ಪಶ್ಚಿಮ‌ ಬಂಗಾಳದಲ್ಲಿ ಕರಿಛಾಯೆ: ಜನರನ್ನು ಆತಂಕದ ಮಡಿಲಿಗೆ ದೂಡಿದ ಬಾಂಬ್ ಸ್ಫೋಟ..! - Mahanayaka
12:16 PM Wednesday 22 - October 2025

ಪಶ್ಚಿಮ‌ ಬಂಗಾಳದಲ್ಲಿ ಕರಿಛಾಯೆ: ಜನರನ್ನು ಆತಂಕದ ಮಡಿಲಿಗೆ ದೂಡಿದ ಬಾಂಬ್ ಸ್ಫೋಟ..!

11/07/2023

ಹಿಂಸಾಚಾರದ ನಡುವೆಯೇ ಪಶ್ಚಿಮ ಬಂಗಾಳದ ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಗಿದಿದೆ. ಮತದಾನ ಮುಗಿದಿದ್ದರೂ ಹಿಂಸಾಚಾರ ನಿಂತಿಲ್ಲ. ಇಂದು ಮತಎಣಿಕೆ ಕೇಂದ್ರದ ಹೊರಗೆ ಬಾಂಬ್ ಸ್ಫೋಟಗೊಂಡಿದೆ.

ಪಶ್ಚಿಮ ಬಂಗಾಳದಲ್ಲಿ ಸ್ಥಳೀಯ ಪಂಚಾಯತ್ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದ ವೇಳೆ ಮತ ಎಣಿಕೆ ಕೇಂದ್ರದ ಹೊರಗೆ ಬಾಂಬ್ ಎಸೆಯಲಾಗಿದೆ. ಹೀಗಾಗಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು.

ಜುಲೈ ಎಂಟರಂದು ಪಶ್ಚಿಮ ಬಂಗಾಳದಲ್ಲಿ ಪಂಚಾಯತ್ ಚುನಾವಣೆ ನಡೆದಿದ್ದು, ಆ ದಿನ ಉದ್ವಿಗ್ನತೆ ಸೃಷ್ಟಿಯಾಗಿದ್ದರಿಂದಾಗಿ ಜುಲೈ ಹತ್ತರಂದು 696 ಮತಗಟ್ಟೆಗಳಲ್ಲಿ ಮತದಾನ ನಡೆದಿತ್ತು. ಬಿಗಿ ಭದ್ರತೆಯ ನಡೆವೆ ಮತ ಎಣಿಕೆ ನಡೆದಿದ್ದರೂ ಮತ ಎಣಿಕೆ ಕೇಂದ್ರದ ಹೊರಗೆ ಬಾಂಬ್ ಸ್ಫೋಟಿಸಲಾಗಿದೆ.

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ