ಅಮಿತ್ ಶಾಗೆ 56 | ಪ್ರಧಾನಿ ಮೋದಿ ಶುಭಹಾರೈಸಿದ್ದು ಹೀಗೆ - Mahanayaka

ಅಮಿತ್ ಶಾಗೆ 56 | ಪ್ರಧಾನಿ ಮೋದಿ ಶುಭಹಾರೈಸಿದ್ದು ಹೀಗೆ

22/10/2020

ನವದೆಹಲಿ: ಗೃಹಸಚಿವ ಅಮಿತ್ ಶಾ ಅವರು ಇಂದು ತಮ್ಮ 56ನೇ ವರ್ಷದ ಹುಟ್ಟು ಹಬ್ಬ ಆಚರಿಸುತ್ತಿದ್ದಾರೆ. ಅವರಿಗೆ ಪ್ರಧಾನಿ ನರಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಶುಭಾಶಯ ತಿಳಿಸಿದ್ದಾರೆ.

ಅಮಿತ್ ಶಾಗೆ ಶುಭಾಶಯ ಹೇಳಿರುವ ಪ್ರಧಾನಿ ಮೋದಿ,  ದೇಶ ಪ್ರಗತಿ ಸಾಧಿಸುವತ್ತಾ ಅವರು ನೀಡುತ್ತಿರುವ ಸಮರ್ಪಣೆ ಮತ್ತು ದಕ್ಷತಾ ಮನೋಭಾವಕ್ಕೆ ನಮ್ಮ ರಾಷ್ಟ್ರ ಸಾಕ್ಷಿಯಾಗಿದೆ. ಬಿಜೆಪಿಯನ್ನು ಬಲಪಡಿಸುವ ಅವರ ಪ್ರಯತ್ನಗಳೂ ಗಮನಾರ್ಹವಾಗಿವೆ. ಅವರು ದೇಶ ಸೇವೆ ಮಾಡಲು ದೇವರು ಧೀರ್ಘ ಆಯಸ್ಸು ಮತ್ತು ಆರೋಗ್ಯಕೊಟ್ಟು ಆಶೀರ್ವದಿಸಲಿ ಎಂದು ಹಾರೈಸಿದ್ದಾರೆ.

ಅಮಿತ್ ಶಾ ಹುಟ್ಟು ಹಬ್ಬದಂದು ಬಿಜೆಪಿ ಪಕ್ಷದ ವಿವಿಧ ನಾಯಕರು ಅವರಿಗೆ ಶುಭಾಶಯಗಳನ್ನು ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕೂಡ ವಿಶೇಷ ಶುಭಾಶಯಗಳನ್ನು ಹೇಳಿದ್ದಾರೆ.

Disclaimer:

www.mahanayaka.in ಅಂತರ್ಜಾಲ ಮಾಧ್ಯಮದಲ್ಲಿ ಪ್ರಕಟವಾದ ಸುದ್ದಿಗಳಲ್ಲಿ ಯಾರದ್ದೇ ಭಾವನೆಗಳಿಗೆ ಧಕ್ಕೆಯಾಗುವಂತಹ ಅಥವಾ ನೋವುಂಟಾಗುವಂತಹ ಅಥವಾ ನಿಮಗೆ ಆಕ್ಷೇಪಾರ್ಹ ಎನಿಸಿದಂತಹ ಅಂಶಗಳ ಬಗ್ಗೆ ಓದುಗರು 9686872149 ನಂಬರ್ ಗೆ ಸುದ್ದಿಯ ಲಿಂಕ್ ಸಹಿತ ನಿಮ್ಮ ದೂರು ಸಲಹೆಗಳನ್ನು ವಾಟ್ಸಾಪ್ ಮಾಡಬಹುದು. ಅಥವಾ ಕರೆ ಮಾಡಬಹುದು. ನಿಮ್ಮ ದೂರನ್ನು ಪರಿಶೀಲಿಸಿ, ಅಂತಹ ಆಕ್ಷೇಪಾರ್ಹ ಅಂಶಗಳನ್ನು ತೆಗೆದು ಹಾಕಲು ಮಾಧ್ಯಮವು ಬದ್ಧವಾಗಿದೆ.

ಇತ್ತೀಚಿನ ಸುದ್ದಿ