ಅಪ್ರಾಪ್ತೆಗೆ ಮದುವೆಯಾದರೂ ಸಂಬಂಧ ಮುಂದುವರಿಸಿದ ವಿದ್ಯಾರ್ಥಿ | ಪತಿಗೆ ತಿಳಿದಾಗ ನಡೆದದ್ದೇನು ಗೊತ್ತಾ? - Mahanayaka

ಅಪ್ರಾಪ್ತೆಗೆ ಮದುವೆಯಾದರೂ ಸಂಬಂಧ ಮುಂದುವರಿಸಿದ ವಿದ್ಯಾರ್ಥಿ | ಪತಿಗೆ ತಿಳಿದಾಗ ನಡೆದದ್ದೇನು ಗೊತ್ತಾ?

vijayapur crime news
17/07/2021

ವಿಜಯಪುರ: ತಾನು ಪ್ರೀತಿಸಿದ ಅಪ್ರಾಪ್ತೆಗೆ ಮದುವೆಯಾದರೂ ವಿದ್ಯಾರ್ಥಿಯೋರ್ವ ತನ್ನ ಪ್ರೀತಿ ಮುಂದುವರಿಸಿದ್ದು, ಇದೀಗ ತನ್ನ ಪ್ರೇಯಸಿಯ ತಂದೆ ಹಾಗೂ ಪತಿಯಿಂದ ಬರ್ಬರವಾಗಿ ಹತ್ಯೆಗೀಡಾಗಿದ್ದಾನೆ.


Provided by

23 ವರ್ಷ ವಯಸ್ಸಿನ ಅರವಿಂದ ಹತ್ಯೆಗೀಡಾದ ವಿದ್ಯಾರ್ಥಿಯಾಗಿದ್ದಾನೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದಲು ಇಂಡಿಯಲ್ಲಿ ರೂಮ್ ಮಾಡಿಕೊಂಡಿದ್ದ ಅರವಿಂದ ಪಕ್ಕದ ಮನೆಯ ಹುಡುಗಿಯನ್ನು ಪ್ರೀತಿಸುತ್ತಿದ್ದ. ಇವರ ವಿಚಾರ ತಿಳಿದ ಹುಡುಗಿ ಮನೆಯವರು ಅವಸರದಲ್ಲಿ ಚಡಚಣದ ಅಜಿತ್ ಜೊತೆಗೆ ಮದುವೆ ಮಾಡಿದ್ದಾರೆ.

ತನ್ನ ಪ್ರೇಯಸಿಗೆ ಮದುವೆಯಾಗಿದ್ದರೂ ಅರವಿಂದ ಆಕೆಯ ಜೊತೆಗಿನ ಸಂಬಂಧವನ್ನು ಮುಂದುವರಿಸಿದ್ದ ಎಂದು ಹೇಳಲಾಗಿದೆ. ಈ ವಿಚಾರ ಪತಿ ಅಜಿತ್ ಗೆ ತಿಳಿದು ಬಂದಿದ್ದು, ಆತ ತನ್ನ ಮಾವನೊಂದಿಗೆ ಸೇರಿ ಅರವಿಂದನ ಹತ್ಯೆಗೆ ಯೋಜನೆ ರೂಪಿಸಿದ್ದಾನೆ. ಅಪ್ರಾಪ್ತೆ ಮೂಲಕ ಅರವಿಂದನನ್ನು ಚಡಚಣಕ್ಕೆ ಕರೆಸಿಕೊಂಡು ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾರೆ. ಬಳಿಕ ಶವವನ್ನು ಸುಟ್ಟು ಹಾಕಲು ಪ್ರಯತ್ನಿಸಿದ್ದಾರೆ.


Provided by

ವಿಜಯಪುರ ಜಿಲ್ಲೆ ಚಡಚಣದ ಆಶ್ರಯ ಕಾಲೋನಿ ಸಮೀಪ ಜುಲೈ 10 ರಂದು ಅರೆಬರೆ ಸ್ಥಿತಿಯಲ್ಲಿ ಸುಟ್ಟಿದ್ದ ಯುವಕನ ಮೃತದೇಹ ಪತ್ತೆಯಾಗಿದ್ದು, ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದೇ ವೇಳೆ ಇಂಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಯುವಕನೊಬ್ಬ  ಅರವಿಂದ ಎಂಬ ಯುವಕ ನಾಪತ್ತೆಯಾಗಿದ್ದಾನೆ ಎನ್ನುವುದು ತಿಳಿದು ಬಂದಿದೆ.

ತಕ್ಷಣವೇ ಪೊಲೀಸರು ತನಿಖೆ ಆರಂಭಿಸಿದ್ದು, ಯುವಕನ ಹತ್ಯೆಯ ಹಿಂದೆ ಪ್ರೇಮ ಪ್ರಕರಣವನ್ನು ಪತ್ತೆ ಹಚ್ಚಿದ್ದಾರೆ. ಇದೀಗ ಅಪ್ರಾಪ್ತೆ ಹಾಗೂ ಆಕೆಯ ತಂದೆ ಮತ್ತು ಪತಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.

ಇನ್ನಷ್ಟು ಸುದ್ದಿಗಳು:

 

ಅಶ್ಲೀಲ ಚಿತ್ರಗಳನ್ನು ವೀಕ್ಷಿಸುತ್ತಿರುವವರಿಗೆ ಬಿಗ್ ಶಾಕ್ ನೀಡಿದ ಪೊಲೀಸರು!

ಜಾಸ್ತಿ ಮಕ್ಕಳು ಮಾಡಿಕೊಳ್ಳಲು ತಾಕತ್ ಇದ್ರೆ ಮಾಡಿಕೊಳ್ತಾರೆ | ಜಮೀರ್ ಹೇಳಿದ್ದೇನು?

ಅತ್ಯಾಚಾರಕ್ಕೆ ಯತ್ನಿಸಿದಾತನನ್ನು ಹತ್ಯೆ ಮಾಡಿದ ಮಹಿಳೆಯ ಬಿಡುಗಡೆ! | ಅಂದು ರಾತ್ರಿ ನಡೆದದ್ದೇನು?

ಲಸಿಕೆ ಪಡೆದ ಮೂರು ತಿಂಗಳ ಮಗು ಸಾವು | ಮಕ್ಕಳ ಲಸಿಕೆ ಬದಲು ಕೊವಿಡ್ ಲಸಿಕೆ ಹಾಕಿದರೇ ಸಿಬ್ಬಂದಿ?

ಜೊತೆ ಜೊತೆಯಲಿ ಧಾರಾವಾಹಿ ವೀಕ್ಷಕರಿಗೆ ಸಿಹಿ ಸುದ್ದಿ ನೀಡಿದ ಅನು ಸಿರಿಮನೆ

ಇತ್ತೀಚಿನ ಸುದ್ದಿ