ಉಮರ್ ಅಬ್ದುಲ್ಲಾರ ಮೊದಲ ಕ್ಯಾಬಿನೆಟ್ ಸಭೆಯಲ್ಲಿ 370 ನೇ ವಿಧಿ ಕಾಣೆ: ಜಮ್ಮು ಮತ್ತು ಕಾಶ್ಮೀರ ಪ್ರತಿಪಕ್ಷಗಳ ಆರೋಪ - Mahanayaka
10:56 AM Wednesday 11 - December 2024

ಉಮರ್ ಅಬ್ದುಲ್ಲಾರ ಮೊದಲ ಕ್ಯಾಬಿನೆಟ್ ಸಭೆಯಲ್ಲಿ 370 ನೇ ವಿಧಿ ಕಾಣೆ: ಜಮ್ಮು ಮತ್ತು ಕಾಶ್ಮೀರ ಪ್ರತಿಪಕ್ಷಗಳ ಆರೋಪ

19/10/2024

ಜಮ್ಮು ಮತ್ತು ಕಾಶ್ಮೀರದಲ್ಲಿ ಉಮರ್ ಅಬ್ದುಲ್ಲಾ ನೇತೃತ್ವದ ಹೊಸ ಸರ್ಕಾರದ ಮೊದಲ ಕ್ಯಾಬಿನೆಟ್ ಸಭೆ ನಡೆದ ಬೆನ್ನಲ್ಲೇ, ಮತದಾರರಿಗೆ ನೀಡಿದ ಭರವಸೆಗಳಿಗೆ ದ್ರೋಹ ಬಗೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಪ್ರದೇಶಕ್ಕೆ ವಿಶೇಷ ಸ್ಥಾನಮಾನವನ್ನು ನೀಡುವ ಪ್ರಮುಖ ವಿಷಯಗಳನ್ನು, ವಿಶೇಷವಾಗಿ 370 ಮತ್ತು 35 ಎ ವಿಧಿಗಳನ್ನು ಅಬ್ದುಲ್ಲಾ ನಿರ್ಲಕ್ಷಿಸಿದ್ದಾರೆ ಎಂದು ವಿರೋಧ ಪಕ್ಷದ ನಾಯಕರು ಆರೋಪಿಸಿದ್ದಾರೆ.

ಮೊದಲ‌ ಕ್ಯಾಬಿನೆಟ್ ಸಭೆಯಲ್ಲಿ, ರಾಜ್ಯ ಸ್ಥಾನಮಾನವನ್ನು ಪುನರ್ ಸ್ಥಾಪಿಸುವ ನಿರ್ಣಯವನ್ನು ಸರ್ಕಾರ ಅಂಗೀಕರಿಸಿತು. ಆದರೆ 370 ಮತ್ತು 35 ಎ ವಿಧಿಗಳ ಸುತ್ತಲಿನ ಚರ್ಚೆಗಳು ಎದ್ದು ಕಾಣಲಿಲ್ಲ ಎಂಬ ಆರೋಪ ಕೇಳಿಬಂದಿದೆ.

ಬಾರಾಮುಲ್ಲಾದ ಸಂಸತ್ ಸದಸ್ಯ ಇಂಜಿನಿಯರ್ ರಶೀದ್ ಅವರು ಈ ಕುರಿತು ತಮ್ಮ ನಿರಾಶೆಯನ್ನು ವ್ಯಕ್ತಪಡಿಸುತ್ತಾ, “ಸಂಪುಟವು ರಾಜ್ಯದ ಸ್ಥಾನಮಾನದ ಬಗ್ಗೆ ಮಾತ್ರ ನಿರ್ಣಯವನ್ನು ಅಂಗೀಕರಿಸಿದೆ ಮತ್ತು 370 ನೇ ವಿಧಿಯನ್ನು ನಿರ್ಲಕ್ಷಿಸಿದೆ ಎಂದು ತಿಳಿದು ತುಂಬಾ ದುಃಖವಾಗಿದೆ. ಇದು ಅವರ ಪಕ್ಷದ ತಾತ್ವಿಕ ನಿಲುವು, ಮತ್ತು ಉಮರ್ ಅಬ್ದುಲ್ಲಾ ಬಿಜೆಪಿಯ ಕೈಯಲ್ಲಿ ಆಟವಾಡುತ್ತಿದ್ದಾರೆ ಎಂಬುದು ಬಹಳ ಸ್ಪಷ್ಟವಾಗಿದೆ.

ರಾಜ್ಯತ್ವವನ್ನು ಮರಳಿ ತರುತ್ತೇವೆ ಎಂದು ಅಮಿತ್ ಶಾ ಮತ್ತು ಪ್ರಧಾನಿ ಈಗಾಗಲೇ ಹೇಳಿದ್ದಾರೆ. ಅವರು ಯಾಕೆ ರಾಜ್ಯತ್ವದ ಬಗ್ಗೆ ಮಾತ್ರ ಮಾತನಾಡುತ್ತಿದ್ದಾರೆ ಮತ್ತು ತಮ್ಮ ಮುಖ್ಯ ಕಾರ್ಯಸೂಚಿಯನ್ನು ನಿರ್ಲಕ್ಷಿಸುತ್ತಿದ್ದಾರೆ? ಅವರು 370 ನೇ ವಿಧಿಯ ಮೇಲೆ ಚುನಾವಣೆಯಲ್ಲಿ ಹೋರಾಡಿದರು. ಈಗ ಎನ್ಸಿ ಮತ್ತು ಬಿಜೆಪಿ ನಡುವೆ ಆಟ ನಡೆಯುತ್ತಿದೆ ಎಂದು ತೋರುತ್ತದೆ. ಅವರು ಮುಖ್ಯ ವಿಷಯದಿಂದ ದೂರ ಓಡುತ್ತಿದ್ದಾರೆ “ಎಂದು ದೂರಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ