ಭಾರತೀಯ ನೌಕಾ ಪಡೆಯ ಮಿಗ್ 29 ಕೆಯುಬಿ ಯುದ್ಧ ವಿಮಾನ ಪತನ - Mahanayaka
2:13 PM Thursday 12 - September 2024

ಭಾರತೀಯ ನೌಕಾ ಪಡೆಯ ಮಿಗ್ 29 ಕೆಯುಬಿ ಯುದ್ಧ ವಿಮಾನ ಪತನ

27/11/2020

ನವದೆಹಲಿ: ಭಾರತೀಯ ನೌಕಾ ಪಡೆಯ ಮಿಗ್ 29 ಕೆಯುಬಿ ಯುದ್ಧ ವಿಮಾನ ಪತನಗೊಂಡಿದ್ದು,  ಪರಿಣಾಮವಾಗಿ ಓರ್ವ ಪೈಲಟ್ ನಾಪತ್ತೆಯಾಗಿದ್ದು, ಇನ್ನೋರ್ವ ಪೈಲಟ್ ನ್ನು ರಕ್ಷಿಸಲಾಗಿದೆ.

 ಗೋವಾ ಬಂದರಿವನಲ್ಲಿರುವ ಐಎನ್‌ಎಸ್ ವಿಕ್ರಾಮಾಧಿತ್ಯ ನೌಕೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮಿಗ್ 29 ಕೆಯುಬಿ ತರಬೇತಿ ಯುದ್ಧ ವಿಮಾನ ನಿನ್ನೆ ಸಂಜೆ ಅರೇಬಿಯನ್ ಸುಮುದ್ರದಲ್ಲಿ ಪತನವಾಗಿದೆ.


ಘಟನೆಯ ವೇಳೆ ಓರ್ವ ಪೈಲಟ್ ನ್ನು ಏರ್ ಲಿಫ್ಟ್  ಮೂಲಕ ರಕ್ಷಣೆ ಮಾಡಲಾಗಿದೆ.  ಆದರೆ, ಮತ್ತೋರ್ವ ಪೈಲಟ್ ನಾಪತ್ತೆಯಾಗಿದ್ದಾರೆ. ನಾಪತ್ತೆಯಾಗಿರುವ ಪೈಲಟ್ ಗಾಗಿ ಹುಡುಕಾಟ ಮುಂದುವರಿದಿದೆ.


Provided by

ವಿಮಾನ ಪತನಕ್ಕೆ ಕಾರಣಗಳೇನು ಎನ್ನುವುದು ಇನ್ನೂ ತಿಳಿದು ಬಂದಿಲ್ಲ. ಈ ಸಂಬಂಧ ವಾಯುಸೇನೆ ತನಿಖೆ ನಡೆಸುತ್ತಿದೆ.  ಹಾಗೆಯೇ ತನಿಖೆಗೂ ಆದೇಶ ದೊರಕಿದೆ.

ಇತ್ತೀಚಿನ ಸುದ್ದಿ