ಜೋ ಬಿಡೆನ್ ಅಮೆರಿಕ ಅಧ್ಯಕ್ಷ ಕೊಠಡಿ ಪಡೆಯಬಾರದು | ಸೋಲಿನ  ಸಮೀಪದಲ್ಲಿರುವ ಟ್ರಂಪ್ ಎಚ್ಚರಿಕೆ - Mahanayaka
10:01 AM Sunday 15 - September 2024

ಜೋ ಬಿಡೆನ್ ಅಮೆರಿಕ ಅಧ್ಯಕ್ಷ ಕೊಠಡಿ ಪಡೆಯಬಾರದು | ಸೋಲಿನ  ಸಮೀಪದಲ್ಲಿರುವ ಟ್ರಂಪ್ ಎಚ್ಚರಿಕೆ

07/11/2020

ಸೋಲು ಖಚಿತವಾಗುತ್ತಿದ್ದಂತೆಯೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪ್ರತಿ ಸ್ಪರ್ಧಿ ಜೋ ಬಿಡೆನ್ ಗೆ ಬೆದರಿಕೆ ಹಾಕಿದ್ದು, ಅಮೆರಿಕ ಅಧ್ಯಕ್ಷರ ಕಚೇರಿಯನ್ನು ಪಡೆದುಕೊಳ್ಳುವಂತಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಮತ ಎಣಿಕೆ ಕಾರ್ಯ ಮುಂದುವರಿದಿದ್ದು, ಜೋ ಬಿಡೆನ್ ಬಹುಮತದತ್ತ ಸಾಗಿದ್ದಾರೆ. ಇದೇ ಸಂದರ್ಭದಲ್ಲಿ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೋ ಬಿಡೆನ್ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಬಿಡೆನ್ ತಪ್ಪು ದಾರಿಯಲ್ಲಿ ಅಧ್ಯಕ್ಷ ಪಟ್ಟ ಪಡೆಯಲು ಹೊಂಚು ಹಾಕಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.


Provided by

ಜೋ ಬಿಡೆನ್ ಕುತಂತ್ರದಿಂದ ಅಮೆರಿಕ ಅಧ್ಯಕ್ಷರ ಕಚೇರಿಯನ್ನು ಪಡೆದುಕೊಳ್ಳುವಂತಿಲ್ಲ, ಇದರ ವಿರುದ್ಧ ಕಾನೂನು ಕ್ರಮಗಳು ಈಗಾಲೇ ಪ್ರಾರಂಭವಾಗಿದೆ.  ಎಂದು ಟ್ವೀಟ್ ಮಾಡಿರುವ ಟ್ರಂಪ್, ತಾನು ಅಧ್ಯಕ್ಷ ಪದವಿಯನ್ನು ಶಾಂತಿಯುತವಾಗಿ ಬಿಟ್ಟುಕೊಡುವುದಿಲ್ಲ ಎಂಬ ಸೂಚನೆಯನ್ನು ರವಾನಿಸಿದ್ದಾರೆ.

ಇತ್ತೀಚಿನ ಸುದ್ದಿ