ಸ್ನೇಹಿತನಿಗೆ ಮದುವೆ ಫಿಕ್ಸ್: ಹತಾಶೆಗೊಂಡ ಸ್ನೇಹಿತೆ ಆತನ ಬೆಡ್ ರೂಮ್ ನುಗ್ಗಿ  ತೆಗೆದುಕೊಂಡಳು ದುಡುಕಿನ ನಿರ್ಧಾರ - Mahanayaka

ಸ್ನೇಹಿತನಿಗೆ ಮದುವೆ ಫಿಕ್ಸ್: ಹತಾಶೆಗೊಂಡ ಸ್ನೇಹಿತೆ ಆತನ ಬೆಡ್ ರೂಮ್ ನುಗ್ಗಿ  ತೆಗೆದುಕೊಂಡಳು ದುಡುಕಿನ ನಿರ್ಧಾರ

29/11/2020

ಎರ್ನಾಕುಲಂ:  ಸ್ನೇಹಿತನಿಗೆ ಮದುವೆ ಫಿಕ್ಸ್ ಆದ ವಿಚಾರಕ್ಕೆ ಸಂಬಂಧಿಸಿದಂತೆ ಯುವತಿಯೊಬ್ಬಳು ದುಡುಕಿನ ನಿರ್ಧಾರ ತೆಗೆದುಕೊಂಡಿದ್ದು, ಸ್ನೇಹಿತನ ಮನೆಯಲ್ಲಿಯೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಸೂರ್ಯ(26) ಆತ್ಮಹತ್ಯೆಗೆ ಶರಣಾದ ಯುವತಿಯಾಗಿದ್ದಾಳೆ.  ಶನಿವಾರ ಬೆಳಗ್ಗೆ 10:30ರ ಸುಮಾರಿಗೆ  ಸುಮಾರಿಗೆ ತನ್ನ ಸ್ನೇಹಿತ ಅಶೋಕ್ ಮನೆಗೆ ತೆರಳಿದ್ದ ಸೂರ್ಯ, ನೇರವಾಗಿ ಅಶೋಕ್ ರೂಮ್ ಗೆ ಹೋಗಿದ್ದು,  ಅಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಕೇರಳದ ಎರ್ನಾಕುಲಂ ಜಿಲ್ಲೆಯ ಅಂಬಲ್ಲೂರ್ ನಲ್ಲಿ ಈ ಘಟನೆ ನಡೆದಿದೆ.  ಅಶೋಕ್ ಮತ್ತು ಸೂರ್ಯ ಪಿಎಸ್ ಸಿ ಕೇಂದ್ರದಲ್ಲಿ ಒಟ್ಟಾಗಿ ಕೆಲಸ ಮಾಡುತ್ತಿದ್ದರು. ಸುಮಾರು 4 ವರ್ಷಗಳಿಂದ ಆಪ್ತವಾಗಿದ್ದರು. ಸೂರ್ತಗೆ ಡಿಸೆಂಬರ್ 15ರಂದು ಮದುವೆ ನಿಶ್ಚಯವಾಗಿದ್ದು, ಈ ಹತಾಶೆಯಿಂದ ಸೂರ್ಯ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಹೇಳಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Disclaimer:

www.mahanayaka.in ಅಂತರ್ಜಾಲ ಮಾಧ್ಯಮದಲ್ಲಿ ಪ್ರಕಟವಾದ ಸುದ್ದಿಗಳಲ್ಲಿ ಯಾರದ್ದೇ ಭಾವನೆಗಳಿಗೆ ಧಕ್ಕೆಯಾಗುವಂತಹ ಅಥವಾ ನೋವುಂಟಾಗುವಂತಹ ಅಥವಾ ನಿಮಗೆ ಆಕ್ಷೇಪಾರ್ಹ ಎನಿಸಿದಂತಹ ಅಂಶಗಳ ಬಗ್ಗೆ ಓದುಗರು 9686872149 ನಂಬರ್ ಗೆ ಸುದ್ದಿಯ ಲಿಂಕ್ ಸಹಿತ ನಿಮ್ಮ ದೂರು ಸಲಹೆಗಳನ್ನು ವಾಟ್ಸಾಪ್ ಮಾಡಬಹುದು. ಅಥವಾ ಕರೆ ಮಾಡಬಹುದು. ನಿಮ್ಮ ದೂರನ್ನು ಪರಿಶೀಲಿಸಿ, ಅಂತಹ ಆಕ್ಷೇಪಾರ್ಹ ಅಂಶಗಳನ್ನು ತೆಗೆದು ಹಾಕಲು ಮಾಧ್ಯಮವು ಬದ್ಧವಾಗಿದೆ.

ಇತ್ತೀಚಿನ ಸುದ್ದಿ