ವಿಶಾಲ ಬೌದ್ಧ ಧಮ್ಮ ಪರಿಷತ್ | ಧಮ್ಮಚಕ್ರ ಪರಿವತ೯ನೆ ದಿನ , ಶ್ರಾಮಣೇರ ಪಬ್ಬಜ್ಜ ಪ್ರಶಿಕ್ಷಣ ಶಿಬಿರ ಸಮಾರೋಪ - Mahanayaka

ವಿಶಾಲ ಬೌದ್ಧ ಧಮ್ಮ ಪರಿಷತ್ | ಧಮ್ಮಚಕ್ರ ಪರಿವತ೯ನೆ ದಿನ , ಶ್ರಾಮಣೇರ ಪಬ್ಬಜ್ಜ ಪ್ರಶಿಕ್ಷಣ ಶಿಬಿರ ಸಮಾರೋಪ

05/11/2020

ನಿಪ್ಪಾಣಿ:  ತಾಲ್ಲೂಕಿನ ಗಳತಗಾ ಗ್ರಾಮದಲ್ಲಿ ಪ್ರಥಮ ಬಾರಿಗೆ ಐತಿಹಾಸಿಕ  ವಿಶಾಲ ಬೌದ್ಧ ಧಮ್ಮ ಪರಿಷತ್ 2020,  64ನೇ ಧಮ್ಮಚಕ್ರ ಪರಿವತ೯ನೆ ದಿನ ಹಾಗೂ ಶ್ರಾಮಣೇರ ಪಬ್ಬಜ್ಜ ಪ್ರಶಿಕ್ಷಣ ಶಿಬಿರದ ಸಮಾರೋಪ ಸಮಾರಂಭ ಅಶೋಕ ವಿಜಯದಸಮಿಯ ದಿನ ರವಿವಾರ ಅತೀ ವಿಜೃಂಭಣೆಯಿಂದ ಅಥ೯ಪೂಣ೯ವಾಗಿ ಆಚರಿಸಲಾಯಿತು.

ಪೂಜ್ಯ ಭಂತೇಗಳಾದ ಆರ್. ಆನಂದ ಹಾಗೂ ರಾಹುಲ ಬೋಧಿ ಕೊಲ್ಲಾಪುರ ಇವರ ಪ್ರಮುಖ ಉಪಸ್ಥಿತಿಯಲ್ಲಿ ಪೂಜ್ಯ ಭಂತೇ ಬುದ್ಧಪುತ್ರ ಗುರುಧಮ್ಮೋ ತಕ್ಷಶಿಲಾ ಬುದ್ಧವಿಹಾರ ಗಳತಗಾ ಇವರ ಮಾಗ೯ದಶ೯ನದಲ್ಲಿ ಈ ಜಂಟಿ ಕಾಯ೯ಕ್ರಮಗಳು ಯಶಸ್ವಿಯಾಗಿ ಇಡೀ ನಿಪ್ಪಾಣಿ ಹಾಗೂ ಚಿಕ್ಕೋಡಿ ತಾಲ್ಲೂಕಿನಲ್ಲಿ ಬೌದ್ಧ ಧಮ್ಮದ ಜಾಗೃತಿಯನ್ನುಂಟು ಮಾಡಿವೆ.

12 ದಿನಗಳ ಭವ್ಯ ಶ್ರಾಮಣೇರ ಪಬ್ಬಜ್ಜ ಪ್ರಶಿಕ್ಷಣ ಶಿಬಿರ 14 ಅಕ್ಟೋಬರ್ ರಿಂದ 25 ಅಕ್ಟೋಬರ 2020ರ ವರೆಗೆ ಸಮಾನತೆ, ಭಾತೃತ್ವ, ಬಹುಜನ ಹಿತಾಯ ಬಹುಜನ ಸುಖಾಯಾ ಧ್ಯೇಯವಾಕ್ಯಗಳೊಂದಿಗೆ 10 ವಿವಿಧ ಹಳ್ಳಿ ಪಟ್ಟಣಗಳಾದ ಅಕ್ಕೋಳ, ಬೇಡಕಿಹಾಳ, ನೇಜ, ಚಿಕ್ಕೋಡಿ, ಅಪ್ಪಾಚಿವಾಡಿ, ಖಡಕಲಾಟ, ನಾಂಗನೂರ, ಮಾಣಕಾಪೂರ, ಮಾಂಗೂರ ಹಾಗೂ ಭೋಜ ಗ್ರಾಮಕ್ಕೆ ಸಂಚರಿಸಿ ಧಮ್ಮ ಕಾಯಕ ಕೈಗೊಂಡಿತು.


Provided by

ಸದರಿ ಶ್ರಾಮಣೇರ ಶಿಬಿರದಲ್ಲಿ 23 ಮಕ್ಕಳು ಪರಿವೃಜ ದೀಕ್ಷೆ ಪಡೆದು ಪಬ್ಬಜ್ಜರಾಗಿ ಶ್ರಮಣ ಸಂಸ್ಕಾರದ ಪ್ರಶಿಕ್ಷಣ ಪಡೆದುಕೊಂಡರು. ಮುಂಜಾನೆ ಛತ್ರಪತಿ ಶಾಹು ನಗರದಿಂದ ಭೀಮ ನಗರದ ವರೆಗೆ ಶಾಂತಿಪೂವ೯ಕ ಧಮ್ಮರ್ಯಾಲಿ ಹಮ್ಮಿಕೊಂಡು ತಥಾಗತ ಗೌತಮ ಬುದ್ಧರ ಭವ್ಯ ಮೂತಿ೯ ಪ್ರತಿಸ್ಠಾಪಿಸಿ ಧಮ್ಮ ಧ್ವಜಕ್ಕೆ ಗೌರವ ವಂದನೆಗಳು ಸಲ್ಲಿಸಲಾಯಿತು.

ಶಾಹು ನಗರದ ಲುಂಬಿನಿವನದ ಮುಖ್ಯ ವೇದಿಕೆಯಲ್ಲಿ ವಿಶಾಲ ಧಮ್ಮ ಪರಿಷತ್ ನಡೆಯಿತು. ಕಾಯ೯ಕ್ರಮದ ದಿವ್ಯ ಸಾನಿಧ್ಯವಹಿಸಿದ ಭಂತೇ ಆರ್.ಆನಂದ ಬೌದ್ಧ ಧಮ್ಮದ ತಿರುಳಗಳು ಸಮಾಜ, ದೇಶ ಹಾಗೂ ವಿಶ್ವ ಮನುಜ ಕುಲದ ಸಮಸ್ತರಿಗೂ ಮಂಗಳಕರ ಅಂತಾ ತಮ್ಮ ಅಧ್ಯಕ್ಷಿಯ ಆಶೀ೯ವಚನದಲ್ಲಿ ಹಾರೈಸಿದರು.

ಭಂತೇ ರಾಹುಲ ಭೋದಿಜಿ ಅವರು ತಮ್ಮ ಧಮ್ಮಧಸೇನಾದಲ್ಲಿ ಸಕಲ ಜೀವಿ ಸಂಕುಲಗಳ ಶಾಂತಿ, ಮೈತ್ರೆ, ಕರುಣಾ ಭಾವಗಳಲ್ಲಿನ ಮಹಾಕರುಣಿಕ ಬುದ್ಧರ ವಾಣಿ ಸವ೯ಕಾಲಿಕ ಸತ್ಯಗಳ ಬಗ್ಗೆ ಬೆಳಕು ಚೆಲ್ಲಿ ಅವುಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಲು ಕರೆ ನೀಡಿದರು.

ಪೂಜ್ಯ ಭಂತೇ ಬುದ್ದಪುತ್ರ ಗುರುಧಮ್ಮೋಜಿ ಯವರು ಸಭಿಕರನ್ನು ಸ್ವಾಗತಿಸಿ ಗಳತಗಾ ಬೌದ್ಧ ಉಪಾಸಕ, ಉಪಾಸಕಿಯರು ಹಾಗೂ ಸಮಸ್ತ ಸಮಾಜದ ಅಂಬೇಡ್ಕರವಾದಿಗಳ ಕಾಯ೯ಗಳ ಬಗ್ಗೆ ಅಭಿಮಾನಪೂವ೯ಕ ಮೆಚ್ಚುಗೆ ವ್ಯಕ್ತ ಪಡಿಸಿದರು.

ಬೆಳಗಾವಿ ಮತ್ತು ಕೊಲ್ಲಾಪುರ ಜಿಲ್ಲೆಯ ಗಣ್ಯವ್ಯಕ್ತಿಗಳು, ಗ್ರಾಮದ ನಾಯಕರು, ಧಮ್ಮದಾನಿಗಳು ವೇದಿಕಯನ್ನು ಹಂಚಿಕೊಂಡಿದ್ದರು.  ಸದರಿ ಶ್ರಾಮಣೇರ ಶಿಬಿರ ಹಾಗೂ ಧಮ್ಮ ಪರಿಷತ್ ಕಾಯ೯ಕ್ರಮಗಳನ್ನು ಗಳತಗಾ ತಕ್ಷಶಿಲಾ ಬುದ್ಧವಿಹಾರ & ಸಮಸ್ತ ಬೌದ್ಧ ಸಮಾಜ ಬಾಂಧವರು ಆಯೋಜಿಸಿದ್ದರು. ಕಾಯ೯ಕ್ರಮದಲ್ಲಿ ಗಳತಗಾ ಸುತ್ತಮುತ್ತಲಿನ ಸಾವಿರಾರು ಉಪಾಸಕ ಉಪಾಸಕಿಯರು ಹಾಜರಿದ್ದರು.

ಇತ್ತೀಚಿನ ಸುದ್ದಿ