ಬಿಜೆಪಿ ಚುನಾವಣೆಗೆ ಮಾತ್ರ ಹಿಂದುಳಿದ ವರ್ಗಗಳನ್ನು ಬಳಸುತ್ತಿರುವುದು ಬಯಲಾಗಿದೆ | ಮಾಯಾವತಿ ಆಕ್ರೋಶ - Mahanayaka

ಬಿಜೆಪಿ ಚುನಾವಣೆಗೆ ಮಾತ್ರ ಹಿಂದುಳಿದ ವರ್ಗಗಳನ್ನು ಬಳಸುತ್ತಿರುವುದು ಬಯಲಾಗಿದೆ | ಮಾಯಾವತಿ ಆಕ್ರೋಶ

mayawati
24/09/2021


Provided by

ಲಕ್ನೋ: ಹಿಂದುಳಿದ ವರ್ಗಗಳ ಜಾತಿ ಗಣತಿ ನಡೆಸಲು ನಿರಾಕರಿಸಿರುವ ಕೇಂದ್ರ ಸರ್ಕಾರದ ಧೋರಣೆಗೆ ಬಹುಜನ ಸಮಾಜ ಪಾರ್ಟಿ(BSP)ಯ ವರಿಷ್ಠೆ ಮಾಯಾವತಿ ವಿರೋಧ ವ್ಯಕ್ತಪಡಿಸಿದ್ದು, ಬಿಜೆಪಿ ಚುನಾವಣಾ ಹಿತಾಸಕ್ತಿಗಾಗಿ ಮಾತ್ರ ಈ ಸಮುದಾಯವನ್ನು ಬಳಸಿಕೊಳ್ಳುತ್ತಿರುವುದನ್ನು ಇದು ಬಹಿರಂಗಪಡಿಸಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


Provided by

ಹಿಂದುಳಿದ ವರ್ಗಗಳ ಜಾತಿ ಗಣತಿ ನಡೆಸಲು ಆಡಳಿತಾತ್ಮಕವಾಗಿ ಕಷ್ಟಕರ ಮತ್ತು ತೊಡಕಿನ ಕೆಲಸ. ಅಲ್ಲದೇ ಇಂಥ ಮಾಹಿತಿಯನ್ನು ಗಣತಿ ವ್ಯಾಪ್ತಿಯಿಂದ ಹೊರಗಿಟ್ಟಿರುವುದು ಪ್ರಜ್ಞಾಪೂರ್ವಕ ನಿರ್ಧಾರ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದ ಬೆನ್ನಲ್ಲೇ ಮಾಯಾವತಿ ಈ ಪ್ರತಿಕ್ರಿಯೆ ನೀಡಿದ್ದಾರೆ.

ಕೇಂದ್ರ ಸರ್ಕಾರವು ಹಿಂದುಳಿದ ವರ್ಗಗಳ ಜಾತಿ ಗಣತಿಯನ್ನು ನಡೆಸಲು ಸುಪ್ರೀಂ ಕೋರ್ಟ್‌ನಲ್ಲಿ ಅಫಿಡವಿಟ್ ಸಲ್ಲಿಸುವ ಮೂಲಕ, ಬಿಜೆಪಿ ತನ್ನ ಚುನಾವಣಾ ಹಿತಾಸಕ್ತಿಗಾಗಿ ಒಬಿಸಿಯನ್ನು ಹೇಗೆ ಬಳಸಿಕೊಳ್ಳುತ್ತದೆ ಎಂಬುದನ್ನು ಬಹಿರಂಗಪಡಿಸಿದೆ. ಇದು ತೀವ್ರ ಕಳವಳಕಾರಿ ವಿಷಯ. ಇದರಿಂದ ಬಿಜೆಪಿಯ ಮಾತು ಮತ್ತು ಕೃತಿ ನಡುವೆ ಎಷ್ಟು ವ್ಯತ್ಯಾಸವಿದೆ ಎಂಬುದು ಗೊತ್ತಾಗುತ್ತದೆ ಎಂದು ಅವರು ಟೀಕಿಸಿದ್ದಾರೆ.


Provided by

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/KPRE32QAEFL3ZvRW2wbYvj

ಇನ್ನಷ್ಟು ಸುದ್ದಿಗಳು…

ತಾತಾ ಆದ ಮಾಜಿ ಮುಖ್ಯಮಂತ್ರಿ ಕುಮಾಸ್ವಾಮಿ | ದೇವೇಗೌಡ್ರ ಮನೆಯಲ್ಲಿ ಸಂಭ್ರಮ

ಪ್ರತಿಭಟನಾಕಾರನ ದೇಹದ ಮೇಲೆ ಹಾರಿಹಾರಿ ಬಿದ್ದಿದ್ದ ಪತ್ರಕರ್ತ ಅರೆಸ್ಟ್

ಕ್ಯಾನ್ಸರ್ ನ್ನು ಗೆದ್ದವ ಪಾರ್ಟಿಯಲ್ಲಿ ಬಿಯರ್ ಬ್ಯಾರೆಲ್ ಸ್ಫೋಟಗೊಂಡು ಮೃತಪಟ್ಟ!

ಟಾಂಗಾ ಮೂಲಕ ವಿಧಾನಸೌಧಕ್ಕೆ ಬಂದ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್!

ಮೃತಪಟ್ಟ ಪ್ರತಿಭಟನಾಕಾರನ ಮೃತದೇಹಕ್ಕೆ ಥಳಿಸಿ, ಒದ್ದು ವಿಕೃತಿ ಮೆರೆದ ಪತ್ರಕರ್ತ

ಮನಮೋಹನ್ ಸಿಂಗ್ ವಿಮಾನದಲ್ಲಿಯೇ ಪತ್ರಿಕಾಗೋಷ್ಠಿ ನಡೆಸಿದ್ದರು | ಮೋದಿ ಫೋಟೋಗೆ ಕಾಂಗ್ರೆಸ್ ತಿರುಗೇಟು

ರಕ್ತದಲ್ಲಿ ಹಿಮೋಗ್ಲೋಬಿನ್ ಕಡಿಮೆಯಾದರೆ ಗಂಭೀರ ಸಮಸ್ಯೆ ಉಂಟಾಗಬಹುದು | ಇದಕ್ಕೆ ಪರಿಹಾರವೇನು?

ಸಾಲ ತೀರಿಸಲು ಸಿಎಂನ ಪ್ರತಿಮೆಯನ್ನೇ ಮಾರಾಟಕ್ಕಿಟ್ಟ ಅಭಿಮಾನಿ!

ಇತ್ತೀಚಿನ ಸುದ್ದಿ