ಬಿಜೆಪಿ ವಿರುದ್ಧ ಮತ್ತೆ ಅಸಮಾಧಾನ  ವ್ಯಕ್ತಪಡಿಸಿದ ನಿತೀಶ್ ಕುಮಾರ್! - Mahanayaka

ಬಿಜೆಪಿ ವಿರುದ್ಧ ಮತ್ತೆ ಅಸಮಾಧಾನ  ವ್ಯಕ್ತಪಡಿಸಿದ ನಿತೀಶ್ ಕುಮಾರ್!

08/02/2021

ಪಾಟ್ನಾ: ಬಿಹಾರ ಸಿಎಂ ನಿತೀಶ್ ಕುಮಾರ್ ಅವರು ಸಂಪುಟ ವಿಸ್ತರಣೆ ನಡೆಸಲು ಬಿಜೆಪಿ ಕೋಟಾದಿಂದ ಆಯ್ಕೆಯಾಗಬೇಕಿರುವ ಸಚಿವರ ಪಟ್ಟಿಗಾಗಿ ಕಾಯುವಂತಾಗಿದೆ. ಅತ್ತ ಬಿಜೆಪಿಯಿಂದ ಯಾವುದೇ ಪಟ್ಟಿಗಳು ಇನ್ನು ಬಂದಿಲ್ಲ. ಹೀಗಾಗಿ ನಿತೀಶ್ ಕುಮಾರ್ ಅವರು ಇದೀಗ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಾಟ್ನಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಬಿಜೆಪಿ ಪಟ್ಟಿ ಕೈಸೇರಿದ ತಕ್ಷಣ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ಹೇಳಿದ್ದಾರೆ. ಕರ್ನಾಟಕದಲ್ಲಿ ಯಡಿಯೂರಪ್ಪ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ವಿಳಂಬವಾದಂತೆಯೇ ಬಿಹಾರದಲ್ಲಿಯೂ ಅದೇ ಸ್ಥಿತಿ  ನಿರ್ಮಾಣವಾಗಿದೆ.

ಬಿಜೆಪಿ ಕೋಟಾದಿಂದ ಮಂತ್ರಿಯಾಗುವವರ ಪಟ್ಟಿಯನ್ನು ಒದಗಿಸದೇ ಬಿಜೆಪಿ ಸಂಪುಟ ವಿಸ್ತರಣೆಯನ್ನು ವಿಳಂಬ ಮಾಡುತ್ತಿದೆ ಎಂದು ಈ ಹಿಂದೆಯೂ ನಿತೀಶ್ ಕುಮಾರ್ ಹೇಳಿದ್ದರು. ಇದೀಗ ಮತ್ತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇತ್ತೀಚಿನ ಸುದ್ದಿ