ದೇವಸ್ಥಾನದ ಅರ್ಚಕರು, ಪೂಜಾರಿಗಳು ಮೊದಲು ಮೈತುಂಬ ಬಟ್ಟೆ ಹಾಕಿಕೊಳ್ಳಿ | ಅರೆ ಬೆತ್ತಲೆ ಓಡಾಡುವ ಅರ್ಚಕರ ವಿರುದ್ಧ ತೃಪ್ತಿ ದೇಸಾಯಿ ಗರಂ - Mahanayaka

ದೇವಸ್ಥಾನದ ಅರ್ಚಕರು, ಪೂಜಾರಿಗಳು ಮೊದಲು ಮೈತುಂಬ ಬಟ್ಟೆ ಹಾಕಿಕೊಳ್ಳಿ | ಅರೆ ಬೆತ್ತಲೆ ಓಡಾಡುವ ಅರ್ಚಕರ ವಿರುದ್ಧ ತೃಪ್ತಿ ದೇಸಾಯಿ ಗರಂ

03/12/2020

ಪುಣೆ: ದೇವಸ್ಥಾನದ ಅರ್ಚಕರು, ಪೂಜಾರಿಗಳು ಮೊದಲು ಮೈ ತುಂಬ ಬಟ್ಟೆ ಧರಿಸಲಿ, ಆ ಬಳಿಕ ಭಕ್ತರಿಗೆ ವಸ್ತ್ರ ಸಂಹಿತೆಯ ಬಗ್ಗೆ ಪಾಠ ಮಾಡಿ ಎಂದು ಸಾಮಾಜಿಕ ಕಾರ್ಯಕರ್ತೆ ತೃಪ್ತಿ ದೇಸಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಿರಡಿ ಸಾಯಿಬಾಬಾ ದೇವಾಲಯ ಟ್ರಸ್ಟ್, ಭಕ್ತರು ಸರಿಯಾದ ಬಟ್ಟೆಗಳನ್ನು ಧರಿಸಿ ಬರಬೇಕು ಎಂದು ನಾಮಫಲಕ ಹಾಕಿರುವ ಹಿನ್ನೆಲೆಯಲ್ಲಿ ತೃಪ್ತಿ ದೇಸಾಯಿ ಈ ಪ್ರಶ್ನೆಗಳನ್ನು ಕೇಳಿದ್ದು,  ಈ ಫಲಕ ತೆಗೆಯದೇ ಇದ್ದರೇ ನಾವೇ ತೆಗೆದು ಹಾಕುತ್ತೇವೆ ಎಂದು ಹೇಳಿದ್ದಾರೆ.


ಭಾರತದ ಸಂವಿಧಾನದಲ್ಲಿ ಪ್ರತಿಯೊಬ್ಬ ಪ್ರಜೆಗೆ ಅವನು ಇಷ್ಟಪಡುವ ವಸ್ತ್ರವನ್ನು ಧರಿಸುವ ಹಕ್ಕಿದೆ. ವಸ್ತ್ರಕ್ಕೆ ಸಂಬಂಧಿಸಿದಂತೆ ಯಾರೂ ಕೂಡ ನಿಯಮಗಳನ್ನು ಹಾಕುವಂತಿಲ್ಲ ಎಂದು ತೃಪ್ತಿ ದೇಸಾಯಿ ಹೇಳಿದ್ದಾರೆ.

ದೇವಸ್ಥಾನದ ಅರ್ಚಕರು ತಮ್ಮ ಬೆತ್ತಲೆ ಮೈ ತೋರಿಸಿಕೊಂಡು ದೇವಸ್ಥಾನದಲ್ಲಿ ಓಡಾಡುತ್ತಾರೆ. ಆದರೆ, ಭಕ್ತರು ಇಂತಹ ಬಟ್ಟೆ ಧರಿಸಬೇಕು, ಧರಿಸಬಾರದು ಎಂದು ನಿಯಮಗಳನ್ನು ಹೇರಲಾಗುತ್ತಿದೆ. ಮೊದಲು ಪೂಜಾರಿಗಳು ನಾಗಿರಕರಂತೆ ಮೈತುಂಬ ಬಟ್ಟೆ ಧರಿಸಲಿ, ಮೊದಲು ಅವರಿಗೆ ಸರಿಯಾದ ನಾಗರಿಕತೆಯನ್ನು ಹೇಳಿಕೊಡಬೇಕಾದ ಅಗತ್ಯವಿದೆ ಎಂಬ ಅಭಿಪ್ರಾಯಗಳು ಈ ಹಿಂದಿನಿಂದಲೂ ಕೇಳಿ ಬಂದಿತ್ತು. ಇದೀಗ ಇದು ಮತ್ತೆ ಬಲಗೊಂಡಿದೆ.

 

ಇತ್ತೀಚಿನ ಸುದ್ದಿ