ಮದುವೆ ಸಮಾರಂಭದಲ್ಲಿ ತಟ್ಟೆ ಮುಟ್ಟಿದ್ದಕ್ಕೆ ದಲಿತ ಯುವಕನಿಗೆ ಮಾರಣಾಂತಿಕ ಹಲ್ಲೆ
ಉತ್ತರ ಪ್ರದೇಶ: ಮದುವೆ ಸಮಾರಂಭದಲ್ಲಿ ಊಟದ ತಟ್ಟೆ ಮುಟ್ಟಿದ್ದಕ್ಕೆ ದಲಿತ ಯುವಕನಿಗೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಉತ್ತರ ಪ್ರದೇಶದ ವಜೀರ್ಗಂಜ್ ನಲ್ಲಿ ನಡೆದಿದೆ.
ಲಲ್ಲಾ(18) ಹಲ್ಲೆಗೊಳಗಾದ ಯುವಕನಾಗಿದ್ದು, ಸಂದೀಪ್ ಪಾಂಡೆ ಎಂಬವರ ಎಂಬವರ ಮನೆಯಲ್ಲಿ ನಡೆದ ಔತಣಕೂಟಕ್ಕೆ ತೆರಳಿದ್ದ ವೇಳೆ, ಊಟ ಮಾಡಲೆಂದು ತಟ್ಟೆಯೊಂದನ್ನು ಲಲ್ಲಾ ತೆಗೆದುಕೊಂಡಿದ್ದು, ಈ ವೇಳೆ ಸಂದೀಪ್ ಪಾಂಡೆ ಮತ್ತು ಆತನ ಸಹೋದರರು ಲಲ್ಲಾನ ಜಾತಿ ನಿಂದಿಸಿ, ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಈ ವೇಳೆ ತಡೆಯಲು ಬಂದ ಲಲ್ಲಾನ ಹಿರಿಯ ಸಹೋದರ ಸತ್ಯಪಾಲ್ ಮೇಲೆಯೂ ಹಲ್ಲೆ ನಡೆಸಿ, ಅವರ ಬೈಕ್ ನ್ನು ಹಾನಿಗೊಳಿಸಿದ್ದಾರೆ.
ಈ ಘಟನೆಯ ಬಗ್ಗೆ ಗ್ರಾಮದ ಹಿರಿಯರಿಗೆ ದೂರು ನೀಡಿದ್ದಕ್ಕೆ ಮತ್ತೆ ಸಂದೀಪ್ ಮತ್ತು ಆತನ ಸಹೋದರರು ಲಲ್ಲಾನ ಮನೆಗೆ ನುಗ್ಗಿ ಥಳಿಸಿದ್ದಾರೆ ಎಂದು ಕುಟುಂಬದ ರೇಣು ಎಂಬವರು ತಿಳಿಸಿದ್ದಾರೆ.
ಇನ್ನೂ ಆರೋಪಿಗಳಾದ ಸಂದೀಪ್ ಪಾಂಡೆ, ಅಮರೇಶ್ ಪಾಂಡೆ, ಶ್ರವಣ್ ಪಾಂಡೆ, ಸೌರಭ್ ಪಾಂಡೆ, ಅಜಿತ್ ಪಾಂಡೆ, ವಿಮಲ್ ಪಾಂಡೆ ಮತ್ತು ಅಶೋಕ್ ಪಾಂಡೆ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ. ಪ್ರತ್ಯಕ್ಷದರ್ಶಿಗಳ ಹೇಳಿಕೆಯನ್ನು ಪಡೆದು ಬಳಿಕ ಕ್ರಮಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HeAiP3WAQfT6ajtrJVJ4kP
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka