ನವೆಂಬರ್ 7: ಅಂಬೇಡ್ಕರ್ ಅವರು ಶಾಲೆಗೆ ಸೇರಿದ ದಿನವೇ ‘Students' Day’ - Mahanayaka
9:37 PM Wednesday 11 - September 2024

ನವೆಂಬರ್ 7: ಅಂಬೇಡ್ಕರ್ ಅವರು ಶಾಲೆಗೆ ಸೇರಿದ ದಿನವೇ ‘Students’ Day’

07/11/2020

ಮಹಾನಾಯಕ ವರದಿ- ನವದೆಹಲಿ: ನವೆಂಬರ್ 7 ಭಾರತೀಯರ ಪಾಲಿಗೆ ವಿಶೇಷ ದಿನ. ಭಾರತೀಯರ, ಭಾರತ ದೇಶದ ಭವಿಷ್ಯವನ್ನು ಉದ್ಧರಿಸಿದ ಮಹಾ ಮಾನವತಾವಾದಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಶಾಲೆಗೆ ಸೇರಿದ ದಿನವಾಗಿದೆ. ಭಾರತದ ಐಕಾನ್ ಡಾ.ಭೀಮ್ ರಾವ್ ರಾಮ್ ಜಿ ಅಂಬೇಡ್ಕರ್ ಅವರು ಶಾಲೆಗೆ ಸೇರುವ ಮೂಲಕ ಇಡೀ ಭಾರತದ ಸಾಮಾಜಿಕ, ಆರ್ಥಿಕ ಸೇರಿದಂತೆ ಎಲ್ಲ ಬದಲಾವಣೆಯನ್ನು ಮಾಡುವಂತಹ ಶಿಕ್ಷಣವನ್ನು ಪಡೆಯಲು ತಳಪಾಯ ಹಾಕಿದ ದಿನ ಎಂದೇ ಹೇಳಬಹುದಾಗಿದೆ.

ಬಾಬಾ ಸಾಹೇಬ್ ಅಂಬೇಡ್ಕರ್ ಅವರು 1900ರ ನವೆಂಬರ್ 7ರಂದು ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಪ್ರಾತಾಪ್ ಸಿಂಗ್ ಹೈಸ್ಕೂಲ್ ಶಾಲೆಗೆ ಸೇರಿದರು. ಅವರು ಶಾಲೆಗೆ ಸೇರಿದ ದಿನವೇ ಇಡೀ ದೇಶದಲ್ಲಿ ಒಳ್ಳೆಯ ಗಾಳಿ ಪಸರಿಸಲು ಆರಂಭವಾಯಿತು. ಬಾಬಾ ಸಾಹೇಬರು ಎಂದೇ ಭಾರತೀಯರು ಪ್ರೀತಿಯಿಮದ ಕರೆಯುವ ಅಂಬೇಡ್ಕರ್ ಅವರು ಶಿಕ್ಷಣ ಪಡೆದು ಮುಂದೆ ಗಣರಾಜ್ಯದ ಸ್ಥಾಪಕರಾಗುತ್ತಾರೆ.


Provided by

ದೌರ್ಜನ್ಯ, ಅಸ್ಪೃಷ್ಯತೆ, ಅನಿಷ್ಠ ಪದ್ಧತಿಗಳನ್ನು ತಮ್ಮ ಬಾಲ್ಯದಲ್ಲೇ ನೋಡಿಕೊಂಡು ಬೆಳೆದ ಬಾಬಾ ಸಾಹೇಬರು, ಸಾಮಾಜಿಕ ತಾರತಮ್ಯದ ವಿರುದ್ಧ ಧ್ವನಿಯೆತ್ತಿದರು. ನ್ಯಾಯಶಾಸ್ತ್ರ, ಅರ್ಥಶಾಸ್ತ್ರ, ರಾಜಕೀಯ ಶಾಸ್ತ್ರ, ಸಾಮಾಜಿಕ ಸುಧಾರಕ ಮತ್ತು ನಿಜವಾದ ದೇಶ ಭಕ್ತ, ಭಾರತದ ಮೊದಲ ಕಾನೂನು ಸಚಿವರು ಆಧುನಿಕ ಭಾರತದ ರಾಷ್ಟ್ರಪಿತರಾಗಿರುವ ಅಂಬೇಡ್ಕರ್ ಅವರ ಸಾಧನೆಯೆ ಅಡಿಪಾಯ ದೊರೆತ ದಿನ ನವೆಂಬರ್ 7 ಆಗಿದೆ.

ಅಂಬೇಡ್ಕರ್ ಅವರು ಔಪಚಾರಿಕವಾಗಿ ನವೆಂಬರ್ 7ರಂದು ಶಾಲೆಗೆ ಸೇರಿದರು. ಈ ಕಾರಣಕ್ಕಾಗಿ ಮಹಾರಾಷ್ಟ್ರ ಸರ್ಕಾರವು ಈ ದಿನವನ್ನು ವಿದ್ಯಾರ್ಥಿಗಳ ದಿನ(Students’ Day) ಎಂದು ಆಚರಿಸುತ್ತಿದೆ. ಅಲ್ಲದೇ ಸರ್ಕಾರಿ ಮಟ್ಟದಲ್ಲಿ ಪ್ರಬಂಧ ಸ್ಪರ್ಧೆ, ಭಾಷಣ ಸ್ಪರ್ಧೆ,  ಕವನ ವಾಚನ, ಸೇರಿದಂತೆ ವಿವಿಧ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ.

ಕೆಲಸಕ್ಕೆ ಬಾರದ ಹಲವು ದಿನಾಚರಣೆಗೆ ಸರ್ಕಾರಗಳು ನೀಡುತ್ತಿರುವ ಮಹತ್ವವನ್ನು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಶಾಲೆಗೆ ಸೇರಿದ ಐತಿಹಾಸಿಕ ದಿನವನ್ನು ವಿದ್ಯಾರ್ಥಿ ದಿನ(Students’ Day) ಎಂದು ಆಚರಿಸಲಾಗದ ಕೆಲವು ಸರ್ಕಾರಗಳು ಇನ್ನಾದರೂ ಎಚ್ಚೆತ್ತುಕೊಳ್ಳಬೇಕು. ಕರ್ನಾಟಕ ಸೇರಿದಂತೆ, ಇಡೀ ಭಾರತದಲ್ಲಿ ಬಾಬಾ ಸಾಹೇಬರು ಶಿಕ್ಷಣಕ್ಕಾಗಿ ಇಟ್ಟ ಮೊದಲ ಹೆಜ್ಜೆಯನ್ನು ಸ್ಮರಿಸಬೇಕಿದೆ.

 

ವಿ.ಸೂ: ಈ ಸುದ್ದಿ ನಿಮ್ಮ ಮಹಾನಾಯಕ ಮಾಧ್ಯಮದಲ್ಲಿ ಮಾತ್ರವೇ ಪ್ರಕಟಗೊಂಡಿದೆ

ಇತ್ತೀಚಿನ ಸುದ್ದಿ