ಹನಿಮೂನ್ ಗೆ ಹೊರಟು ನಿಂತ ನಟಿ ಕಾಜಲ್ ಅಗರ್ ವಾಲ್ ಅಭಿಮಾನಿಗಳಿಗೆ ಹೇಳಿದ್ದೇನು?
07/11/2020
ಖ್ಯಾತ ನಟಿ ಕಾಜಲ್ ಅಗರ್ವಾಲ್ ಅವರು ತಮ್ಮ ಗೆಳೆಯ ಗೌತಮ್ ಕಿಚ್ಚು ಜೊತೆಗೆ ವಿವಾಹವಾದ ಬಳಿಕ ಇದೀಗ ಹನಿಮೂನ್ ಗೆ ತೆರಳಲು ಸಿದ್ಧರಾಗಿದ್ದಾರೆ. ತಾವು ಹನಿಮೂನ್ ಗೆ ತೆರಳುವ ಬಗ್ಗೆ ತಮ್ಮ ಅಭಿಮಾನಿಗಳಿಗೆ ಅವರು ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ಕಳೆದ ವಾರವಷ್ಟೇ ಕಾಜಲ್ ಅಗರ್ ವಾಲ್ ಅವರು ತಾವು ಪ್ರೀತಿಸಿದ ಗೌತಮ್ ಕಿಚ್ಚು ಅವರ ಜೊತೆಗೆ ವಿವಾಹವಾಗಿದ್ದರು. ಇದೀಗ ಪಾಸ್ ಪೋರ್ಟ್ ಗಳ ಚಿತ್ರಗಳನ್ನು ಹಂಚಿಕೊಂಡು “ಹೋಗಲು ಸಿದ್ಧ” ಎಂದು ಬರೆದುಕೊಂಡಿದ್ದಾರೆ. ಇನ್ನು ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಅವರು ಈ ಪೋಸ್ಟ್ ಹಂಚಿಕೊಂಡಿದ್ದಾರೆ.
ಕೆಲವು ದಿನಗಳ ಹಿಂದೆಯಷ್ಟೇ ಅವರು ತಮ್ಮ ನಿಶ್ಚಿತಾರ್ಥದ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಲಾಕ್ ಡೌನ್ ಸಂದರ್ಭದಲ್ಲಿ ನಾನು ದಪ್ಪ ಹಾಕಿದ್ದೇನೆ ಎಂದೂ ಹೇಳಿದ್ದರು. ಅಂದ ಹಾಗೆ ಕಾಜಲ್ ಅವರು ಮುಂಬೈನ ಹೊಟೇಲ್ ನಲ್ಲಿ ತಮ್ಮ ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ವಿವಾಹವಾಗಿದ್ದರು.