ಸ್ವಚ್ಛ ಭಾರತ ಫಂಡಿನಿಂದಲೇ ಪ್ರಚಾರ.? ಪ್ರಧಾನಿ ವಿರುದ್ಧವೇ ಗಂಭೀರ ಆರೋಪ - Mahanayaka

ಸ್ವಚ್ಛ ಭಾರತ ಫಂಡಿನಿಂದಲೇ ಪ್ರಚಾರ.? ಪ್ರಧಾನಿ ವಿರುದ್ಧವೇ ಗಂಭೀರ ಆರೋಪ

04/10/2024

ಸ್ವಚ್ಛ ಭಾರತ ಫಂಡಿನಿಂದ 8000 ಕೋಟಿ ರೂಪಾಯಿಯಷ್ಟು ದೊಡ್ಡ ಮೊತ್ತವನ್ನು ಪ್ರಧಾನಿ ನರೇಂದ್ರ ಮೋದಿಯ ಪ್ರಚಾರದ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ ಎಂದು ಆರ್ ಟಿಐ ಕಾರ್ಯಕರ್ತ ಮತ್ತು ತೃಣಮೂಲ ಕಾಂಗ್ರೆಸ್ಸಿನ ಸಂಸದ ಸಾಕೇತ್ ಗೋಖಲೆ ಆರೋಪಿಸಿದ್ದಾರೆ.

ಭಾರತ ಸರಕಾರದ ಇತರ ಕಾರ್ಯಕ್ರಮಗಳು ಮತ್ತು ಮೋದಿಯನ್ನು ವೈಭವೀಕರಿಸಿ ತೋರಿಸುವುದಕ್ಕಾಗಿ ಮಾತ್ರ ಈ ಹಣವನ್ನು ಬಳಸಲಾಗಿದೆ ಎಂದವರು ಹೇಳಿದ್ದಾರೆ.

ಗಾಂಧಿ ಜಯಂತಿಯ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿಯವರು ಸ್ವಚ್ಛ ಭಾರತ ಕ್ಯಾಂಪೈನ್ ನ 10 ವರ್ಷಗಳನ್ನು ಆಚರಿಸಿದರು. ಆದರೆ ಈ ಪ್ರಚಾರದಿಂದ ದೇಶಕ್ಕೆ ಆಗಿರುವ ಲಾಭ ಏನು ಎಂದವರು ಪ್ರಶ್ನಿಸಿದ್ದಾರೆ.

2014 ರಿಂದ ಈವರೆಗೆ ಮಾಡಿರುವ ಬಹಿರಂಗ ಪ್ರಚಾರ, ಕ್ಯಾಂಪೇನ್ ಗಳು, ಹೋರ್ಡಿಂಗುಗಳು ಮತ್ತು ಇನ್ನಿತರ ಪ್ರಚಾರ ವಿಷಯಗಳಿಗಾಗಿ ಸ್ವಚ್ಛ ಭಾರತದ ಬಜೆಟ್ ನಿಂದ 8000 ಕೋಟಿ ರೂಪಾಯಿಯನ್ನು ಮೋದಿ ವೆಚ್ಚ ಮಾಡಿದ್ದಾರೆ. ಮೋದಿ ಅವರ ಫೋಟೋ ವಿಡಿಯೋ ಗಳನ್ನು ಹಂಚಿಕೊಳ್ಳುವುದಕ್ಕೆ ಮತ್ತು ಅವರನ್ನು ವೈಭವೀಕರಿಸುವುದಕ್ಕೆ ದೊಡ್ಡ ಮೊತ್ತವನ್ನು ಇದರಿಂದ ಬಳಸಲಾಗಿದೆ ಎಂದವರು ಹೇಳಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ