1500 ರೂಪಾಯಿ ವಿಚಾರಕ್ಕೆ ಸ್ನೇಹಿತರ ನಡುವೆ ಗಲಾಟೆ: ಓರ್ವನ ಬರ್ಬರ ಹತ್ಯೆ - Mahanayaka
1:35 AM Tuesday 27 - February 2024

1500 ರೂಪಾಯಿ ವಿಚಾರಕ್ಕೆ ಸ್ನೇಹಿತರ ನಡುವೆ ಗಲಾಟೆ: ಓರ್ವನ ಬರ್ಬರ ಹತ್ಯೆ

bengaluru
06/12/2023

ಬೆಂಗಳೂರು: 1500 ರೂಪಾಯಿ ವಿಚಾರಕ್ಕೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಪರಪ್ಪನ ಅಗ್ರಹಾರ ಠಾಣಾ ವ್ಯಾಪ್ತಿಯ ಸಿಂಗಸಂದ್ರದಲ್ಲಿ ನಡೆದಿದೆ.

ಗೋಪಾಲ್ ಹತ್ಯೆಯಾದ ವ್ಯಕ್ತಿಯಾಗಿದ್ದಾನೆ. ಗೋಪಾಲ್, ಕರೇಗೌಡ ಮತ್ತು ಶಶಿ ಎಂಬವರು ಬಾರ್ ನಲ್ಲಿ ಕುಡಿಯುತ್ತಿದ್ದ ವೇಳೆ ಪ್ರದೀಪ್ ಮತ್ತು ಗಿರೀಶ್ ಎಲೆಕ್ಟ್ರಿಷಿಯನ್ ಕೆಲಸದಲ್ಲಿ ಕರೇಗೌಡಗೆ ಗಿರೀಶ್ 1,500 ರೂಪಾಯಿ ಕೊಡಬೇಕಿತ್ತು ಈ ವಿಚಾರಕ್ಕೆ ಸಂಬಂಧಿಸಿದಂತೆ ಇವರ ನಡುವೆ ಕಿರಿಕ್ ಉಂಟಾಗಿದೆ.

ಹಣಕೊಡುವಂತೆ ಕರೇಗೌಡ, ಗಿರೀಶ್ ಗೆ ಕೇಳಿದಾಗ, ಹಣಕೊಡುವುದಿಲ್ಲ ಎಂದು ಗಿರೀಶ್ ಆವಾಜ್ ಹಾಕಿದ್ದಾನೆ. ಇದರ ಮಧ್ಯೆ ಎಂಟ್ರಿಯಾದ ಸ್ನೇಹಿತ ಗೋಪಾಲ್, ಗಿರೀಶ್ ಗೆ ಹೊಡೆದು ಅವಾಚ್ಯ ಶಬ್ಧಗಳಲ್ಲಿ ನಿಂದಿಸಿದ್ದಾನೆ ಎನ್ನಲಾಗಿದೆ.

ಇದಾದ ನಂತರ ಗಿರೀಶ್ ಮನೆಗೆ ಹೋದ ಗೋಪಾಲ್, ಕರೇಗೌಡ, ಶಶಿಧರ್ ಗಿರೀಶ್ ಗೆ ಸರಿಯಾಗಿ ಮಾತನಾಡುವಂತೆ ಆಯನ ಪತ್ನಿಯ ಬಳಿ ಮಾತನಾಡುತ್ತಿದ್ದರು. ಈ ವೇಳೆ ಏಕಾಏಕಿ ಗಿರೀಶ್ ಚಾಕುವಿನಿಂದ ಗೋಪಾಲ್ ಗೆ ಚುಚ್ಚಿ ಸ್ಥಳದಿಂದ ಪರಾರಿಯಾಗಿದ್ದಾನೆ.
ತಕ್ಷಣವೇ ಗೋಪಾಲ್ ನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಿಸದೇ ಗೋಪಾಲ್ ಸಾವನ್ನಪ್ಪಿದ್ದಾನೆ.

ಘಟನೆಗೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಗಿರೀಶ್ ಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಇತ್ತೀಚಿನ ಸುದ್ದಿ