ಫ್ರೀ ಕೊರೊನಾ ಲಸಿಕೆ: ರಾಜಕೀಯ ಮಾಡಬೇಡಿ, ಲಸಿಕೆ ಇನ್ನೂ ಬಂದಿಲ್ಲ ಎಂದ ಮೋದಿ - Mahanayaka

ಫ್ರೀ ಕೊರೊನಾ ಲಸಿಕೆ: ರಾಜಕೀಯ ಮಾಡಬೇಡಿ, ಲಸಿಕೆ ಇನ್ನೂ ಬಂದಿಲ್ಲ ಎಂದ ಮೋದಿ

24/11/2020

ನವದೆಹಲಿ:  ಫ್ರೀ ಕೊವಿಡ್ ಲಸಿಕೆಯ ನಿರೀಕ್ಷೆಯಲ್ಲಿದ್ದವರಿಗೆ ಇದೀಗ ನಿರಾಸೆಯಾಗಿದ್ದು, ಕೋವಿಡ್ ಲಸಿಕೆ ಯಾವಾಗ ಬರಲಿದೆ ಎಂದು ನಿರ್ಧಾರವಾಗಿಲ್ಲ ಎಂಬ ಬಗ್ಗೆ ಹೆಚ್ಚಿನ ಮಾಹಿತಿ ಇನ್ನೂ ಲಭ್ಯವಾಗಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಕೋವಿಡ್ ವ್ಯಾಕ್ಸಿನ್ ವಿಚಾರದಲ್ಲಿ ಹಲವರಿಂದ ರಾಜಕಾರಣ ಮಾಡಲಾಗುತ್ತಿದೆ. ಈ ರಾಜಕಾರಣ ಮಾಡುವವರನ್ನು ತಡೆಯಲಾಗದು. ಕೊರೊನಾ ಲಸಿಕೆ ಯಾವಾಗ ಬರಲಿದೆ ಎಂಬುದು ನಿರ್ಧಾರವಾಗಿಲ್ಲ, ಆದರೆ ವಿಜ್ಞಾನಿಗಳು ಅವರ ಕೆಲಸ ಮಾಡುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

 ಯಾವುದೇ ಸಮಯದಲ್ಲೂ ಲಸಿಕೆ ಲಭ್ಯವಾಗಬಹುದು. ರಾಜ್ಯ ಸರ್ಕಾರಗಳು ಲಸಿಕೆ ಸಂಗ್ರಹಕ್ಕೆ ಕೋಲ್ಡ್ ಸ್ಟೋರೇಜ್ ವ್ಯವಸ್ಥೆ ಮಾಡಿಕೊಳ್ಳಬೇಕು. ಸಿಬ್ಬಂದಿಗಳು ಮಾನಿಟರಿಂಗ್, ಆನ್ ಲೈನ್ ಟ್ರೇನಿಂಗ್ ನೀಡಿ ಸರ್ವಸನ್ನದ್ಧರನ್ನಾಗಿ ಮಾಡಬೇಕು. ಲಸಿಕೆ ಬಂದ ಬಳಿಕ ಎಲ್ಲರಿಗೂ ಲಭ್ಯವಾಗುವ ವ್ಯವಸ್ಥೆ ಮಾಡಲಾಗುವುದು ಎಂದು ಮೋದಿ ಹೇಳಿದರು.Disclaimer:

www.mahanayaka.in ಅಂತರ್ಜಾಲ ಮಾಧ್ಯಮದಲ್ಲಿ ಪ್ರಕಟವಾದ ಸುದ್ದಿಗಳಲ್ಲಿ ಯಾರದ್ದೇ ಭಾವನೆಗಳಿಗೆ ಧಕ್ಕೆಯಾಗುವಂತಹ ಅಥವಾ ನೋವುಂಟಾಗುವಂತಹ ಅಥವಾ ನಿಮಗೆ ಆಕ್ಷೇಪಾರ್ಹ ಎನಿಸಿದಂತಹ ಅಂಶಗಳ ಬಗ್ಗೆ ಓದುಗರು 9686872149 ನಂಬರ್ ಗೆ ಸುದ್ದಿಯ ಲಿಂಕ್ ಸಹಿತ ನಿಮ್ಮ ದೂರು ಸಲಹೆಗಳನ್ನು ವಾಟ್ಸಾಪ್ ಮಾಡಬಹುದು. ಅಥವಾ ಕರೆ ಮಾಡಬಹುದು. ನಿಮ್ಮ ದೂರನ್ನು ಪರಿಶೀಲಿಸಿ, ಅಂತಹ ಆಕ್ಷೇಪಾರ್ಹ ಅಂಶಗಳನ್ನು ತೆಗೆದು ಹಾಕಲು ಮಾಧ್ಯಮವು ಬದ್ಧವಾಗಿದೆ.

ಇತ್ತೀಚಿನ ಸುದ್ದಿ