ನಟ ಇಳಯ ದಳಪತಿ ವಿಜಯ್ ಹೆಸರಿನಲ್ಲಿ ರಾಜಕೀಯ ಪಕ್ಷ ರಿಜಿಸ್ಟರ್ | ವಿಜಯ್ ಏನಂದ್ರು ಗೊತ್ತಾ? - Mahanayaka

ನಟ ಇಳಯ ದಳಪತಿ ವಿಜಯ್ ಹೆಸರಿನಲ್ಲಿ ರಾಜಕೀಯ ಪಕ್ಷ ರಿಜಿಸ್ಟರ್ | ವಿಜಯ್ ಏನಂದ್ರು ಗೊತ್ತಾ?

07/11/2020

ಚೆನ್ನೈ: ಚಿತ್ರರಂಗದ ದಿಗ್ಗಜರು ತಮಿಳುನಾಡು ರಾಜಕೀಯಕ್ಕೆ ಪ್ರವೇಶಿಸಿ ಯಶಸ್ವಿಯಾಗಿದ್ದಾರೆ. ಎಂಜಿಆರ್, ಜಯಲಲಿತಾ ಮೊದಲಾದವರಂತೂ ತಮಿಳುನಾಡು ರಾಜಕೀಯವನ್ನು ಸಿನಿಮಾದ ಪಬ್ಲಿಸಿಟಿಯಿಂದಲೇ ಮಾಡಿದವರು. ಇದೇ ಸಂದರ್ಭದಲ್ಲಿ ತಮಿಳುನಾಡು ಮಾತ್ರವಲ್ಲದೇ ಇಡೀ ಭಾರತವೇ ಇಷ್ಟಪಡುವ ಇಳಯ ದಳಪತಿ ವಿಜಯ್ ಅವರ ಹೆಸರಿನಲ್ಲಿ ರಾಜಕೀಯ ಪಕ್ಷವೊಂದು ರಿಜಿಸ್ಟರ್ ಆಗಿದೆ.

‘ಇಳಯ ದಳಪತಿ ವಿಜಯ್ ಮಕ್ಕಳ್ ಇಯಕ್ಕಂ’ ಎಂಬ ಪಕ್ಷ ರಿಜಿಸ್ಟರ್ ಆಗಿದೆ. ಈ ಪಕ್ಷವನ್ನು ವಿಜಯ್ ಅವರ ತಂದೆ ಎಸ್.ಎ.ಚಂದ್ರಶೇಖರ್ ಅವರು ಚುನಾವಣಾ ಆಯೋಗದಲ್ಲಿ ನೋಂದಾಯಿಸಿದ್ದಾರೆ. ಅಲ್ಲದೇ ಈ ಪಕ್ಷವನ್ನು ವಿಜಯ್ ಅವರು ಪ್ರಚಾರ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ನಟ ವಿಜಯ್, ನನ್ನ ಒಪ್ಪಿಗೆ ಇಲ್ಲದೇ ಈ ಪಕ್ಷ ನೋಂದಣಿಯಾಗಿದೆ. ಹಾಗಾಗಿ ಈ ಪಕ್ಷಕ್ಕೂ ನನಗೂ ಸಂಬಂಧವಿಲ್ಲ. ನನ್ನ ಹೆಸರು ಹಾಗೂ ಭಾವಚಿತ್ರವನ್ನು ಬಳಸಿಕೊಂಡರೆ, ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ. ಈ ಪಕ್ಷಕ್ಕೆ ನನ್ನ ಯಾವುದೇ ಅಭಿಮಾನಿಗಳು ಸೇರಬೇಡಿ ಎಂದು ಹೇಳಿದ್ದಾರೆ.

ಇತ್ತೀಚಿನ ಸುದ್ದಿ