ದುರಂತ: ಕ್ರಿಕೆಟ್ ಆಟವಾಡುವ ವೇಳೆ ಹೃದಯಾಘಾತದಿಂದ ಯುವ ಕ್ರಿಕೆಟಿಗ ಸಾವು
ಕೊರೋನಾದ ಬಳಿಕ ಪ್ರಾಯ ಭೇದ ಇಲ್ಲದೆ ಕುಸಿದು ಬಿದ್ದು ಸಾವಿಗೀಡಾಗುವ ಹಲವು ಘಟನೆಗಳನ್ನು ನೋಡಿದ್ದೇವೆ. ಇದೀಗ ಅಂತಹದ್ದೇ ಒಂದು ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಮಹಾರಾಷ್ಟ್ರದ ಪ್ರಾದೇಶಿಕ ಮಟ್ಟದ ಕ್ರಿಕೆಟ್ ಆಡುತ್ತಿದ್ದ ವೇಳೆ ಇಮ್ರಾನ್ ಸಿಕಂದರ್ ಪಟೇಲ್ ಎಂಬ ಯುವಕ ಕುಸಿದು ಬಿದ್ದು ಸಾವಿಗಿಡಾಗಿದ್ದಾನೆ. ಈತ ಆ ತಂಡದ ಕ್ಯಾಪ್ಟನ್ ಆಗಿದ್ದ.
ಮಹಾರಾಷ್ಟ್ರದ ಛತ್ರಪತಿ ಸ್ಟೇಡಿಯಂನಲ್ಲಿ ಈ ಘಟನೆ ನಡೆದಿದೆ. ಈತ ಬೆನ್ನು ಬೆನ್ನಿಗೆ ಎರಡು ಬೌಂಡರಿಯನ್ನು ಬಾರಿಸಿದ ಬಳಿಕ ಅಂಪೈರ್ ಜೊತೆ ಮಾತಾಡಿದ್ದಾನೆ. ತನ್ನ ಕತ್ತು ಮತ್ತು ಕೈಗಳು ನೋಯುತ್ತಿದೆ ಮತ್ತು ಔಷಧಿಯನ್ನು ಸೇವಿಸ ಬೇಕಾಗಿದೆ ಎಂದು ಆತ ಹೇಳಿದ್ದಾನೆ. ಬಳಿಕ ಮೈದಾನದಿಂದ ಹೊರಹೋದದ್ದಲ್ಲದೆ ಬೌಂಡರಿ ಗೆರೆಯ ಸಮೀಪ ಪ್ರಜ್ಞ ಶೂನ್ಯನಾಗಿ ಬಿದ್ದಿದ್ದಾನೆ. ಉಳಿದ ಆಟಗಾರರು ತಕ್ಷಣ ಆತನಡೆಗೆ ಧಾವಿಸಿದ್ದಾರೆ ಮತ್ತು ಆತನನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.
ಈ ಟೂರ್ನಮೆಂಟ್ ನಲ್ಲಿ ಇಮ್ರಾನ್ ಅದ್ಭುತ ಪ್ರದರ್ಶನವನ್ನು ನೀಡಿದ್ದ. ಮತ್ತು ಆತನಿಗೆ ಯಾವುದೇ ಕಾಯಿಲೆ ಇರಲಿಲ್ಲ ಎಂದು ಸಹ ಆಟಗಾರರು ಹೇಳಿದ್ದಾರೆ. ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದ ಈತ ಸ್ವತಃ ಒಂದು ಕ್ರಿಕೆಟ್ ತಂಡವನ್ನೇ ರೂಪಿಸಿಕೊಂಡಿದ್ದ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj