ಅಮಿತ್ ಶಾ ಏನು ಮಲಗಿದ್ದಾರೆಯೇ? | ತೇಜಸ್ವಿ ಸೂರ್ಯಗೆ ಒವೈಸಿ ತಿರುಗೇಟು - Mahanayaka

ಅಮಿತ್ ಶಾ ಏನು ಮಲಗಿದ್ದಾರೆಯೇ? | ತೇಜಸ್ವಿ ಸೂರ್ಯಗೆ ಒವೈಸಿ ತಿರುಗೇಟು

24/11/2020

ಹೈದರಾಬಾದ್: ಹೈದರಾಬಾದ್ ಗೆ ಭೇಟಿ ನೀಡಿದ್ದ ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ, ಸಂಸದ ಅಸಾದುದ್ದೀನ್ ಒವೈಸಿ ಮತ್ತು ಅವರ ಸಹೋದರ ಅಕ್ಬರುದ್ದೀನ್ ಒವೈಸಿ ವಿರುದ್ಧ ತೀವ್ರ ಕಿಡಿಕಾರಿದ್ದರು. ಈ ಸಂಬಂಧ ಅಸಾದುದ್ದೀನ್ ಒವೈಸಿ ಇಂದು ತೇಜಸ್ವಿ ಸೂರ್ಯಗೆ ತಿರುಗೇಟು ನೀಡಿದ್ದಾರೆ.


Provided by

 

ಸಂಸದ ಅಸಾದುದ್ದೀನ್ ಒವೈಸಿ ಮತ್ತು ಅವರ ಸಹೋದರ ಅಕ್ಬರುದ್ದೀನ್ ಒವೈಸಿ ಇಬ್ಬರೂ ವಿಭಜಕ ಮತ್ತು ಕೋಮುವಾದಿ ರಾಜಕೀಯದ ಆಟ ಆಡುತ್ತಿದ್ದಾರೆ. ಹೈದರಾಬಾದ್ನಲ್ಲಿ ರೋಹಿಂಗ್ಯಾ ಮುಸ್ಲಿಮರಿಗೆ ಅವಕಾಶ ನೀಡುತ್ತಿದ್ದಾರೆಯೇ ಹೊರತು ಅಭಿವೃದ್ಧಿಗೆ ಅವಕಾಶ ನೀಡುತ್ತಿಲ್ಲ ಎಂದು ತೇಜಸ್ವಿ ಸೂರ್ಯ ಒವೈಸಿ ವಿರುದ್ಧ ಕಿಡಿಕಾರಿದ್ದರು.

 

ತೇಜಸ್ವಿ ಸೂರ್ಯ ಪ್ರಶ್ನೆಗೆ ಉತ್ತರಿಸಿರುವ ಒವೈಸಿ, ಚುನಾವಣೆಯ ಪಟ್ಟಿಯಲ್ಲಿ 30,000 ರೋಹಿಂಗ್ಯಾಗಳು ಇದ್ದರೆ. ಗೃಹ ಸಚಿವ ಅಮಿತ್ ಶಾ ಏನು ಮಾಡುತ್ತಿದ್ದಾರೆ? ಅವರು ಮಲಗಿದ್ದಾರೆಯೇ? 30-40 ಸಾವಿರ ರೋಹಿಂಗ್ಯಾಗಳನ್ನು ಹೇಗೆ ಪಟ್ಟಿ ಮಾಡಲಾಗಿದೆ ಎಂಬುದನ್ನು ನೋಡುವುದು ಅವರ ಕೆಲಸವಲ್ಲವೇ? ಬಿಜೆಪಿ ಪ್ರಾಮಾಣಿಕವಾಗಿದ್ದರೆ ನಾಳೆ ಸಂಜೆಯೊಳಗೆ ಅಂತಹ 1,000 ಹೆಸರುಗಳನ್ನು ತೋರಿಸಬೇಕು ಎಂದು ಸವಾಲು ಹಾಕಿದ್ದಾರೆ.



ಇತ್ತೀಚಿನ ಸುದ್ದಿ