ಕರ್ನಾಟಕದಲ್ಲಿ 5ಜಿ ಸ್ಥಿರ ವೈರ್ ಲೆಸ್: ಮುಂಚೂಣಿಯಲ್ಲಿ ರಿಲಯನ್ಸ್ ಜಿಯೋ
ಟ್ರಾಯ್ ಬಿಡುಗಡೆ ಮಾಡಿರುವ ಇತ್ತೀಚಿನ ದತ್ತಾಂಶದ ಪ್ರಕಾರ, ಜೂನ್ 2026 ರಲ್ಲಿ ಕರ್ನಾಟಕದ 5G ಫಿಕ್ಸೆಡ್ ವೈರ್ ಲೆಸ್ ಆಕ್ಸೆಸ್ (FWA) ಮಾರುಕಟ್ಟೆಯಲ್ಲಿ ರಿಲಯನ್ಸ್ ಜಿಯೋ ತನ್ನ ಮುನ್ನಡೆಯನ್ನು ಕಾಯ್ದುಕೊಂಡಿದೆ. ಪ್ರಸ್ತುತ ಕಂಪನಿಯು 4,53,885 FWA ಚಂದಾದಾರರನ್ನು ಹೊಂದಿದ್ದು, ಇದು ರಾಜ್ಯದ ಒಟ್ಟು 5G FWA ಮಾರುಕಟ್ಟೆಯ ಶೇಕಡಾ 58.9 ರಷ್ಟಿದೆ. ಜೂನ್ ತಿಂಗಳೊಂದರಲ್ಲೇ ಜಿಯೋ 5,110 ಹೊಸ ಚಂದಾದಾರರನ್ನು ಸೇರ್ಪಡೆಗೊಳಿಸಿಕೊಂಡಿದೆ.
ರಾಜ್ಯದಲ್ಲಿ ಭಾರ್ತಿ ಏರ್ಟೆಲ್ ಮತ್ತು ರಿಲಯನ್ಸ್ ಜಿಯೋ ಮಾತ್ರ 5G FWA ಸೇವೆಗಳನ್ನು ಒದಗಿಸುತ್ತಿದ್ದು, ಜಿಯೋ ತನ್ನ ಪ್ರಬಲ ಸ್ಥಾನವನ್ನು ಕಾಯ್ದುಕೊಂಡಿದೆ. ಇದಲ್ಲದೆ, ಜೂನ್ನಲ್ಲಿ 12,766 ಹೊಸ ಸೇರ್ಪಡೆಗಳೊಂದಿಗೆ ಒಟ್ಟು 3,10,129 ಚಂದಾದಾರರನ್ನು ಹೊಂದುವ ಮೂಲಕ ಕರ್ನಾಟಕದಲ್ಲಿ 5G UBR ಸ್ಥಿರ-ವೈರ್ಲೆಸ್ ಸೇವೆ ಒದಗಿಸುವ ಏಕೈಕ ಆಪರೇಟರ್ ಆಗಿ ಜಿಯೋ ಮುಂದುವರಿದಿದೆ.
ಮೊಬೈಲ್ ವೈರ್ ಲೆಸ್ ವಿಭಾಗದಲ್ಲೂ ಜಿಯೋ ತನ್ನ ಬಲವಾದ ಉಪಸ್ಥಿತಿಯನ್ನು ಕಾಯ್ದುಕೊಂಡಿದ್ದು, ಒಟ್ಟು 2,67,61,089 ಚಂದಾದಾರರೊಂದಿಗೆ ರಾಜ್ಯದ ಒಟ್ಟು ಮೊಬೈಲ್ ಬಳಕೆದಾರರಲ್ಲಿ ಶೇಕಡಾ 31.9 ರಷ್ಟು ಪಾಲು ಪಡೆದುಕೊಂಡಿದೆ. ಜೂನ್ ತಿಂಗಳಲ್ಲಿ ಕಂಪನಿಯು 95,705 ಹೊಸ ವೈರ್ಲೆಸ್ ಗ್ರಾಹಕರನ್ನು ಪಡೆದುಕೊಂಡಿದೆ. ಜಿಯೋದ ವಿಎಲ್ಆರ್ (ಸಕ್ರಿಯ ಗ್ರಾಹಕರ) ಅನುಪಾತವು ಶೇಕಡಾ 91.60 ರಷ್ಟಿದ್ದು, ಒಟ್ಟು 2,45,13,158 ಸಕ್ರಿಯ ಚಂದಾದಾರರನ್ನು ಹೊಂದಿದೆ.
ವೈರ್ ಲೈನ್ ವಿಭಾಗದಲ್ಲಿ ಕಂಪನಿಯು 12,75,657 ಸಂಪರ್ಕಗಳನ್ನು ಹೊಂದಿದ್ದು, ಶೇಕಡಾ 21.1 ರಷ್ಟು ಮಾರುಕಟ್ಟೆ ಪಾಲು ತನ್ನದಾಗಿಸಿಕೊಂಡಿದೆ. ಜೂನ್ನಲ್ಲಿ ಈ ವಿಭಾಗಕ್ಕೆ 15,359 ಹೊಸ ಸಂಪರ್ಕಗಳು ಸೇರ್ಪಡೆಯಾಗಿವೆ. ಎಂ2ಎಂ ಸೆಲ್ಯುಲಾರ್ ಸಂಪರ್ಕಗಳ ದತ್ತಾಂಶವನ್ನು ಟ್ರಾಯ್ ರಾಷ್ಟ್ರೀಯ ಮಟ್ಟದಲ್ಲಿ ಮಾತ್ರ ಬಿಡುಗಡೆ ಮಾಡಿದ್ದು, ಕರ್ನಾಟಕದ ವೃತ್ತ ಮಟ್ಟದ ವಿವರಗಳು ಲಭ್ಯವಿಲ್ಲ. ಒಟ್ಟಾರೆಯಾಗಿ, ಟ್ರಾಯ್ನ ಇತ್ತೀಚಿನ ವರದಿಯು ಕರ್ನಾಟಕದಲ್ಲಿ ರಿಲಯನ್ಸ್ ಜಿಯೋ ವಿಶೇಷವಾಗಿ 5G FWA ವಿಭಾಗದಲ್ಲಿ ತನ್ನ ಸ್ಪಷ್ಟ ಮೇಲುಗೈಯನ್ನು ಸಾಧಿಸಿರುವುದನ್ನು ತೋರಿಸುತ್ತದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD



























