ಅಪ್ಪು ಸಮಾಧಿ ಮುಂದೆ ಟೈಟಲ್ ಲಾಂಚ್ ಮಾಡ್ಬೇಡ ಒಳ್ಳೆಯದ್ದಾಗಲ್ಲ ಅಂದಿದ್ರು: ಝೈದ್ ಖಾನ್ - Mahanayaka

ಅಪ್ಪು ಸಮಾಧಿ ಮುಂದೆ ಟೈಟಲ್ ಲಾಂಚ್ ಮಾಡ್ಬೇಡ ಒಳ್ಳೆಯದ್ದಾಗಲ್ಲ ಅಂದಿದ್ರು: ಝೈದ್ ಖಾನ್

banaras
05/11/2022

ಝೈದ್ ಖಾನ್ ನಟನೆಯ ಬನಾರಸ್ ಚಿತ್ರಕ್ಕೆ ರಾಜ್ಯದಲ್ಲಿ ಉತ್ತಮ ಸ್ಪಂದನೆ ದೊರಕಿದೆ. ಇದೇ ವೇಳೆ ಝೈದ್ ಖಾನ್ ಅವರು, ಬನಾರಸ್ ಸಿನಿಮಾದ ಟೈಟಲ್ ಲಾಂಚ್ ನ್ನು ಪುನೀತ್ ರಾಜ್ ಕುಮಾರ್ ಮಾಡಬೇಕಿತ್ತು. ಅವರು ಒಪ್ಪಿಗೆ ಕೂಡ ಸೂಚಿಸಿದ್ದರು. ಆದರೆ ಅಷ್ಟರೊಳಗೆ ಅವರು ನಿಧನರಾಗಿದ್ದರು ಎಂದು ನೆನಪುಗಳನ್ನು ಹಂಚಿಕೊಂಡಿದ್ದಾರೆ.  ಅಪ್ಪು ನಿಧನದ ಬಳಿಕ ಅವರ ಸಮಾಧಿ ಬಳಿ ಟೈಟಲ್ ಲಾಂಚ್ ಮಾಡಲು ಝೈದ್ ಖಾನ್ ಮುಂದಾಗಿದ್ದರು. ಈ ವೇಳೆ ಕೆಲವರು, ಸಮಾಧಿ ಮುಂದೆ ಟೈಟಲ್ ಲಾಂಚ್ ಮಾಡಬೇಡ ಒಳ್ಳೆಯದಾಗಲ್ಲ ಎಂಬ ಸಲಹೆಗಳನ್ನು ನೀಡಿದ್ದರಂತೆ.

ಚಿತ್ರದ ಶೀರ್ಷಿಕೆ ರೆಡಿಯಾದಾಗ ಯಾರ ಕೈಯಲ್ಲಿ ಚಿತ್ರದ ಶೀರ್ಷಿಕೆ ಬಿಡುಗಡೆ ಮಾಡಬೇಕು ಅಂತ ಚರ್ಚೆ ನಡೆಯಿತು. ಈ ವೇಳೆ ಪುನೀತ್ ರಾಜ್ ಕುಮಾರ್ ಅವರ ಕೈಯಿಂದ ಲಾಂಚ್ ಮಾಡಿಸೋಣ ಎಂದಿದ್ದೆ. ಡೈರೆಕ್ಟರ್ ಕೇಳಿದ್ರು, ಪುನೀತ್ ಸರ್ ಲಾಂಚ್ ಮಾಡ್ತಾರ ಅಂತ. ಯಾಕ್ ಮಾಡಲ್ಲ ಅವರ ಮನೆಗೆ ಹೋಗಿ ಜಗಳ ಮಾಡಿಯಾದ್ರೂ ಮಾಡಿಸ್ತೇನೆ. ನನಗೆ ಅವರ ಜೊತೆಗೆ ಅಷ್ಟು ಸಲುಗೆ ಇದೆ ಎಂದೆ ಎಂದರು.

ನಾನು ಅಪ್ಪು ಸರ್ ಗೆ ಕರೆ ಮಾಡಿದಾಗ ಅವರು ಟೈಟಲ್ ಲಾಂಚ್ ಮಾಡಲು ಒಪ್ಪಿಕೊಂಡರು. ಆದರೆ ದುರಾದೃಷ್ಟ ನಾನು ಮಾತನಾಡಿದ ಮರು ದಿನವೇ ಅವರು ನಮ್ಮನ್ನು ಬಿಟ್ಟು ಹೋದರು ಎಂದು ಬೇಸರ ವ್ಯಕ್ತಪಡಿಸಿದ ಅವರು, ಅಪ್ಪು ಸರ್  ಹೋದಮೇಲೂ ಆ ಹಠವನ್ನು ನಾನು ಬಿಡಲಿಲ್ಲ,  ಅಪ್ಪು ಸರ್ ಸಮಾಧಿ ಮುಂದೆ ಟೈಟಲ್ ಲಾಂಚ್ ಮಾಡಿದೆವು ಎಂದು ತಿಳಿಸಿದರು.

ಇನ್ನು ಅಪ್ಪು ಸಮಾಧಿ ಮುಂದೆ ಟೈಟಲ್ ಲಾಂಚ್ ಬೇಡ, ಸಮಾಧಿ ಮುಂದೆ ಮಾಡಿದರೆ ನೆಗೆಟಿವ್ ಆಗುತ್ತೆ, ಯಾರೂ ಸಹ ಸಮಾಧಿ ಮುಂದೆ ಟೈಟಲ್ ಲಾಂಚ್ ಮಾಡಲ್ಲ ಎಂದು ಹಲವರು ಹೇಳಿದರು. ಆದರೆ ನಾನು ಯಾರ ಮಾತನ್ನೂ ಕೇಳದೇ ಅಲ್ಲಿಯೇ ಹೋಗಿ ಟೈಟಲ್ ಪೋಸ್ಟರ್ ಬಿಡುಗಡೆ ಮಾಡಿದೆ ಎಂದು ಝೈದ್ ಖಾನ್ ತಿಳಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ