ಬಟ್ಟೆ ತೆಗೆದರೆ ಮಾತ್ರ ಅತ್ಯಾಚಾರ ಎನ್ನಲು ಸಾಧ್ಯವಿಲ್ಲ: ಮೇಘಾಲಯ ಹೈಕೋರ್ಟ್ - Mahanayaka

ಬಟ್ಟೆ ತೆಗೆದರೆ ಮಾತ್ರ ಅತ್ಯಾಚಾರ ಎನ್ನಲು ಸಾಧ್ಯವಿಲ್ಲ: ಮೇಘಾಲಯ ಹೈಕೋರ್ಟ್

court judgement
17/03/2022


Provided by

ಶಿಲ್ಲಾಂಗ್: ಬಟ್ಟೆ ತೆಗೆದರೆ ಮಾತ್ರ ಅತ್ಯಾಚಾರ ಎನ್ನಲು ಸಾಧ್ಯವಿಲ್ಲ. ಒಳ ಉಡುಪುಗಳಿದ್ದಾಗಲೂ ಎಸಗುವ ಲೈಂಗಿಕ ದೌರ್ಜನ್ಯ ಅತ್ಯಾಚಾರಕ್ಕೆ ಸಮ ಎಂದು ಮೇಘಾಲಯ ಹೈಕೋರ್ಟ್‌ ಹೇಳಿದೆ.

10 ವರ್ಷದ ಬಾಲಕಿಯ ಮೇಲಿನ ಅತ್ಯಾಚಾರ ಪ್ರಕರಣವನ್ನು ಆಲಿಸಿದ ಮುಖ್ಯ ನ್ಯಾಯಮೂರ್ತಿ ಸಂಜಿಬ್ ಬ್ಯಾನರ್ಜಿ ಮತ್ತು ನ್ಯಾಯಮೂರ್ತಿ ಡಬ್ಲ್ಯೂ.ಡಿಯೆಂಗ್ಡೊ ಅವರ ವಿಭಾಗೀಯ ಪೀಠವು, ಅಪರಾಧಿಗೆ ಶಿಕ್ಷೆ ವಿಧಿಸಿದ್ದ ಕೆಳ ಹಂತದ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದಿದೆ.

ಲೈಂಗಿಕ ದೌರ್ಜನ್ಯ ಪ್ರಕರಣದ ಸಂಬಂಧ ವಿಚಾರಣೆ ನಡೆಸಿ ನ್ಯಾಯಾಲಯ, ಅಪರಾಧಿ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 375 (ಬಿ) ಅಡಿಯಲ್ಲಿ ಆರೋಪ ಹೊರಿಸಲಾಗುವುದು ಎಂದು ತಿಳಿಸಿದೆ.

2018ರ ಅ. 31ರಂದು ವಿಚಾರಣಾ ನ್ಯಾಯಾಲಯ, ಅಪರಾಧಿಗೆ 10 ವರ್ಷ ಜೈಲು ಶಿಕ್ಷೆ ಹಾಗೂ 25 ಸಾವಿರ ದಂಡ ವಿಧಿಸಿತ್ತು. ವಿಚಾರಣಾ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಅಪರಾಧಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದ. ಆದರೆ ವಿಚಾರಣಾ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್‌ ಎತ್ತಿ ಹಿಡಿದಿದೆ.

ಆ ಸಮಯದಲ್ಲಿ ತನಗೆ ಯಾವುದೇ ನೋವು ಕಾಣಿಸಲಿಲ್ಲ ಎಂದು ಸಂತ್ರಸ್ತೆ ಹೇಳಲು ಕಾರಣಗಳು ಏನೇ ಇರಲಿ, ವೈದ್ಯಕೀಯ ಪರೀಕ್ಷೆಗೆ ಒಳಗಾದಾಗ ಅವಳು ನೋವಿನ ಬಗ್ಗೆ ದೂರು ನೀಡಿದ್ದಳು. ವೈದ್ಯಕೀಯ ವರದಿಯು ಅದನ್ನೇ ದೃಢಪಡಿಸಿತು ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

2006ರ ಸೆ.23ರಂದು ಈ ಘಟನೆ ನಡೆದಿದ್ದು, ಒಂದು ವಾರದ ನಂತರ ವೈದ್ಯಕೀಯ ಪರೀಕ್ಷೆಯ ಸಮಯದಲ್ಲಿ ಬಾಲಕಿಯ ಖಾಸಗಿ ಭಾಗಗಳಲ್ಲಿ ನೋವು ಕಾಣಿಸಿಕೊಂಡಿತ್ತು. ತಾನು ಆಕೆಯ ಒಳ ಉಡುಪುಗಳನ್ನು ತೆಗೆದಿಲ್ಲ ಎಂದು ಆರೋಪಿ ಹೇಳಿದರೂ, ಲೈಂಗಿಕ ದೌರ್ಜನ್ಯಕ್ಕೆ ಸಾಕಷ್ಟು ಪುರಾವೆಗಳಿವೆ ಎಂದು ನ್ಯಾಯಾಧೀಶರು ಹೇಳಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಜಪಾನ್‍ ನಲ್ಲಿ ಭಾರೀ ಭೂಕಂಪ: ನಾಲ್ವರ ಸಾವು, 90 ಮಂದಿಗೆ ಗಾಯ

ಹಿಜಾಬ್ ಗೆ ಅವಕಾಶ ಕೋರಿ ಕರ್ನಾಟಕ ಬಂದ್: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ

ಪ್ರಧಾನಿ ಮೋದಿ ಅವರ ವಿದೇಶಾಂಗ ನೀತಿ ಡೊಂಕಾಗುತ್ತಿದೆ: ಬಿಜೆಪಿ ಸಂಸದ ಸುಬ್ರಮಣಿಯನ್‌ ಸ್ವಾಮಿ ವ್ಯಂಗ್ಯ

ಏರ್‌ಪೋರ್ಟ್‌ ನಲ್ಲಿ ಬಾಂಬ್ ಇಟ್ಟ ಪ್ರಕರಣ: ಅಪರಾಧಿ ಆದಿತ್ಯ ರಾವ್‍ಗೆ 20 ವರ್ಷ ಜೈಲು ಶಿಕ್ಷೆ

ಪಿಲ್ಲರ್ ಗೆ ಡಿಕ್ಕಿ ಹೊಡೆದ ಟಿಪ್ಪರ್: ಬೆಂಕಿ ಹತ್ತಿಕೊಂಡು ಚಾಲಕ ಸಜೀವ ದಹನ

 

ಇತ್ತೀಚಿನ ಸುದ್ದಿ