'ಮಹಾ' ಹೈಡ್ರಾಮಾ: ಸಿಎಂ ರೇಸ್ ಬೆನ್ನಲ್ಲೇ ಮುನಿಸಿಕೊಂಡು ಹೊರಟ್ರಾ ಏಕನಾಥ್ ಶಿಂಧೆ? - Mahanayaka
1:48 AM Thursday 5 - December 2024

‘ಮಹಾ’ ಹೈಡ್ರಾಮಾ: ಸಿಎಂ ರೇಸ್ ಬೆನ್ನಲ್ಲೇ ಮುನಿಸಿಕೊಂಡು ಹೊರಟ್ರಾ ಏಕನಾಥ್ ಶಿಂಧೆ?

29/11/2024

ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿ ಆಯ್ಕೆಯ ಗೊಂದಲ ಪರಿಹರಿಸಲಾಗಿದೆ ಎಂದು ಮಹಾಯುತಿ ನಾಯಕರು ಹೇಳುತ್ತಿರುವಾಗಲೇ, ಏಕನಾಥ್ ಶಿಂಧೆ ಅನಿರೀಕ್ಷಿತವಾಗಿ ಮುಂಬೈಯಿಂದ ಹೊರಗೆ ಹೋಗಿದ್ದಾರೆ. ಇಅವರಿಲ್ಲದೇ ಶುಕ್ರವಾರ ನಡೆಯಬೇಕಿದ್ದ ಮಹಾಯುತಿ ಮೈತ್ರಿಕೂಟದ ನಿರ್ಣಾಯಕ ಸಭೆ ರದ್ದುಗೊಂಡಿದೆ. ಇದರಿಂದಾಗಿ ಹೊಸ ಮಹಾರಾಷ್ಟ್ರ ಸರ್ಕಾರದ ರಚನೆಯು ಮುಂದೂಡಲ್ಪಟ್ಟಿದೆ.

ಮುಖ್ಯಮಂತ್ರಿಯ ಆಯ್ಕೆ ಕುರಿತು ಬಿಜೆಪಿಯ ದೇವೇಂದ್ರ ಫಡ್ನವೀಸ್ ಮತ್ತು ಎನ್ಸಿಪಿ ನಾಯಕ ಅಜಿತ್ ಪವಾರ್ ರೊಂದಿಗೆ ಗೃಹ ಸಚಿವ ಅಮಿತ್ ಶಾ ಸಮ್ಮುಖದಲ್ಲಿ ಮಾತುಕತೆಯ ಬಳಿಕ ಶಿವಸೇನೆಯ ಏಕನಾಥ್ ಶಿಂಧೆ ಬೆಳಿಗ್ಗೆ ಮುಂಬೈಗೆ ವಾಪಾಸ್ಸಾಗಿದ್ದರು.

ದಿಲ್ಲಿಯಲ್ಲಿ ನಡೆದ ಸಭೆಯ ಬಗ್ಗೆ ಏಕನಾಥ್ ಶಿಂಧೆ ಧನಾತ್ಮಕ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರೂ, ಶಿಂಧೆ ಯವರ ಅನಿರೀಕ್ಷಿತ ಪ್ರಯಾಣದಿಂದ ಶುಕ್ರವಾರ ನಡೆಯಬೇಕಿದ್ದ ಅಧಿಕಾರ ಹಂಚಿಕೆಯ ಕುರಿತ ಮಾತುಕತೆಗಳು ಸ್ಥಗಿತಗೊಂಡಿದೆ.

ಏಕನಾಥ್ ಶಿಂಧೆ ಶನಿವಾರ ಮುಂಬೈಗೆ ಮರಳುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿದೆ. ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 132 ಸ್ಥಾನಗಳಲ್ಲಿ ಗೆಲುವನ್ನು ಸಾಧಿಸಿದೆ. ದೇವೇಂದ್ರ ಫಡ್ನವೀಸ್ ಅವರು ಮುಖ್ಯಮಂತ್ರಿಯಾಗುವುದು ಬಹುತೇಕ ಖಚಿತವಾಗಿದೆ. ಮಹಾಯುತಿಯ ಮೈತ್ರಿ ಪಕ್ಷಗಳಾದ ಶಿಂಧೆ ನೇತೃತ್ವದ ಶಿವಸೇನೆಗೆ ಮತ್ತು ಅಜಿತ್ ಪವಾರ್ ನೇತೃತ್ವದ ಎನ್ ಸಿಪಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲಾಗುತ್ತದೆ ಎಂದು ಹೇಳಲಾಗುತ್ತಿದೆ

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ