ಬಿಜೆಪಿ ಏಜೆಂಟ್ ನಂತೆ ತೇಜಸ್ವಿ ಸೂರ್ಯ ಪರ ವರದಿ ಸಲ್ಲಿಸಿದ ಅಧಿಕಾರಿ ವಿರುದ್ಧ ಹೈಕೋರ್ಟ್ ಗರಂ - Mahanayaka

ಬಿಜೆಪಿ ಏಜೆಂಟ್ ನಂತೆ ತೇಜಸ್ವಿ ಸೂರ್ಯ ಪರ ವರದಿ ಸಲ್ಲಿಸಿದ ಅಧಿಕಾರಿ ವಿರುದ್ಧ ಹೈಕೋರ್ಟ್ ಗರಂ

06/11/2020

ಬೆಂಗಳೂರು: ಬಿಜೆಪಿ ಏಜೆಂಟ್ ನಂತೆ ಪ್ರಕರಣವೊಂದರ ವರದಿಯನ್ನು ನೀಡಿದ ಪೊಲೀಸ್ ಅಧಿಕಾರಿ ವಿರುದ್ಧ ಹೈಕೋರ್ಟ್ ಗರಂ ಆಗಿದ್ದು, ಒಬ್ಬ ಪೊಲೀಸ್ ಅಧಿಕಾರಿಯಾಗಿದ್ದು, ಈ ರೀತಿಯ ವರದಿ ಸಲ್ಲಿಸುತ್ತೀರಲ್ಲ ಎಂದು ತರಾಟೆಗೆತ್ತಿಕೊಂಡಿದೆ.

ಸೆ.30ರಂದು ಬಿಜೆಪಿ ಯುವ ಮೋರ್ಚ ರಾಷ್ಟ್ರೀಯ ಅಧ್ಯಕ್ಷ, ಸಂಸದ ತೇಜಸ್ವಿ ಸೂರ್ಯ, ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಚೇರಿಯವರೆಗೆ ನಡೆಸಿದ್ದ ಮೆರವಣೆಗೆಯಲ್ಲಿ ಮಾಸ್ಕ್ ಧರಿಸದೇ ಕೊವಿಡ್ ನಿಯಮಗಳನ್ನು ಉಲ್ಲಂಘಿಸಿದ್ದರು ಎಂದು ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಆದರೆ, ಅಪರಾಧ ವಿಭಾಗದ ಡಿಸಿಪಿ, ಸಂಸದರು ಮಾಸ್ಕ್ ಧರಿಸಿದ್ದರು. ಯಾವುದೇ ನಿಯಮ ಉಲ್ಲಂಘನೆಯಾಗಿಲ್ಲ ಎಂದು ಬಿಜೆಪಿ ಪರವಾಗಿ ವರದಿ ಸಲ್ಲಿಸಿದ್ದರು.

ಪೊಲೀಸ್ ಅಧಿಕಾರಿಯ ವರದಿಯನ್ನು ನೋಡಿದ ಹೈಕೋರ್ಟ್ ಗರಂ ಆಗಿದ್ದು,  ಸಂಸದರು ಸೇರಿದಂತೆ ಯಾರೂ ಕೂಡ ಮಾಸ್ಕ್ ಧರಿಸಿಲ್ಲ ಎನ್ನುವುದು ಫೋಟೋದಲ್ಲಿ ಕಂಡು ಬಂದಿದೆ. ನೀವು, ಎಲ್ಲರೂ ಮಾಸ್ಕ್ ಧರಿಸಿದ್ದಾರೆ ಹೇಳುತ್ತಿದ್ದೀರಲ್ಲ. ಒಬ್ಬ ಪೊಲೀಸ್ ಅಧಿಕಾರಿಯಾಗಿ ಇಂತಹ ವರದಿ ಸಲ್ಲಿಸಿದ್ದೀರಲ್ಲ ಎಂದು ತರಾಟೆಗೆತ್ತಿಕೊಂಡರು.

ಇತ್ತೀಚಿನ ಸುದ್ದಿ