‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ನಿರ್ದೇಶಕನ ಹೊಸ ಸಿನಿಮಾಕ್ಕೆ ನೆಗೆಟಿವ್ ಕಾಮೆಂಟ್ ಗಳ ಸುರಿಮಳೆ
‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ನಿರ್ದೇಶಕ ಇದೀಗ ಮತ್ತೊಂದು ಬಿಜೆಪಿ ಪರ ಪ್ರಚಾರದ ಸಿನಿಮಾವನ್ನು ಹೊರ ತರಲು ಮುಂದಾಗಿದ್ದು, ಸಿನಿಮಾಕ್ಕೆ ಆರಂಭದಲ್ಲೇ ನೆಗೆಟಿವ್ ಕಾಮೆಂಟ್ ಗಳ ಸುರಿಮಳೆ ಸುರಿದಿದೆ.
‘ದಿ ವ್ಯಾಕ್ಸಿನ್ ವಾರ್’ ಎಂಬ ಹೆಸರಿನ ಸಿನಿಮಾವನ್ನು ತರಲು ವಿವೇಕ್ ಅಗ್ನಿಹೋತ್ರಿ ಶೂಟಿಂಗ್ ಆರಂಭಿಸಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಭಾರತ ಎಲ್ಲರಿಗೂ ಉಚಿತ ವ್ಯಾಕ್ಸಿನ್ ಸಿಗುವಂತೆ ಮಾಡಿದ ಸಾಹಸದ ಕಥೆ ಈ ಸಿನಿಮಾದ ಕಥೆ ಅಂತ ಹೇಳಲಾಗುತ್ತಿದೆ.
2024ರ ಚುನಾವಣೆಯಲ್ಲಿ ಬಿಜೆಪಿಗೆ ಸಹಾಯವಾಗುವಂತೆ ಈ ಚಿತ್ರವನ್ನು ಪ್ರಮೋಷನ್ ಮಾಡುವ ಗುರಿ ಹೊಂದಲಾಗಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಈ ಸಿನಿಮಾದ ವಿರುದ್ಧ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿ ನೆಗೆಟಿವ್ ಕಾಮೆಂಟ್ ಹಾಕುತ್ತಿದ್ದಾರೆ.
ಇನ್ನೊಂದೆಡೆಯಲ್ಲಿ ಕೊವಿಡ್ ವ್ಯಾಕ್ಸಿನ್ ನಿಂದ ಆಗಿರುವ ನೆಗೆಟಿವ್ ವಿಚಾರಗಳನ್ನು ಕೂಡ ಸಿನಿಮಾದಲ್ಲಿ ತೋರಿಸಿ ಎನ್ನುವ ಸವಾಲುಗಳು ಕೂಡ ಕಂಡು ಬಂದಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HeAiP3WAQfT6ajtrJVJ4kP
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka