ಭಾರತದ ಮೇಲಿನ ದಾಳಿ ಎಂದು ಪಾಕ್ ಪ್ರಧಾನಿಗೆ ಫೋಟೋ ಗಿಫ್ಟ್ ನೀಡಿದ ಸೇನಾ ಮುಖ್ಯಸ್ಥ: ಆದ್ರೆ ಫೋಟೋದ ಹಿಂದಿನ ಸತ್ಯ ಬಯಲು!

ಆಪರೇಷನ್ ಸಿಂಧೂರ ಮೂಲಕ ಪಾಕಿಸ್ತಾನ ವಿಶ್ವದ ಮುಂದೆ ವಿಫಲ ರಾಷ್ಟ್ರ ಎಂದು ಬಹಿರಂಗವಾಗಿ ಬೆತ್ತಲಾಗಿದೆ. ಆದರೂ ಪಾಕಿಸ್ತಾನ ಸುಳ್ಳು ಹರಡುವ ಮೂಲಕ ತನ್ನನ್ನು ತಾನು ಸಮರ್ಥಿಸಿಕೊಳ್ಳಲು ಯತ್ನಿಸುತ್ತಲೇ ಇದೆ. ಇದೀಗ ಭಾರತದ ಮೇಲೆ ನಡೆಸಿದ ದಾಳಿಯ ಫೋಟೋ ಎಂದು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರಿಗೆ ಪಾಕಿಸ್ತಾನದ ಸೇನಾ ಮುಖ್ಯಸ್ಥ ಮುನೀರ್ ಫೋಟೋವೊಂದನ್ನು ಗಿಫ್ಟ್ ನೀಡಿದ್ದು, ಇದರೊಂದಿಗೆ ಮತ್ತೊಮ್ಮೆ ಜಗತ್ತಿನ ಮುಂದೆ ಅಪಹಾಸ್ಯಕ್ಕೀಡಾಗಿದೆ.
ಭಾರತದ ಮೇಲೆ ನಡೆಸಿದ ದಾಳಿ ಎಂಬಂತೆ ಫ್ರೇಮ್ ಹಾಕಿರುವ ಫೋಟೋವನ್ನು ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಪ್ರಧಾನಿ ಶೆಹಬಾಜ್ ಷರೀಫ್ ಅವರಿಗೆ ಉಡುಗೊರೆ ನೀಡಿದ್ದಾರೆ. ವಾಸ್ತವವಾಗಿ ಈ ಫೋಟೋ ಚೀನಾದ ಮಿಲಿಟರಿ ಕವಾಯತಿನ ಫೋಟೋವಾಗಿದೆ. ಈ ಫೇಕ್ ಫೋಟೋವನ್ನು ಉಡುಗೊರೆ ನೀಡಿ ಭಾರತದ ಮೇಲೆ ನಡೆಸಿದ ದಾಳಿ ಎಂಬಂತೆ ಪಾಕಿಸ್ತಾನ ಬಿಂಬಿಸಿಕೊಂಡಿದೆ.
ಆಪರೇಷನ್ ಸಿಂಧೂರ ಮೂಲಕ ಭಾರತೀಯ ಸೇನೆ ನಡೆಸಿದ ದಾಳಿಗೆ ಪಾಕಿಸ್ತಾನ ಬೆಚ್ಚಿಬಿದ್ದಿತ್ತು. ಯಾವುದೇ ಕ್ಷಿಪಣಿಗಳು ಭಾರತದ ವಾಯುನೆಲೆಯನ್ನು ಪ್ರವೇಶಿಸಲು ಭಾರತೀಯ ಸೇನೆ ಅವಕಾಶ ನೀಡಿಲ್ಲ. ಆದರೆ ಪಾಕಿಸ್ತಾನದ ಪ್ರಮುಖ ವಾಯುನೆಲೆಗಳ ಮೇಲೆ ಭಾರತ ದಾಳಿ ನಡೆಸಿ ಪಾಕಿಸ್ತಾನಕ್ಕೆ ನಡುಕ ಹುಟ್ಟಿಸಿತ್ತು. ಇಷ್ಟಾದರೂ, ತಾವು ಸಾಧಿಸದ ವಿಜಯಕ್ಕೆ ಪಾಕಿಸ್ತಾನ ವಿಜಯೋತ್ಸವ ಆಚರಣೆ ಮಾಡುತ್ತಿದೆ. ಇದೀಗ ಚೀನಾದ ಮಿಲಿಟರಿಯ ಕವಾಯತಿನ(ವ್ಯಾಯಾಮ) ಫೋಟೋವನ್ನು ಪ್ರಧಾನಿಗೆ ಗಿಫ್ಟ್ ನೀಡಿ ಸಾಮಾಜಿಕ ಜಾಲತಾಣಗಳಲ್ಲಿಅಪಹಾಸ್ಯಕ್ಕೀಡಾಗಿದೆ.
ಪಾಕ್ ಪ್ರಧಾನಿಗೆ ಸೇನಾ ಮುಖ್ಯಸ್ಥ ನೀಡಿದ ಫೋಟೋ ಹಳೆಯ ಚಿತ್ರವಾಗಿದೆ. ಇದು PHL–03 ನದ್ದಾಗಿದ್ದು, ಇದು ಚೀನಾ ಮೂಲದ ಬಹು ರಾಕೆಟ್ ಲಾಂಚರ್ ಆಗಿದೆ. ಇದನ್ನು ಮೂಲತಃ 2019 ರಲ್ಲಿ ಹಂಚಿಕೊಳ್ಳಲಾಗಿದೆ ಮತ್ತು ಛಾಯಾಗ್ರಾಹಕ ಹುವಾಂಗ್ ಹೈ ಅವರ ಆರೋಪಿಸಿದ್ದಾರೆ.
ಪಾಕಿಸ್ತಾನ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರು ಆಯೋಜಿಸಿದ್ದ ಉನ್ನತ ಮಟ್ಟದ ಭೋಜನಕೂಟದಲ್ಲಿ ಈ ಫೋಟೋವನ್ನು ಪ್ರಸ್ತುತಪಡಿಸಲಾಗಿದೆ ಎಂದು ವರದಿಯಾಗಿದೆ. ಈ ಫೋಟೋ ಪಾಕಿಸ್ತಾನದ ಆಪರೇಷನ್ ಬನ್ಯನ್ ಅಲ್–ಮರ್ಸಸ್ನದ್ದಲ್ಲ, ಬದಲಾಗಿ 2019 ರ ಚೀನೀ ಕವಾಯತುಗಳದ್ದು ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ವ್ಯಾಪಕ ಟ್ರೋಲ್ ಮಾಡಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: