ಲೈಂಗಿಕ ಗೊಂಬೆಯನ್ನು ಅದ್ದೂರಿಯಾಗಿ ಮದುವೆಯಾದ ಬಾಡಿ ಬಿಲ್ಡರ್! - Mahanayaka

ಲೈಂಗಿಕ ಗೊಂಬೆಯನ್ನು ಅದ್ದೂರಿಯಾಗಿ ಮದುವೆಯಾದ ಬಾಡಿ ಬಿಲ್ಡರ್!

27/11/2020

ಪ್ರಪಂಚ ಎಷ್ಟೊಂದು ವಿಲಕ್ಷಣವಾಗಿದೆ. ಮಾನವ ಸಂಬಂಧಗಳು ಆಟಿಕೆ ವಸ್ತುಗಳ ಜೊತೆಗೆ ಮಾಯವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಕಝಾಕಿಸ್ಥಾನದ ಬಾಡಿ ಬಿಲ್ಡರ್ ಓರ್ವ ತನ್ನ ಲೈಂಗಿಕ ಗೊಂಬೆಯನ್ನು ಮದುವೆಯಾಗುವ ಮೂಲಕ ಸುದ್ದಿಯಲ್ಲಿದ್ದಾನೆ.

ಈತ ಎಷ್ಟೊಂದು ವಿಚಿತ್ರವಾಗಿ ಮಾತನಾಡುತ್ತಾನೆ ಎಂದರೆ, 2019ರಲ್ಲಿ ಈತ ಈ ಲೈಂಗಿಕ ಗೊಂಬೆಗೆ ಮದುವೆಯ ಬಗ್ಗೆ ಪ್ರಸ್ತಾಪಿಸಿದನಂತೆ, ಅದಕ್ಕೂ 8 ತಿಂಗಳ ಹಿಂದೆ ಅದೇ ಲೈಂಗಿಕ ಗೊಂಬೆಯ ಜೊತೆಗೆ ಡೇಟಿಂಗ್ ನಲ್ಲಿದ್ದನಂತೆ! ಅದೇ ಸಂದರ್ಭದಲ್ಲಿ ಕೊರೊನಾ ವೈರಸ್ ಬಂದಿದ್ದರಿಂದಾಗಿ ಅವನ ಡೇಟಿಂಗ್ ಕೂಡ ಹಾಳಾಗಿದೆ ಎಂದು ಆತ ಬೇಸರ ವ್ಯಕ್ತಪಡಿಸಿದ್ದಾನೆ.


ಕಝಾಕಿಸ್ಥಾನದ ಬಾಡಿ ಬಿಲ್ಡರ್,  ಯೂರಿ ಟೊಲೊಚ್ಕೊ ಈ ವಿಚಿತ್ರ ಮಾನವನಾಗಿದ್ದಾನೆ. ತನ್ನ ಲೈಂಗಿಕ ಗೊಂಬೆಗೆ ಮಾರ್ಗೋ ಎಂದು ಆತ ಹೆಸರಿಟ್ಟಿದ್ದು, ತನ್ನ ಸ್ನೇಹಿತರನ್ನು ಕರೆದು ಅದ್ದೂರಿಯಾಗಿ ಗೊಂಬೆಯನ್ನು ವಿವಾಹವಾಗಿದ್ದಾನೆ. ಈ ವಿಡಿಯೋವನ್ನು ತನ್ನ ಇನ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾನೆ.


Provided by

ಈತನ ಈ ಹುಚ್ಚಾಟಗಳನ್ನು ಗಮನಿಸಿರುವ ನೆಟ್ಟಿಗರು, ಈ ಕೃತ್ಯಕ್ಕೆ ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದಾರೆ. ಇಂತಹ ಸಂಬಂಧ ಮಾನವ ಕುಲಕ್ಕೆ ಮಾರಕ ಎಂದು ಕಿಡಿಕಾರಿದ್ದಾರೆ. ಈ ಟೀಕೆಗಳು ಹೆಚ್ಚುತ್ತಿದ್ದಂತೆಯೇ ಹೆದರಿದ ಯೂರಿ ಟೊಲೊಚ್ಕೊ ಇದೀಗ ತಾನು ಪ್ಲಾಸ್ಟಿಕ್ ಸರ್ಜರಿ ಮಾಡಿಕೊಂಡು ಮುಖದ ಚೆಹರೆ ಬದಲಿಸಿಕೊಳ್ಳುತ್ತೇನೆ ಎಂದು ಹೊರಟಿದ್ದಾನಂತೆ.

ಇತ್ತೀಚಿನ ಸುದ್ದಿ