಿದೆ. ತಮ್ಮ ಕರ್ತವ್ಯವನ್ನು ಯಶಸ್ವಿಯಾಗಿ ನಿಭಾಯಿಸಿದ ಅವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇಡೀ ರಸ್ತೆಯುದ್ಧಕ್ಕೂ ಓಡಿದ ಅವರು ಸುಮಾರು 2 ಕಿ.ಮೀ.ವರೆಗೆ ಟ್ರಾಫಿಕ್ ಕ್ಲೀಯರ್ ಮಾಡುತ್ತಲೇ, ಓಡಿದರು. ಅಡ್ಡಲಾಗಿ ನಿಲ್ಲಿಸಿದ್ದ ವಾಹನಗಳನ್ನು ಬದಿಗೆ ಸರಿಸಿ ಆ್ಯಂಬುಲೆನ್ಸ್ ಗೆ ದಾರಿ ಮಾಡಿಕೊಟ್ಟರು.

ಇವರು ಹೀಗೆ ಟ್ರಾಫಿಕ್ ಕ್ಲೀಯರ್ ಮಾಡುತ್ತಾ, ತಮ್ಮ ಠಾಣಾ ವ್ಯಾಪ್ತಿಯನ್ನು ಮೀರಿ ಹೋಗಿದ್ದರು.  ಇನ್ನೂ ಈ ಬಗ್ಗೆ ಮಾತನಾಡಿ ಪೇದೆ ಬಾಬ್ಜಿ, ಆ್ಯಂಬುಲೆನ್ಸ್ ನಲ್ಲಿ ಇದ್ದ ರೋಗಿಯ ಪರಿಚಯ ನನಗಿಲ್ಲ. ಆದರೂ ಒಂದು ಜೀವ ಕಾಪಾಡಲೇ ಬೇಕು ಎಂದು ನಾನು ಪ್ರಯತ್ನ ಪಟ್ಟೆ ಎಂದು ಹೇಳಿದರು.


Provided by

ಇತ್ತೀಚಿನ ಸುದ್ದಿ