ದೀಪೋತ್ಸವ: ಅಯೋಧ್ಯೆಗೆ ಇಂದು ಪ್ರಧಾನಿ ಮೋದಿ ಭೇಟಿ: ಎಲ್ಲೆಡೆ ಬಿಗಿ ಭದ್ರತೆ
ಅಯೋಧ್ಯೆ: ದೀಪಾವಳಿ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಅಯೋಧ್ಯೆಯ ಸರಯು ನದಿ ತೀರದಲ್ಲಿ ದೀಪೋತ್ಸವ ನಡೆಯಲಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾನುವಾರ ಅಯೋಧ್ಯೆಗೆ ಭೇಟಿ ನೀಡಲಿದ್ದಾರೆ.
ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ಎಲ್ಲೆಡೆ ಬಿಗಿ ಭದ್ರತೆಯನ್ನು ನಿಯೋಜಿಸಲಾಗಿದೆ. ಪ್ರತೀ ವರ್ಷದಂತೆ ಪ್ರಧಾನಿ ಮೋದಿ ನಾಳೆ ದೇಶದ ಸೈನಿಕರ ಜೊತೆಗೆ ದೀಪಾವಳಿಯನ್ನು ಆಚರಿಸಲಿದ್ದಾರೆ. ಆದರೆ ಅದಕ್ಕೂ ಮುನ್ನ ಇಂದು ಅಯೋಧ್ಯೆಯಲ್ಲಿ ಬೆಳಕಿನ ಹಬ್ಬಕ್ಕೆ ಚಾಲನೆ ನೀಡಲಿದ್ದಾರೆ.
ಪ್ರತಿ ಬಾರಿಯಂತೆ ಈ ಬಾರಿಯೂ ಅಯೋಧ್ಯೆಯಲ್ಲಿ ವಿಶೇಷವಾಗಿ ದೀಪಾವಳಿ ಆಚರಿಸಲಾಗುತ್ತಿದೆ. ಸರಯೂ ನದಿ ದಡದಲ್ಲಿ 15 ಲಕ್ಷ ದೀಪಗಳನ್ನು ಹಚ್ಚುವ ಮೂಲಕ ಹೊಸ ಗಿನ್ನಿಸ್ ದಾಖಲೆ ಸೃಷ್ಟಿ ಮಾಡಲಾಗುತ್ತಿದೆ. ಈಗಾಗಲೇ ಗಿನ್ನಿಸ್ ರೆಕಾರ್ಡ್ ತಂಡ ಅಯೋಧ್ಯೆ ತಲುಪಿದ್ದು, ಹಣತೆಗಳ ಎಣಿಕೆ ಶುರು ಮಾಡಿದೆ.
ಇಂದು ಸಂಜೆ 5 ಗಂಟೆಗೆ ಉತ್ತರ ಪ್ರದೇಶದ ಅಯೋಧ್ಯೆಗೆ ಭೇಟಿ ನೀಡಲಿರುವ ಪ್ರಧಾನಿ ಮೋದಿ, ಸಂಜೆ 5.45ಕ್ಕೆ ಶ್ರೀರಾಮನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಬಳಿಕ ರಾಮ ಮಂದಿರ ನಿರ್ಮಾಣಾ ಕಾರ್ಯ ವೀಕ್ಷಿಸಿ, ಶ್ರೀರಾಮ ಕಥಾ ಪಾರ್ಕ್ನಲ್ಲಿ ಶ್ರೀರಾಮನಿಗೆ ಜರುಗಲಿರುವ ಸಾಂಕೇತಿಕ ರಾಜ್ಯಾಭಿಷೇಕದಲ್ಲಿ ಭಾಗಿಯಾಗಲಿದ್ದಾರೆ. ಸಂಜೆ 6.30ಕ್ಕೆ ಸರಯೂ ನದಿ ತೀರದ ಮಹಾ ಆರತಿಯಲ್ಲಿ ಪಾಲ್ಗೊಂಡು, ರಾಮ್ ಕಿ ಪೌಡಿಯಲ್ಲಿ ನಡೆಯಲಿರುವ 3-ಡಿ ‘ಹೊಲೊಗ್ರಾಫಿಕ್ ಪ್ರೊಜೆಕ್ಷನ್ ಮ್ಯಾಪಿಂಗ್ ಶೋ’ ಮತ್ತು ಮ್ಯೂಸಿಕಲ್ ಲೇಸರ್ ಶೋಗೆ ಸಾಕ್ಷಿಯಾಗಲಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka