ಭಾವಿ ಪತಿಯನ್ನೇ ಬಂಧಿಸಿ ಫೇಮಸ್ ಆಗಿದ್ದ ಲೇಡಿಸಿಂಗಂನ ಬಂಡವಾಳ ಬಯಲು! - Mahanayaka
12:55 AM Wednesday 19 - March 2025

ಭಾವಿ ಪತಿಯನ್ನೇ ಬಂಧಿಸಿ ಫೇಮಸ್ ಆಗಿದ್ದ ಲೇಡಿಸಿಂಗಂನ ಬಂಡವಾಳ ಬಯಲು!

junmoni rabha
05/06/2022

ಗುವಾಹಟಿ: ವಂಚನೆ ಆರೋಪದ ಮೇಲೆ ತನ್ನ ಭಾವಿ ಪತಿಯನ್ನು ಬಂಧಿಸಿ ಖ್ಯಾತಿ ಪಡೆದಿದ್ದ ಅಸ್ಸಾಂ ಪೊಲೀಸ್ ಅಧಿಕಾರಿ ಜುನ್ಮೋನಿ ರಾಭಾ ಅವರನ್ನು ಇದೀಗ ಭ್ರಷ್ಟಾಚಾರ ಆರೋಪದಲ್ಲಿ ಶನಿವಾರ ಪೊಲೀಸರು ಬಂಧಿಸಿದ್ದಾರೆ.


Provided by

ಮಜುಲಿ ಜಿಲ್ಲೆಯ ನ್ಯಾಯಾಲಯವು ಜುನ್ಮೋನಿ ರಾಭಾಗೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ರಭಾ ಇಬ್ಬರು ಗುತ್ತಿಗೆದಾರರು ಹಾಗೂ ತಮ್ಮ ಮಾಜಿ ಗೆಳೆಯ ರಾಣಾ ಪೊಗಾಗ್ ಅವರೊಂದಿಗೆ ಹಣಕಾಸಿನ ವ್ಯವಹಾರಗಳನ್ನು ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ನಾಗಾಂವ್ ಜಿಲ್ಲೆಯ ಕಲಿಯಾಬೋರ್ ಪೊಲೀಸ್ ಠಾಣೆಯಲ್ಲಿ ಪ್ರಸ್ತುತ ಸಬ್ ಇನ್ಸ್‌ಪೆಕ್ಟರ್ (ಎಸ್‌ಐ) ಆಗಿ ಸೇವೆ ಸಲ್ಲಿಸುತ್ತಿರುವ ರಭಾ ಅವರನ್ನು ಭ್ರಷ್ಟಾಚಾರ ಆರೋಪದ ಮೇಲೆ ಸತತ ಎರಡು ದಿನಗಳ ವಿಚಾರಣೆಯ ಬಳಿಕ ಬಂಧಿಸಲಾಗಿದೆ.


Provided by

ಒಎನ್‌ ಜಿಸಿಯಲ್ಲಿ ಉದ್ಯೋಗ ಮತ್ತು ಗುತ್ತಿಗೆ ನೀಡುವುದಾಗಿ ಭರವಸೆ ನೀಡಿ ಕೆಲವರಿಗೆ ವಂಚಿಸಿದ್ದಾರೆ ಎಂದು ತನ್ನ ನಿಶ್ಚಿತ ವರ ಪೊಗಾಗ್ ವಿರುದ್ಧ ರಭಾ ಎಫ್‌ ಐಆರ್ ದಾಖಲಿಸಿ, ಬಂಧಿಸಿದ್ದರು. ಇವರಿಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದು, 2022ರ ನವೆಂಬರ್‌ ನಲ್ಲಿ ಮದುವೆಯಾಗಲು ನಿರ್ಧರಿಸಿದ್ದರು. ಆದ್ರೆ, ಇನ್ನೂ ಪೊಗಾಗ್ ಜೈಲಿನಲ್ಲೇ ಇದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಕಾರಿನ ಡೋರ್ ಲಾಕ್: ಉಸಿರುಗಟ್ಟಿ ಸಾವನ್ನಪ್ಪಿದ ಮೂವರು ಮಕ್ಕಳು

“ಸಂವಿಧಾನ ಶಿಲ್ಪಿ” ಬಿರುದನ್ನೇ ಕೈಬಿಟ್ಟ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿ | ಅಂಬೇಡ್ಕರ್ ಗೆ ಮತ್ತೊಮ್ಮೆ ಅವಮಾನ

ಪಂಜಾಬ್ ರಾಜಕೀಯದಲ್ಲಿ ಬಿಜೆಪಿ ಮಹತ್ತರ ಪಾತ್ರ: ಅಮಿತ್ ಶಾ ಹೇಳಿಕೆ

ಸಾವಿನಲ್ಲೂ ಕರ್ತವ್ಯ ಪ್ರಜ್ಞೆ ಮೆರೆದ ಬಸ್ ಚಾಲಕ

ತಲವಾರಿನಿಂದ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಣೆ: ಮೂವರು ಅರೆಸ್ಟ್

ಇತ್ತೀಚಿನ ಸುದ್ದಿ