ಭೀಕರ ಅಪಘಾತ: ಕಾರಿನಲ್ಲಿದ್ದ ಐದು ಮಂದಿಯೂ ಸ್ಥಳದಲ್ಲಿಯೇ ಸಾವು - Mahanayaka

ಭೀಕರ ಅಪಘಾತ: ಕಾರಿನಲ್ಲಿದ್ದ ಐದು ಮಂದಿಯೂ ಸ್ಥಳದಲ್ಲಿಯೇ ಸಾವು

kerala
21/06/2021

ಕೋಝಿಕ್ಕೋಡ್: ಕೇರಳದ ಕೋಝಿಕ್ಕೋಡ್-ಪಾಲಕ್ಕಾಡ್ ಹೆದ್ದಾರಿಯಲ್ಲಿ ಸೋಮವಾರ ಬೆಳಗ್ಗೆ ಕಾರು ಹಾಗೂ ಲಾರಿ ನಡುವೆ ನಡೆದ  ಮುಖಾಮುಖಿ ಡಿಕ್ಕಿಯಲ್ಲಿ ಐದು ಮಂದಿ ಮೃತಪಟ್ಟ ದಾರುಣ ಘಟನೆ ನಡೆದಿದೆ.

ರಾಮನಟ್ಟುಕರದ ಪುಲಿಂಜೋಡ್‌ ಬಳಿ ಬೆಳಿಗ್ಗೆ ಸುಮಾರು 4.45ಕ್ಕೆ ಅಪಘಾತ ಸಂಭವಿಸಿದ್ದು, ಕಾರಿನಲ್ಲಿ ಪ್ರಯಣಿಸುತ್ತಿದ್ದ ಎಲ್ಲಾ ಐದು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ  ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪಾಲಕ್ಕಾಡ್‌ ಮೂಲದ ನಜೀರ್‌, ಸುಬೇರ್‌, ಮೊಹಮ್ಮದ್‌ ಜಹೀರ್‌, ಅಸೈನಾರ್‌, ತಹೀರ್‌ ಮೃತಪಟ್ಟವರಾಗಿದ್ದು,  ಇವರು ಕರಿಪುರದ ಬಳಿಯಿರುವ ಕ್ಯಾಲಿಕಟ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹಿಂತಿರುಗುತ್ತಿದ್ದರು ಎಂದು ತಿಳಿದು ಬಂದಿದೆ.

ಇತ್ತೀಚಿನ ಸುದ್ದಿ