ಭಾರತದ ಪಬ್ ಜೀ ಪ್ರಿಯರಿಗೆ  ಸಿಹಿ ಸುದ್ದಿ! - Mahanayaka
6:56 PM Saturday 14 - September 2024

ಭಾರತದ ಪಬ್ ಜೀ ಪ್ರಿಯರಿಗೆ  ಸಿಹಿ ಸುದ್ದಿ!

24/11/2020

ಭಾರತದಲ್ಲಿ ಚೀನಿ  ಆ್ಯಪ್  ನಿಷೇಧದಿಂದ ನಿರಾಶೆಗೊಂಡಿರುವ  ಪಬ್ ಜೀ ಪ್ರಿಯರಿಗೆ ಸಿಹಿ ಸುದ್ದಿಯೊಂದು ದೊರಕಿದ್ದು , ಭಾರತದಲ್ಲಿ ತನ್ನ ಪಬ್‌ ಜೀ ಮೊಬೈಲ್ ಇಂಡಿಯಾ ಸೇವೆಗಳನ್ನು ಬಿಡುಗಡೆ ಮಾಡಲು ಪಬ್‌ಜೀ ಕಾರ್ಪೋರೇಶನ್ ಸಿದ್ಧತೆ ನಡೆಸಿದೆ.

ಪಬ್ ಜೀ ‌ಅನ್ನು ಅಧಿಕೃತವಾಗಿ ಬಿಡುಗಡೆ ಮಾಡುವ ಮುನ್ನ ಪೂರ್ವ ನೋಂದಣಿ ಪ್ರಕ್ರಿಯೆಗೆ ಚಾಲನೆ ಕೊಟ್ಟಿದೆ. ತನ್ನ TapTap‌ ಆಪ್‌ ಮೂಲಕ ಈ ಪೂರ್ವ ನೋಂದಣಿಯ ಪ್ರಕ್ರಿಯೆಯಲ್ಲಿ ಗೇಮಿಂಗ್ ಪ್ರಿಯರು ಭಾಗಿಯಾಗಬಹುದಾಗಿದೆ.

TapTap‌ ಜಾಲತಾಣಕ್ಕೆ ಭೇಟಿ ಕೊಟ್ಟು, ಅಲ್ಲಿರುವ ಎಪಿಕೆ ಲಿಂಕ್‌ ಮೇಲೆ ಕ್ಲಿಕ್ ಮಾಡುವ ಮೂಲಕ TapTap‌ ಕಿರು ತಂತ್ರಾಶವನ್ನು ಡೌನ್ಲೋಡ್ ಮಾಡಿಕೊಳ್ಳಬೇಕು. ಆ ಮೂಲಕ ನಿಮ್ಮ ಹೆಸರಿನಲ್ಲಿ ಹೊಸ ಖಾತೆ ತೆರೆದು, ಪಬ್‌ಜೀ ಮೊಬೈಲ್ ಇಂಡಿಯಾ ಎಂದು ಸರ್ಚ್ ಮಾಡಿಕೊಂಡು, ಅಲ್ಲಿ ಪೂರ್ವ ನೋಂದಣಿ ಪ್ರಕ್ರಿಯೆಯನ್ನು ಮುಗಿಸಬೇಕು.


Provided by

 


ಇತ್ತೀಚಿನ ಸುದ್ದಿ