ದೇಶದ್ರೋಹದಡಿಯಲ್ಲಿ ಆಲ್ಟ್ ನ್ಯೂಸ್ ನ ಸಂಸ್ಥಾಪಕನ ವಿರುದ್ಧ ಕೇಸ್: ಪ್ರೆಸ್ ಕ್ಲಬ್ ಆಫ್ ಇಂಡಿಯಾ ಸೇರಿದಂತೆ ಪತ್ರಿಕಾ ಸಂಸ್ಥೆಗಳ ಖಂಡನೆ - Mahanayaka

ದೇಶದ್ರೋಹದಡಿಯಲ್ಲಿ ಆಲ್ಟ್ ನ್ಯೂಸ್ ನ ಸಂಸ್ಥಾಪಕನ ವಿರುದ್ಧ ಕೇಸ್: ಪ್ರೆಸ್ ಕ್ಲಬ್ ಆಫ್ ಇಂಡಿಯಾ ಸೇರಿದಂತೆ ಪತ್ರಿಕಾ ಸಂಸ್ಥೆಗಳ ಖಂಡನೆ

29/11/2024

ಕೋಮುದ್ವೇಷದ ಭಾಷಣ ಮಾಡುವ ಮೂಲಕವೇ ಕುಖ್ಯಾತಿಯನ್ನು ಪಡೆದಿರುವ ಯತಿ ನರಸಿಂಗಾನಂದನ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿದ್ದಕ್ಕೆ ಆಲ್ಟ್‌ ನ್ಯೂಸ್ ಫ್ಯಾಕ್ಟ್‌ಚೆಕ್ ಸುದ್ದಿ ಸಂಸ್ಥೆಯ ಸಹ-ಸಂಸ್ಥಾಪಕ ಮೊಹಮ್ಮದ್ ಝುಬೈರ್ ವಿರುದ್ದ ಉತ್ತರ ಪ್ರದೇಶ ಪೊಲೀಸರು ಬಿಎನ್‌ಎಸ್‌ ಸೆಕ್ಷನ್ 152ರ ಅಡಿ ಎಫ್‌ಐಆರ್ ದಾಖಲಿಸಿದ್ದಾರೆ. ಇದು ದೇಶದ್ರೋಹಕ್ಕೆ ಸಮನಾದ ಪ್ರಕರಣವಾಗಿದೆ. ಝುಬೈರ್ ವಿರುದ್ದ ‘ದೇಶದ್ರೋಹ ಸಮಾನ’ ಪ್ರಕರಣ ದಾಖಲಿಸಿರುವುದನ್ನು ಪ್ರೆಸ್ ಕ್ಲಬ್ ಆಫ್ ಇಂಡಿಯಾ ಸೇರಿದಂತೆ ಪತ್ರಿಕಾ ಸಂಸ್ಥೆಗಳು ಖಂಡಿಸಿವೆ.

ಈ ಕುರಿತು ಎಕ್ಸ್‌ನಲ್ಲಿ ಬರೆದುಕೊಂಡಿರುವ ಪಿಸಿಐ,”ಅಲಹಾಬಾದ್ ಹೈಕೋರ್ಟ್‌ಗೆ ಉತ್ತರ ಪ್ರದೇಶ ಪೊಲೀಸರು ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಆಲ್ಟ್ ನ್ಯೂಸ್ ಸಹ-ಸಂಸ್ಥಾಪಕ ಮೊಹಮ್ಮದ್ ಝುಬೈರ್ ಅವರು ‘ಭಾರತದ ಸಾರ್ವಭೌಮತೆ ಮತ್ತು ಏಕತೆಗೆ ಅಪಾಯವನ್ನುಂಟುಮಾಡುತ್ತಿದ್ದಾರೆ’ ಎಂದು ಆರೋಪಿಸಿರುವುದು ಖಂಡನೀಯ ಎಂದಿದೆ.

“ಝುಬೈರ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಕಾಯ್ದೆಯ ಸೆಕ್ಷನ್‌ 152ರ ಅಡಿ ಎಫ್‌ಐಆರ್ ದಾಖಲಿಸಲಾಗಿದೆ. ಈ ಸೆಕ್ಷನ್‌ ಸ್ವತಂತ್ರ ಚಿಂತಕರು ಮತ್ತು ಮಾಧ್ಯಮಗಳನ್ನು ಮೌನಗೊಳಿಸುವ ಸಾಮರ್ಥ್ಯ ಹೊಂದಿರುವುದರಿಂದ ಎಲ್ಲಾ ವಿವೇಕಯುತ ಮನಸ್ಸುಗಳು ಇದನ್ನು ವಿರೋಧಿಸುತ್ತಿವೆ. ಟೀಕಾಕಾರ ವಿರುದ್ಧವೂ ಈ ಸೆಕ್ಸನ್ ವಿಧಿಸಬಹುದು” ಎಂದು ಹೇಳಿದೆ.

ಡಿಜಿಟಲ್ ಸುದ್ದಿ ಸಂಸ್ಥೆಗಳ ಸಂಘವಾದ DIGIPUB ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದು, “ಝಬೈರ್ ಗೆ ಕಿರುಕುಳ ನೀಡಲಾಗುತ್ತಿದೆ. ಝಬೈರ್ ವಿರುದ್ಧದ ಆರೋಪಗಳು ಆಧಾರ ರಹಿತವಾಗಿವೆ ಮತ್ತು ಇದು ತನಿಖಾ ಸಂಸ್ಥೆಗಳ ಸೇಡಿನ ಮತ್ತು ವಿವೇಚನಾರಹಿತ ಕ್ರಮವಾಗಿದೆ” ಎಂದಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ