ಭೀಕರ ಅಪಘಾತ: ಬೈಕ್ ಸವಾರನ ಪ್ರಾಣ ಉಳಿಸಲು ಹೋಗಿ ಕಾರಿನಲ್ಲಿದ್ದ 6 ಮಂದಿಯೂ ಸಾವು - Mahanayaka
11:55 PM Thursday 13 - November 2025

ಭೀಕರ ಅಪಘಾತ: ಬೈಕ್ ಸವಾರನ ಪ್ರಾಣ ಉಳಿಸಲು ಹೋಗಿ ಕಾರಿನಲ್ಲಿದ್ದ 6 ಮಂದಿಯೂ ಸಾವು

car accident in up
25/06/2021

ಬಲರಾಂಪುರ್: ದೇವರ ದರ್ಶನಕ್ಕೆ ತೆರಳುತ್ತಿದ್ದ  6 ಮಂದಿ ಕಾರು ಅಪಘಾತದಲ್ಲಿ ಸಾವನ್ನಪ್ಪಿರುವ ದಾರುಣ ಘಟನೆ ಉತ್ತರ ಪ್ರದೇಶದ ಬಲರಾಂಪುರದಲ್ಲಿ ನಡೆದಿದ್ದು, ಬೈಕ್ ಸವಾರನ ಪ್ರಾಣ ಉಳಿಸಲು ಹೋಗಿ ಕಾರಿನಲ್ಲಿದ್ದ 6 ಮಂದಿ ಕೂಡ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಬಲರಾಂಪುರ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 730ರ ತುಳಸಿಪುರ ರಸ್ತೆ ಬಳಿ ಈ ಘಟನೆ ನಡೆದಿದ್ದು, ದೇವಸ್ಥಾನವೊಂದಕ್ಕೆ ಕಾರಿನಲ್ಲಿ 6 ಮಂದಿ ತೆರಳುತ್ತಿದ್ದರು ಎಂದು ಹೇಳಲಾಗಿದೆ. ಏಕಾಏಕಿ ವೇಗವಾಗಿ ಬಂದು ಕಾರಿಗೆ ಡಿಕ್ಕಿ ಹೊಡೆಯಲಿದ್ದ  ಬೈಕ್ ನ್ನು ತಪ್ಪಿಸುವ ಬರದಲ್ಲಿ ಕಾರು ಚಾಲಕನ ನಿಯಂತ್ರಣ ತಪ್ಪಿದ್ದು, ಸಮೀಪದ ಕೆರೆಗೆ ಮಗುಚಿಬಿದ್ದಿದೆ.

ಘಟನೆಯ ಪರಿಣಾಮ ಮೂವರು ಮಕ್ಕಳು, ಇಬ್ಬರು ಯುವಕರು ಹಾಗೂ ಓರ್ವ ಮಹಿಳೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಇನ್ನೂ ಬೈಕ್ ಕೂಡ ಮಗುಚಿ ಬಿದ್ದಿದ್ದು ಸವಾರನಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.

ಇತ್ತೀಚಿನ ಸುದ್ದಿ