ಗುಜರಾತ್‌ ನಲ್ಲಿ ಮುಸ್ಲಿಂ ವಿರೋಧಿ ಮನೋಭಾವ: ಮುಸ್ಲಿಂ ಮಹಿಳೆಗೆ ಮನೆ ಕೊಡಲು ಹಿಂದೇಟು..! - Mahanayaka

ಗುಜರಾತ್‌ ನಲ್ಲಿ ಮುಸ್ಲಿಂ ವಿರೋಧಿ ಮನೋಭಾವ: ಮುಸ್ಲಿಂ ಮಹಿಳೆಗೆ ಮನೆ ಕೊಡಲು ಹಿಂದೇಟು..!

14/06/2024

ಗುಜರಾತ್‌ ನಲ್ಲಿ ಮುಸ್ಲಿಮ್‌ ವಿರೋಧಿ ಮನೋಭಾವ ಸಾರ್ವತ್ರಿಕವಾದ ವರದಿಯೊಂದು ಇಲ್ಲಿ ಇದೆ. ಮುಸ್ಲಿಮ್‌ ಮಹಿಳೆಯ ವಾಸವನ್ನು ವಿರೋಧಿಸಿರುವ ವಡೋದರಾದ ವಸತಿ ಸಂಕೀರ್ಣದಲ್ಲಿಯ ಗುಂಪೊಂದು ಆಕೆ ಇಲ್ಲಿರುವುದು ‘ಬೆದರಿಕೆ ಮತ್ತು ಕಿರುಕುಳ’ ಎಂದು ಉಲ್ಲೇಖಿಸಿ ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ. ವಡೋದರಾ ಮಹಾನಗರ ಪಾಲಿಕೆ ಕಡಿಮೆ ಆದಾಯದವರಿಗೆ ನಿರ್ಮಿಸಿ ಕೊಟ್ಟಿರುವ ವಸತಿ ಸಂಕೀರ್ಣ ಇದಾಗಿದೆ.


Provided by

2017ರಲ್ಲಿ ಮುಖ್ಯಮಂತ್ರಿ ಆವಾಸ್ ಯೋಜನೆಯಡಿ ಹರ್ನಿಯ ವಡೋದರಾ ಮಹಾನಗರ ಪಾಲಿಕೆಯ ಕಡಿಮೆ ಆದಾಯ ಗುಂಪಿನ ವಸತಿ ಸಂಕೀರ್ಣದಲ್ಲಿ 44 ವರ್ಷದ ಮಹಿಳೆಗೆ ಫ್ಲ್ಯಾಟ್ ಮಂಜೂರಾಗಿತ್ತು. 462 ಫ್ಲ್ಯಾಟ್‌ಗಳಿರುವ ಸಂಕೀರ್ಣದ 33 ನಿವಾಸಿಗಳು ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದರು. ದೂರಿನಲ್ಲಿ ‘ಮುಸ್ಲಿಮ್’ ವ್ಯಕ್ತಿ ತಮ್ಮ ಸಂಕೀರ್ಣಕ್ಕೆ ಬರುವುದನ್ನು ಆಕ್ಷೇಪಿಸಿದ್ದ ಅವರು, ಮಹಿಳೆಯ ಉಪಸ್ಥಿತಿಯಿಂದಾಗಿ ಸಂಭಾವ್ಯ ‘ಬೆದರಿಕೆ ಮತ್ತು ಕಿರುಕುಳ’ವನ್ನು ಉಲ್ಲೇಖಿಸಿದ್ದರು. ಮಹಿಳೆ ಸಂಕೀರ್ಣದಲ್ಲಿ ಫ್ಲ್ಯಾಟ್ ಮಂಜೂರಾದ ಏಕೈಕ ಮುಸ್ಲಿಮ್ ಆಗಿದ್ದಾರೆ.

ಮುಸ್ಲಿಮ್ ಮಹಿಳೆಗೆ ಫ್ಲ್ಯಾಟ್ ಮಂಜೂರು ಮಾಡಿರುವುದನ್ನು ರದ್ದುಗೊಳಿಸುವಂತೆ ಕೋರಿ 2020ರಲ್ಲಿ ನಿವಾಸಿಗಳು ಮುಖ್ಯಮಂತ್ರಿ ಕಚೇರಿಗೆ ಬರೆದಾಗ ಪ್ರತಿಭಟನೆಗಳು ಮೊದಲು ಆರಂಭಗೊಂಡಿದ್ದವು. ಆದಾಗ್ಯೂ ಹರ್ನಿ ಪೋಲಿಸ್ ಠಾಣೆಯ ಅಧಿಕಾರಿಗಳು ಸಂಬಂಧಿಸಿದ ಎಲ್ಲರ ಹೇಳಿಕೆಗಳನ್ನು ಪಡೆದುಕೊಂಡು ದೂರನ್ನು ಮುಕ್ತಾಯಗೊಳಿಸಿದ್ದರು. ಇದೇ ವಿಷಯದಲ್ಲಿ ಇತ್ತೀಚಿಗೆ ಜೂ.10ರಂದು ಮತ್ತೆ ಪ್ರತಿಭಟನೆ ನಡೆದಿತ್ತು.

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ