ಕುಲ್ಗಾಮ್: ಸಾಲದ ಹೊರೆಯಿಂದ ತಪ್ಪಿಸಿಕೊಳ್ಳಲು ತನ್ನ ಕಿಡ್ನಿಯನ್ನು ಮಾರಾಟ ಮಾಡಲು ಮುಂದಾಗಿರುವ ವಿಚಿತ್ರ ಘಟನೆ ಕಾಶ್ಮೀರದಲ್ಲಿ ನಡೆದಿದ್ದು, ಕುಲ್ಗಾಮ್ ನಿವಾಸಿ ಸಬ್ಜರ್ ಅಹ್ಮದ್ ಖಾನ್(28)ಎಂಬ ವ್ಯಕ್ತಿ ಇಂತಹದ್ದೊಂದು ಸಾಹಸಕ್ಕೆ ಕೈ ಹಾಕಿದ್ದಾರೆ. ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದು ಮಾಡಿದ ನಂತರ ನಿಷೇಧಾಜ್ಞೆ ಹೇರಲಾಗಿತ್ತು...
ರಾಜಸ್ಥಾನ: ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಇಬ್ಬರು ಯುವಕರ ಮೇಲೆ ನಿರ್ಮಾಣ ಹಂತದ ಕಟ್ಟಡದ ಸಿಮೆಂಟ್ ಕಂಬವೊಂದು ಕುಸಿದು ಬಿದ್ದ ಪರಿಣಾಮ ಓರ್ವ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ರಾಜಸ್ಥಾನ ಭರತ್ ಪುರದ ಸರಫಾ ಮಾರುಕಟ್ಟೆಯ ರಸ್ತೆಯಲ್ಲಿ ಇಬ್ಬರು ಯುವಕರು ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಸಿಮೆಂಟ್ ಕಂಬ ತಲೆಯ ಮೇಲೆ ಬ...
ಬೆಂಗಳೂರು: ಕಳೆದ ಒಂದು ವರ್ಷದಿಂದ ರಾಜ್ಯ ಸಚಿವ ಸಂಪುಟ ವಿಸ್ತರಣೆ ವಿಳಂಬವಾಗಿದೆ. ಬಿಜೆಪಿ ಹೈಕಮಾಂಡ್ ಒಂದೆಡೆ ಸಚಿವ ಸಂಪುಟ ವಿಸ್ತರಣೆಗೆ ಒಪ್ಪಿಗೆ ನೀಡುತ್ತಿಲ್ಲ. ಇನ್ನೊಂದೆಡೆ ಸಿಎಂ ಯಡಿಯೂರಪ್ಪ ವಿರುದ್ಧ ಶಾಸಕರು ಅಸಮಾಧಾನಗೊಂಡಿದ್ದಾರೆ. ಈ ಎಲ್ಲ ಬೆಳವಣಿಗೆಗಳ ನಡುವೆ ಸಿಎಂ ಯಡಿಯೂರಪ್ಪ ಬಿಜೆಪಿ ಶಾಸಕರಿಗೆ ಬಂಪರ್ ಗಿಫ್ಟ್ ನೀಡಿದ್ದಾರೆ. ...
ಹುಕ್ಕೇರಿ: ಶಾಸಕ ಸತೀಶ್ ಜಾರಕಿಹೊಳಿ ಆಪ್ತರು ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಅಪರಿಚಿತರಿಬ್ಬರು ಗುಂಡಿನ ದಾಳಿ ನಡೆಸಿದ ಘಟನೆ ಇಲ್ಲಿನ ಯಮಕನಮರಡಿಯಲ್ಲಿ ನಡೆದಿದ್ದು, ಕಾಂಗ್ರೆಸ್ ಕಾರ್ಯಕರ್ತರು ಗಾಯಗೊಂಡಿದ್ದಾರೆ. ಕಿರಣ್, ಭರಮಾ ದೂಪದಾಳೆ ಗುಂಡಿನ ದಾಳಿಗೊಳಗಾದವರಾಗಿದ್ದಾರೆ. ಈ ಪೈಕಿ ಭರಮಾ ದೂಪದಾಳೆ ಗಾಯಗೊಂಡಿದ್ದು, ಕಿರಣ್ ಪ್...
ಗಾಂಧಿನಗರ: ಚೂಡಿದಾರ, ಮಾಸ್ಕ್ ಧರಿಸಿ ಬ್ಯೂಟಿಪಾರ್ಲರ್ ಗೆ ಬಂದಿದ್ದ ವ್ಯಕ್ತಿಯೋರ್ವ ಬ್ಯೂಟಿಪಾರ್ಲರ್ ಮಾಲಕಿಗೆ ಕಿರುಕುಳ ನೀಡಿದ ಆತಂಕಕಾರಿ ಘಟನೆ ನಗರದಲ್ಲಿ ನಡೆದಿದೆ. ಚೂಡಿದಾರ ಹಾಗೂ ಮಾಸ್ಕ್ ಧರಿಸಿ ಮಹಿಳೆಯಂತೆ ಬ್ಯೂಟಿಪಾರ್ಲರ್ ಒಳಗೆ ಬಂದಿದ್ದ ಆತನನ್ನು ಮಹಿಳೆ ಎಂದು ತಿಳಿದು ಏನು ಮಾಡಬೇಕು ಎಂದು ಮಾಲಕಿ ಕೇಳಿದ್ದು, ಈ ವೇಳೆ ಐಬ್ರೋ ...
ಚೀನಾದ ಐತಿಹಾಸಿಕ ಯೋಜನೆ ಯಶಸ್ವಿಯಾಗಿದ್ದು, ಮಾನವ ರಹಿತ ಬಾಹ್ಯಾಕಾಶ ನೌಕೆ “ಚಾಂಗಿ-5” ಚಂದ್ರನ ಮೇಲಿನ ಶಿಲೆ, ಮಣ್ಣು ಸಂಗ್ರಹಿಸಿ ಆರ್ಬಿಟರ್ ಗೆ ರವಾನಿಸಿದ್ದು, ಚಂದ್ರನ ಅಂಗಳದ ಸ್ಯಾಂಪಲ್ ಹೊತ್ತು ಕಳೆದ ವಾರ ಭೂಮಿಯತ್ತ ಹೊರಟಿದ್ದ ಗಗನ ನೌಕೆ ಇದೀಗ ಭೂಮಿಗೆ ಸುರಕ್ಷಿತವಾಗಿ ಮರಳಿದೆ. ಬಾಹ್ಯಾಕಾಶ ನೌಕೆ ''ಚಾಂಗಿ-5'' ಮಂಗೋಲಿಯಾದಲ್ಲ...
ಬೆಂಗಳೂರು: ಮೃತ ಸರ್ಕಾರಿ ನೌಕರನ ವಿವಾಹಿತ ಪುತ್ರಿಯೂ ಅನುಕಂಪದ ಉದ್ಯೋಗಕ್ಕೆ ಅರ್ಹರಾಗಿರುತ್ತಾಳೆ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಮದುವೆಯಾಗಿದೆ ಎನ್ನುವ ಕಾರಣಕ್ಕೆ ಆಕೆಗೆ ನೀಡುವ ಉದ್ಯೋಗವನ್ನು ನಿರಾಕರಿಸಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದೆ. ವಿವಾಹಿತ ಪುತ್ರಿ ಅನುಕಂಪದ ಉದ್ಯೋಗ ಕೋರಲು ಅಡ್ಡಿಯಾಗಿದ್ದ ಕರ್ನಾಟಕ ನಾಗರ...
ಹತ್ರಾಸ್: ಇಂದಿನ ದಿನಗಳಲ್ಲಿ ಅಡುಗೆ ಮಾಡಲು ಖಾರದ ಪುಡಿ, ಅರಸಿನ ಪುಡಿ , ಕೊತ್ತಂಬರಿ ಹುಡಿಯನ್ನು ಹೆಚ್ಚಾಗಿ ಬಳಸುತ್ತಾರೆ. ಆದರೆ ಈ ಹುಡಿಗಳನ್ನು ಯಾವ ರೀತಿ ತಯಾರಿಸುತ್ತಾರೆ ಎಲ್ಲಿ ತಯಾರಿಸುತ್ತಾರೆ ಎಂದು ತಿಳಿದುಕೊಳ್ಳುವುದು ಅವಶ್ಯಕವಾಗಿದೆ. ಉತ್ತರಪ್ರದೇಶದ ಹತ್ರಾಸ್ ಜಿಲ್ಲೆಯ ನವೀಪುರ ಪ್ರದೇಶ ಪೋಲಿಸರು ಮಸಾಲೆಯ ಉತ್ಪಾದನೆ...
ಮುಜಾಫುರ್ ನಗರ: ಫುಟ್ ಪಾತ್ ನಲ್ಲಿ ಪುಟ್ಟ ಹುಡುಗನೊಬ್ಬ ನಾಯಿಯ ಜೊತೆಗೆ ಮಲಗಿದ್ದ ಫೋಟೋವೊಂದು ಸಾಮಾಜಿಕ ಜಾಲತಾಣಗಳದಲ್ಲಿ ವೈರಲ್ ಆಗಿದ್ದು, ಇದೀಗ ಬಾಲಕನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಉತ್ತರ ಪ್ರದೇಶದ ಮುಜಾಫರ್ ನಗರದಲ್ಲಿ ಪತ್ತೆಯಾಗಿರುವ ಈ ಹುಡುಗನಿಗೆ ತನ್ನ ತಂದೆ ಜೈಲು ಪಾಲಾಗಿದ್ದಾರೆ. ತಾಯಿ ತನ್ನನ್ನು ಬಿಟ್ಟು ಹೋಗಿದ್ದಾ...
ಬೆಂಗಳೂರು: ಕರೆಂಟ್ ಬಿಲ್, ನೀರಿನ ಬಿಲ್ ಪಾವತಿಸಲು ಸಾಧ್ಯವಾಗುತ್ತಿಲ್ಲ ಎಂಬ ಕಷ್ಟದಲ್ಲಿ ಜನರಿದ್ದರೆ, ಇತ್ತ ಬಿಬಿಎಂಪಿ ಜನವರಿ 1ರ ನಂತರ ಕಸಕ್ಕೂ ಶುಲ್ಕ ಹಾಕಲು ಮುಂದಾಗಿದ್ದು, ಕಾಸದಿಂದ ನಾಲ್ಕು ಕಾಸು ಸಂಪಾದನೆ ಮಾಡುವ ದುರ್ಗತಿಯನ್ನು ಬಿಬಿಎಂಪಿ ಪ್ರದರ್ಶಿಸಿದೆ. ಇನ್ನು ಬೆಂಗಳೂರಿನ ಪ್ರತಿ ಮನೆಯವರೂ ಕಸ ವಿಲೇವಾರಿಗಾಗಿ ತಿಂಗಳಿಗೆ 200...