ರಾತ್ರಿ ತಡವಾಗಿ ಮನೆಗೆ ಬಂದ ಬಾಲಕಿ ಗ್ಯಾಂಗ್ ರೇಪ್ ಆಗಿದೆ ಎಂದಳು | ತನಿಖೆ ನಡೆಸಿದ ಪೊಲೀಸರಿಗೆ ಸಿಕ್ಕಿ ಬಿದ್ದ ಬಾಲಕಿಯ ಸ್ನೇಹಿತ - Mahanayaka

ರಾತ್ರಿ ತಡವಾಗಿ ಮನೆಗೆ ಬಂದ ಬಾಲಕಿ ಗ್ಯಾಂಗ್ ರೇಪ್ ಆಗಿದೆ ಎಂದಳು | ತನಿಖೆ ನಡೆಸಿದ ಪೊಲೀಸರಿಗೆ ಸಿಕ್ಕಿ ಬಿದ್ದ ಬಾಲಕಿಯ ಸ್ನೇಹಿತ

29/11/2020

ಛತ್ತೀಸ್ ಗಢ:  ಸ್ನೇಹಿತೆಯನ್ನು ಭೇಟಿಯಾಗಲು ಹೋಗುತ್ತೇನೆ ಎಂದು ಹೋಗಿದ್ದ ಬಾಲಕಿ, ರಾತ್ರಿ  11 ಗಂಟೆಯಾದರೂ ಮನೆಗೆ ಬರಲಿಲ್ಲ. ಎಲ್ಲೆಡೆ ಬಾಲಕಿಯನ್ನು ಹುಡುಕಾಡಿದ್ದರೂ, ಆಕೆ ಪತ್ತೆಯಾಗಲಿಲ್ಲ. ಕೊನೆಗೆ ಪೋಷಕರು ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿ ಬರುವಷ್ಟರಲ್ಲಿ ಬಾಲಕಿ ಮನೆಯಲ್ಲಿದ್ದಳು.

ಮನೆಯವರನ್ನು ನೋಡಿದ ತಕ್ಷಣವೇ ಅಳುತ್ತಾ, ಸ್ನೇಹಿತೆಯ ಮನೆಯಿಂದ ವಾಪಸ್ ಬರುವಾಗ ನನ್ನ ಮೇಲೆ ಗ್ಯಾಂಗ್ ರೇಪ್ ಆಗಿದೆ ಎಂದು ಹೇಳಿದ್ದಾಳೆ. ಇದರಿಂದ ಮನೆಯವರು ಗಾಬರಿಗೊಂಡರು ಮತ್ತು ತಕ್ಷಣವೇ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.

ದೂರು ಪಡೆದುಕೊಂಡ ಪೊಲೀಸರು ತಕ್ಷಣವೇ ತನಿಖೆ ಆರಂಭಿಸಿದರು. ಮೊದಲು ಆಕೆಯ ಸ್ನೇಹಿತೆಯರಿಗೆ ಕರೆ ಮಾಡಿ ವಿಚಾರಿಸಿದ್ದಾರೆ. ಈ ವೇಳೆ ನಮ್ಮ ಯಾರ ಮನೆಗೂ ಆಕೆ ಬಂದಿಲ್ಲ ಎಂದು ಅವರು ಹೇಳಿದ್ದಾರೆ. ಇದರಿಂದಾಗಿ ಪೊಲೀಸರು ಅನುಮಾನಗೊಂಡು, ಇನ್ನಷ್ಟು ತನಿಖೆ ನಡೆಸಿದಾಗ ಬಾಲಕಿಯ ಸ್ನೇಹಿತನೊಬ್ಬ ಸಿಕ್ಕಿಬಿದ್ದಿದ್ದಾನೆ.  ಅಸಲಿಗೆ ಈ ಬಾಲಕಿ ತನ್ನ ಸ್ನೇಹಿತನ ಜೊತೆಗಿದ್ದು, ಆತನನ್ನು ಭೇಟಿಯಾಗಿ ಆತನ ಜೊತೆಗೆ ಬಹಳಷ್ಟು ಸಮಯ ಕಳೆದಿದ್ದಳು.  ಮನೆಗೆ ಬರುವಷ್ಟರಲ್ಲಿ ತಡವಾಯಿತು, ಪೋಷಕರಿಗೆ ಗ್ಯಾಂಗ್ ರೇಪ್ ಸ್ಟೋರಿ ಹೇಳಿದರೆ, ಅವರು, ಮರ್ಯಾದೆಗೆ ಅಂಜಿ ಸುಮ್ಮನಿರುತ್ತಾರೆ ಎಂದು ಕೊಂಡು ಈ ರೀತಿಯ ಕಥೆ ಕಟ್ಟಿದ್ದಾಳೆ.

ಈ ಘಟನೆ ನಡೆದಿರುವುದು  ಛತ್ತೀಸಗಢದ ಕವಾರ್ಡ ಎಂಬಲ್ಲಿ.  ಬಾಲಕಿಯ ಸ್ನೇಹಿತನನ್ನು ಪೊಲೀಸರು ವಿಚಾರಿಸಿದಾಗ ಆತ ನಡೆದ ಘಟನೆಯನ್ನು ತಿಳಿಸಿದ್ದಾನೆ. ಇದೀಗ ಬಾಲಕಿಯ ಸ್ನೇಹಿತನ  ವಿರುದ್ಧ ಪೋಕ್ಸೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಯುವಕನನ್ನು ಬಂಧಿಸಲಾಗಿದೆ.

ಇತ್ತೀಚಿನ ಸುದ್ದಿ