ಚಂದ್ರನ ಅಂಗಳದ ಮರಳು ಹೊತ್ತು ತಂದ ಗಗನ ನೌಕೆ ಚಾಂಗಿ 5 | ಚೀನಾದ ಮಹತ್ವದ ಯೋಜನೆ ಯಶಸ್ವಿ
17/12/2020
ಚೀನಾದ ಐತಿಹಾಸಿಕ ಯೋಜನೆ ಯಶಸ್ವಿಯಾಗಿದ್ದು, ಮಾನವ ರಹಿತ ಬಾಹ್ಯಾಕಾಶ ನೌಕೆ “ಚಾಂಗಿ-5” ಚಂದ್ರನ ಮೇಲಿನ ಶಿಲೆ, ಮಣ್ಣು ಸಂಗ್ರಹಿಸಿ ಆರ್ಬಿಟರ್ ಗೆ ರವಾನಿಸಿದ್ದು, ಚಂದ್ರನ ಅಂಗಳದ ಸ್ಯಾಂಪಲ್ ಹೊತ್ತು ಕಳೆದ ವಾರ ಭೂಮಿಯತ್ತ ಹೊರಟಿದ್ದ ಗಗನ ನೌಕೆ ಇದೀಗ ಭೂಮಿಗೆ ಸುರಕ್ಷಿತವಾಗಿ ಮರಳಿದೆ.
ಬಾಹ್ಯಾಕಾಶ ನೌಕೆ ”ಚಾಂಗಿ-5” ಮಂಗೋಲಿಯಾದಲ್ಲಿ ಗುರುವಾರ ಬೆಳಗ್ಗೆ 1PM EST ದಂದು ಸುರಕ್ಷಿತವಾಗಿ ತಲುಪಿದೆ ಎಂದು ಚೀನಾದ ರಾಷ್ಟ್ರೀಯ ಬಾಹ್ಯಾಕಾಶ ಆಡಳಿತಾಧಿಕಾರಿ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ನೌಕೆ ಹೊತ್ತು ತಂದ ಚಂದ್ರನ ಶಿಲೆ ಸುಮಾರು 4.4 ಪೌಂಡ್ ಭಾರ ಇದೆ, ಅಗ್ನಿಪರ್ವತದ ಸ್ಯಾಂಪಲ್ (Mons Rumker) ಗಳನ್ನು ಹೊಂದಿದ್ದ ಸ್ಪೇಸ್ ಕ್ಯಾಪ್ಸುಲ್ ಅಟ್ಲಾಂಟಿಕ್ ಸಮುದ್ರಕ್ಕೂ 3,000 ಮೈಲಿಗಳ ದೂರವಿದ್ದಾಗ ಬಾಹ್ಯಾಕಾಶ ನೌಕೆಯಿಂದ ಬೇರ್ಪಟ್ಟು, 6 ಮೈಲಿ ಎತ್ತರವಿದ್ದಾಗ ಪ್ಯಾರಚ್ಯೂಟ್ ಮೂಲಕ ಭೂ ಸ್ಪರ್ಶ ಮಾಡಲಾಗಿದೆ.