ಕುವೈತ್ ಅಗ್ನಿ ದುರಂತ: ತನಗೆ ಹೋಗೋಕೇ ಕೇಂದ್ರ ಸರ್ಕಾರ ಅನುಮತಿ ನೀಡಿಲ್ಲ ಎಂದು ಕಿಡಿಕಾರಿದ ಕೇರಳ ಸಚಿವೆ - Mahanayaka

ಕುವೈತ್ ಅಗ್ನಿ ದುರಂತ: ತನಗೆ ಹೋಗೋಕೇ ಕೇಂದ್ರ ಸರ್ಕಾರ ಅನುಮತಿ ನೀಡಿಲ್ಲ ಎಂದು ಕಿಡಿಕಾರಿದ ಕೇರಳ ಸಚಿವೆ

14/06/2024

ಕುವೈತ್‌ನಲ್ಲಿ ಸಂಭವಿಸಿರುವ ಭೀಕರ ಅಗ್ನಿ ದುರಂತದ ಪರಿಹಾರ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳಲು ಕೇಂದ್ರ ಸರಕಾರ ತನಗೆ ಅನುಮತಿ ನಿರಾಕರಿಸಿದೆ ಎಂದು ಕೇರಳ ಸಚಿವೆ ವೀಣಾ ಜಾರ್ಜ್ ಆರೋಪಿಸಿದ್ದಾರೆ. ಬುಧವಾರ ಕುವೈತ್‌ನಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ 49 ಮಂದಿ ಮೃತಪಟ್ಟಿದ್ದು, ಈ ಪೈಕಿ 45 ಮಂದಿ ಭಾರತೀಯರಾಗಿದ್ದಾರೆ.

ಕೊಲ್ಲಿ ರಾಷ್ಟ್ರವಾದ ಕುವೈತ್‌ನಲ್ಲಿ ಸಂಭವಿಸಿರುವ ಭೀಕರ ಅಗ್ನಿ ದುರಂತದ ಪರಿಹಾರ ಕಾರ್ಯಾಚರಣೆಯಲ್ಲಿ ಸಮನ್ವಯ ಸಾಧಿಸಲು ಕುವೈತ್‌ಗೆ ಭೇಟಿ ನೀಡಲು ಬಯಸಿದ್ದ ನನಗೆ ಅನುಮತಿ ನಿರಾಕರಿಸಲಾಗಿದೆ ಎಂದು ಅವರು ಹೇಳಿದ್ದಾರೆ.

” ಕುವೈತ್‌ಗೆ ಭೇಟಿ ನೀಡಿ, ಈ ದುರಂತದಲ್ಲಿ ಸಂತ್ರಸ್ತರಾಗಿರುವ ನಮ್ಮ ಜನರ ನೆರವಿಗೆ ನಿಂತು, ಪರಿಹಾರ ಕಾರ್ಯಾಚರಣೆಯಲ್ಲಿ ಸಮನ್ವಯ ಸಾಧಿಸಲಷ್ಟೆ ನಾವು ಕೇಂದ್ರ ಸರಕಾರದ ಅನುಮತಿ ಕೋರಿದ್ದೆವು. ಆದರೆ, ಈ ಅನುಮತಿಯನ್ನು ನಿರಾಕರಿಸಲಾಗಿದೆ” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ